ರ್h ಚನ್ನಬಸವೇಕವಿಜಯಂ (ಕಾಂಡ ೩) [ಅಧ್ಯಾಯ ನಯಿಸಿದನು. ಈ ಕಾಗ್ನವು ತನಗೆ ಪ್ರಯೋಜಕವಾದುದೆಂದು ಪಾರ ತಿಯು ಮನಸ್ಸಿನಲ್ಲಿ ಭಾವಿಸಿಕೊಂಡು, “ ಒಳ್ಳೇದು ನನ್ನ, ಪುಪ್ಪವಿಮಾ ನದ ಮರೆಯಲ್ಲಿ ಅವಿತುಕೊಂಡು ನೀನು ಒಳಗೆ ಬಾ, ದೇವತೆಗಳ ಮಾತಿ ಗಾಗಿ ಬಂದವನಾದುದರಿಂದ ಅದನ್ನು ಹೇಗಾದರೂ ಮಾಡಿ ನೀನು ನೆರವೇ ರಿಸಲೇ ಬೇಕು; ಒಂದುವೇಳೆ ಈ ಪ್ರಯತ್ನದಲ್ಲಿ ನಿನಗೆ ಅಪಾಯವುಂಟಾ ಗುವಂತಿದ್ದರೂ ಅದಕ್ಕಾಗಿ ಚಿಂತಿಸಬೇಡ, ನನ್ನನ್ನು ನಂಬಿ ಬಾ ?” ಎಂ ದು ಹೇಳಿ ಸಮಾಧಾನಪಡಿಸಿ, ಧೈದ್ಧಗೊಟ್ಟು, ಬಳಕ್ಕೆ ಕರೆದುಕೊಂಡು ಹೋದಳು. ಕಾಮನು ದೂರದಲ್ಲೇ ಶಿವನನ್ನು ಕಂಡು ನಡುಗಿಹೋದನು. ಪತಿಯು ಶಿವನ ಪಾದಪೂಜೆಯಲ್ಲಿ ತೊಡಗಿದಳು. ಆ ದೇವಿಯ ಮರೆಯಲ್ಲಿ ಮನ್ಮಥನು ನಿಂತು, ತನ್ನ ಬಿಲ್ಲಿನಲ್ಲಿ ಉನ್ನದನ, ಮದನ, ಮೋ ಹನ, ವಶೀಕರಣ, ಸಂತಸನ, ಎಂಬ ಮಹಾಪಂಚಬಾಣಗಳನ್ನು ಒಂ ದೊಂದಾಗಿ ಜೋಡಿಸಿ ಪ್ರಯೋಗಿಸಿದನು. ಅದು ಶಿವನನ್ನು ಸೋಂಕಲು ಸಮರ್ಥವಾಗಲಿಲ್ಲ. ಆಗ ಕಾಮನು ೫ ಬಾಣಗಳನ್ನೂ ಒಂದೇ ಆವೃತ್ತಿ ಜೋಡಿಸಿ ಕಲ್ಲಾಂತವಾಗಿ ಸೆಳೆದು ಮಹಾಗರ್ಜನೆಯನ್ನು ಮಾಡಿ ದಕ್ಷಿಣಾ ವರಿಯಮೇಲೆ ಪ್ರಯೋಗಿಸಿದನು ಅವುಗಳ ಏಟಿನಿಂದ ಶಿವನು ಬಹಿ ರ್ಮುಖವಾದನು. ತನ್ನ ಅಂತಗ್ಗಿತವನ್ನು ಕೆಡಿಸಿದವನಾರೆಂದು ಕೋಸ ಗೊಂಡು ಕಣ್ಣೆರೆದನು. ಕೋಟಿ ನಿಡಿಲಿನ ತೇಜಸ್ಸಿನಂತೆ ಹೊಳೆದು ಹೊರ ಸೂಸಿದ ಅಗ್ನಿನೇತ್ರದ ಜ್ವಾಲೆಯು ಇದಿರಿನಲ್ಲಿದ್ದ ಮನ್ಮಥನಮೇಲೆ ಭುಗಿ ಲು ಭುಗಿಲೆಂದು ಪ್ರಸರಿಸಿದ ಕೂಡಲೇ ಕಾಲ್ಬಚ್ಚಿಗೆ ಸಿಕ್ಕಿದ ತರಗೆಲೆ ಯಂತೆ ಕಾನೂನು ಪುರುಪುರನೆ ಸುಟ್ಟು ಬೂದಿಯಾದನು. ಶಿವನು ಆ ಬೂದಿಯನ್ನೆಲ್ಲ ತೆಗೆದು ದೇಹಕ್ಕೆ ತೊಡೆದುಕೊಂಡನು. ಮಗ್ಗುಲಲ್ಲಿ ನಿಂತಿ ಪಾರತಿಯನ್ನು ನೋಡಿದರೂ ಮಾತನಾಡಿಸದೆ ಬಯಲಾದನು. ಹೊರ ಗೆ ನಿಂತಿದ್ದ ರತಿಯು, ತನ್ನ ಪತಿಯು ಶಿವನ ಕೋಪಾಗ್ನಿಯಿಂದ ಸುಟ್ಟು ಹೊದನೆಂಬ ವಾರೆಯನ್ನು ಕೇಳಿ, ಬಾಲ್ಬಡಿದುಕೊಳ್ಳುತ್ತ ಗೊಳಿಟ್ಟು, ಒಳಗೆ ಬಂದು, ತನ್ನ ಗಂಡನು ಸುಟ್ಟು ಹೋದ ಸ್ಥಲದಲ್ಲಿ ಬಿದ್ದು ಹೊರ ೪ಾಡುತ್ತಿದ್ದಳು - “ ಅಯ್ಯೋ ! ನನ್ನ ಕಾಮಧೇನುವನ್ನು ಹೊಡೆದು ಹಾಕಿದರೇ ? ನನ್ನ ಕಲ್ಪವೃಕ್ಷವನ್ನು ಕಡಿದುಹಾಕಿದರೇ ! ನನ್ನ ಸೌಂದ
ಪುಟ:ಚೆನ್ನ ಬಸವೇಶವಿಜಯಂ.djvu/೨೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.