೧ve ಚನ್ನಬಸವೇಶವಿಜಯಂ (ಕಾಂಡ 4) [ಅಧ್ಯಾಯ ನುಡಿದನು. ಇದನ್ನು ಕೇಳಿ ನೃಸಿಹನು ಘುಡುಘುಡಿಸಿ, ಎದ್ದು, ಗರ್ಜಿ ನಿ, ಅವನಾರು ಪರಶಿವನೆಂಬುವನು ? ನನ್ನನ್ನು ಕರೆಸುವುದಕ್ಕೆ ಅವನಿಗೆ ಅಂಥ ದೊಡ್ಡ ಅಧಿಕಾರವೇನು ? ನನ್ನ ಬಳಿಗೆ ಬಂದು, ಸಮನಾಗಿ ನಿಂ ತು ಮಾತನಾಡಿಸುವುದಕ್ಕೆ ನಿನಾರು ? ಯಮನ ಕಡೆಯವರು ನಿನ್ನನ್ನು ಕರೆದುಕೊಂಡು ಹೋಗುವುದಕ್ಕೆ ಬಂದಿರಬಹುದು ! ಅದುಕಾರಣ, ಪ್ರ ಣವನ್ನು ಕೊಟ್ಟು ಹೋಗುವುದಕ್ಕೆ ನೀನು ಇಲ್ಲಿಗೆ ಬಂದಿರುವಂತಿದೆ. ನ ಮೈ ಶೌಗ್ಯವನ್ನು ಕೇಳಿ ಕೇಳಿಯೂ ನಮ್ಮ ಮುಂದೆ ಬಂದು ನಿಂತುಕೊ ಳ್ಳಬಹುದೆ ? ೨” ಎಂದು ಕೊಬ್ಬಿದ ಮಾತನ್ನಾಡಿದನು. ವೀರೇಶನು ನ ಕು, ಕೋಪವನ್ನು ತಾಳಿ, “ ಎಲೋ ವಿಷ್ಣುವೆ ! ನಿನಗೆ ಜನ್ಮಾಂತರ ವುಂಟಾಗಿರುವುದರಿಂದ ಗುಣಾಂತರವೂ ಉಂಟಾಗಿದೆ; ಅದು ನಿನ್ನ ತಪ್ಪಲ್ಲ; ತಾಮಸಪ್ರಕೃತಿಯ ದೈತ್ಯನ ರಕ್ತವನ್ನು ಕುಡಿದುದರಿಂದ ಮದವೇರಿದ .ನೀನೂ ತಾವುಸಾತ್ಮಕನಾಗಿ ಪೂರ್ವಸ್ಮರಣೆಯಿಲ್ಲದೆ ಬಾಯ್ದೆ ಬಂದಂತೆ ಹರಟುತ್ತಿರುವೆ; ನಿನಗೆ ಜ್ಞಾನೋದಯವಾಗುವುದಕ್ಕಾಗಿ ಎಚ್ಚರಿಸುತ್ತೆ ನೆ ಕೆಳು- C ಜಗತ್ತಿಗೆಲ್ಲ ಸೃಷ್ಟಿಕರ್ತನು ಬ್ರಹ್ಮನು; ನಿನ್ನ ಮೂಲ ಜನ್ಮದ ಕೆಲಸವು ರಕ್ಷಣ ಕಾಗ್ಯ; ನೀನೇ ಹರಿ; ನಿನ್ನನ್ನೂ ಈ ಜಗತ್ತ ನ್ಯೂ, ಸೃಷ್ಟಿಸಿ ಸಲಹಿ ಕೊಲ್ಲುವುದಕ್ಕೆ ಮುಖ್ಯಾಧಿಪತಿಯಾದವನು ರುದ್ರನು; ಆತನ ಮಗನೇ ನಾನು; ಎಂದು ನುಡಿಯಲು, ನೃಸಿಹನು ಅಹ ಹಾ ! ಪರಮಾಶ್ಚರ ! ಇದೀಗ ಸರನಕೌತುಕ ! ಬೂದಿಬಡಕ ಗೊರವ ಅರೆಗಂಡುಸು ಆದವನೊಬ್ಬನನ್ನು ಜಗತ್ತಿಗೇ ದೊಡ್ಡವನೆಂದು ಹೇಳಿ, ನನ್ನನ್ನು ಬೆದರಿಸುವುದಕ್ಕೆ ಬಂದಿರುವ ಈ ಎದೆಗಾರನು ಅವನ ಮಗನಂತೆ ! ನಮ್ಮನ್ನು ಕರೆದುಕೊಂಡು ಹೋಗುತ್ತಾನಂತೆ : ನೋಡಿ ದಿರಾ ? ಎಂದು ತನ್ನ ಮಗ್ಗುಲಲ್ಲಿದ್ದವರೊಡನೆ ಪರಿಹಾಸಮಾಡಿ, ನುಡಿದು, ಕೈ ಹೊದ್ದು ನಕ್ಕು, ವಿರೇಶನನ್ನ ಕುರಿತು ಎಲಾ ! ತೂತಿನಲ್ಲಿ ದೊಡ್ಡವನೆಂದು ನೀನು ಹೇಳಿಕೊಂಡರೆ ಫಲವೇನು ? ಅದು ಹಾಗಿರಲಿ; ಇದೊ ನೋಡು; ನಾವು ಜಗತ್ತಿನ ಉಳುಹುವುದಕ್ಕೂ ಹಾಳಾಡುವು ದಕ್ಕೂ ಹೊಸದಾಗಿ ಸೃಷ್ಟಿಸುವುದಕ್ಕೂ ಶಕ್ತರು; ಇಂದ್ರ ಬ್ರಹ್ಮ ರು ದ್ರಾದಿಗಳೆಲ್ಲರೂ ನನ್ನ ಆಜ್ಞೆಗಧೀನರಾಗಿ ಬಾಳುವರು; ಕೇಳಿದವರಿಗೆ 1) M.
ಪುಟ:ಚೆನ್ನ ಬಸವೇಶವಿಜಯಂ.djvu/೧೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.