ಕಮದಹನವು hH "ರಸದ ಕೆರೆಯನ್ನು ಒಡೆದುಹಾಕಿದರೇ ! ನನ್ನ ಮ.ಕ್ವಾ ಫಲವನ್ನು ಬೆಂಕಿಯಲ್ಲಿ ಸುಟ್ಟು ಹಾಕಿದರೇ ! ನನ್ನ ಶೃಂಗಾರದ ಒಳ್ಳಿಯನ್ನು ಕುಡಿಗ ಡಿದು ಹಾಳ್ಳಾಡಿದರೇ ! ಅಯ್ಯೋ ! ನನಗಿನ್ನು ಗತಿಯಾರು ? ದುರ್ಬೊ ಧೆಯನ್ನು ಮಾಡಿ ನನ್ನ ಗಂಡನನ್ನು ಕಳುಹಿಸಿ ಸುರಿಸಿದ ದೇವತೆಗಳಿಗೆ ಈ ನನ್ನ ಹೊಟ್ಟೆಯ ಕಿಚ್ಚು ಹೋಗಿ ತಟ್ಟಬಾರದೆ ? ಅಯ್ಯೋ ! ನನ್ನ ಪ್ರಾಣಕಾಂತನೇ ! ನನ್ನ ಸೊಬಗಿನ ಮನೆಯೇ ! ನನ್ನ ವಿಲಾಸದ ನಿಧಿ ಯೇ ! ನನ್ನ ಚಿನ್ನವೆ ! ನನ್ನ ರನ್ನವೆ ! ನನ್ನ ಭಾಗ್ಯದ ಗಣಿಯೆ ! ನಿನ್ನನ್ನಗಲಿ ನಾನಿನ್ನು ಬದುಕಬಹುದೆ ? ಅಯ್ಯೋ ! ನಿನ್ನ ಸುಕುಮಾರ ಶರೀರವು ಕಿಚ್ಚಿಗೀಡಾಗಒಹುದೆ ? ನಿನ್ನ ಪುಷ್ಪಬಾಣವನ್ನೂ, ಗಿಳಿಗುದು ರೆಯನ್ನೂ ಎಲ್ಲಿ ಕಳುಹಿದೆ ? ಚಂದ್ರನನ್ನು ಏನು ಮಾಡಿದೆ? ತಂಗಾಳಿಗೂ ವಸಂತನಿಗೂ ಯಾವ ಕೆಲಸವನ್ನು ನೇಮಿಸಿದೆ ? ನಿನ್ನಪಕ್ಷಿ ಸೇನೆಗೆಲ್ಲ ಏನೆಂದು ಸಮಾಧಾನಪಡಿಸಿಗೆ ? ಎಂದು ಮೊದಲಾಗಿ ಹಂಬಲಿಸುತ್ತಿದ್ದ ಳು. ಇದನ್ನು ನೋಡಿ ಕಾಮನ ಚತುರಂಗಸೈನ್ಯವೂ ಕಣ್ಣೀರ್ಗರೆದಿತು. ರತಿಯು ಅತ್ತೂ ಅತ್ತು ಮೂರ್ಛಗೊಂಡು, ಚೇತರಿಸಿಕೊಂಡದ್ದು ತಲೆ ಗೆದರಿ, ಕೈ ಚಾಚಿ, ಅಯ್ಯೋ ದೇವತೆಗಳು ! ನನ್ನ ಗಂಡನ ಪ್ರಾಣ ವನ್ನು ನೀಗಿಸಿದ ನೀವು ಬದುಕಿಸಬಾಗದೆ ? ಲೋಕರಕ್ಷಕನಾದ ಎಲೆ ಮಾವನೇ (ವಿಷ್ಣುವೇ) ನಿನ್ನ ಸುತನಾದ ನನ್ನ ಪ್ರಿಯನನ್ನು ಉದ್ಧರಿಸ ಬಾರದೆ ? ನಿನ್ನ ಸೊಸೆಯಾದ ನನ್ನ ವೈಧವ್ಯದುಃಖವನ್ನು ಹೋಗಲಾಡಿಸಿ ಕಾಪಾಡದಿದ್ದರೆ ನಿನಗೆ ಲೋಕರಕ್ಷಕನೆಂಬ ಹೆಸರೇತಕ್ಕೆ ? ಅಯ್ಯೋ ! ಮರತಿಯೆ ! ನಿನ್ನ ನಂಬುಗೆಯ ಮೇಲೆ ಒಳಗೆ ಒಂದು ಪ್ರಾಣವನ್ನು ಕಳೆದುಕೊಂಡ ನನ್ನ ಗಂಡನನ್ನು ನೀನಾದರೂ ಬದುಕಿಸಬಾರದೆ ? ೨೨ ಎಂದು ಬರಲಿದಳು. ಸಾರತಿಯು ರತಿಯ ಮಹಾಶೋಕವನ್ನು ನೋಡಿ ಕರಗಿಹೋದಳು. ಈ ಪಶ್ಚಾತ್ತಾಪದ ಜತೆಗೆ ಆ ದೇವಿಯ ಮನಸ್ಸಿನಲ್ಲಿ ಇನ್ನೂ ಬೇರೆ ಬೇರೆ ಚಿಂತೆಗಳು ಕಾಲಿಕ್ಕಿದುವು. ತಾನು ತಾಯ್ತಂದೆಗೆ ಳನ್ನು ಬಿಟ್ಟು ಬಂದುದು ೧, ಮನ್ಮಥನಿಗೆ ನಂಬುಗೆಗೊಟ್ಟು ಕರೆದು ಕೊಂಡು ಹೋದುದು ೨, ಶಿವನು ತನ್ನನ್ನು ನೋಡಿದರೂ ಮಾತನಾಡಿಸ ದುದು , ರತಿಯ ಗೋಳನ್ನು ನೋಡುವ ಸಂಕಟವು ೪, ಇದರಮೇಲೆ
ಪುಟ:ಚೆನ್ನ ಬಸವೇಶವಿಜಯಂ.djvu/೨೦೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.