ಗಿರಿಜಾ ವಿವಾಹಪ್ರಯತ್ನವು ೧೫೬ ಚಿತವಾದ ಸ್ಥಲವೊಂದರಲ್ಲಿ ಪದ್ಮಾಸನಾಸೀನೆಯಾಗಿ ಕುಳಿತು, ಶಿವಾಯತ್ತ ಚಿತ್ತದಿಂದ 'ತಪೋಮಗ್ನಳಾದಳು. ಕಡುಬೇಸಗೆಯಲ್ಲಿ ಪರತಶಿಖರಾಗ್ರ ದ ಮೇಲೆ ಕುಳಿತು ಸೂರಾತಪಕ್ಕೆ ಕಂದದೆಯೂ, ಮಳೆಗಾಲದಲ್ಲಿ ಆಲ ದಮರದ ಕೆಳಗೆ ಕುಳಿತು ಮಳೆಯ ಸುರಿವಿಕೆಗೆ ಅಂಜದೆಯೂ, ಹಿಮಗಾ ಲದಲ್ಲಿ ಸರೋವರದ ದಡದಮೇಲೆ ಕುಳಿತು ಚಳಿಗೆ ಸಡೆಯದೆಯೂ, ನಿಗ್ಧ ಲತಪಸ್ಸಿನಲ್ಲಿರುತ್ತಿದ್ದಳು. ಕೆಲವುಕಾಲ ಕ್ಷೀರವನ್ನೂ, ಕೆಲವುಕಾಲ ಗೆ ಡ್ಡೆ ಗೆಣಸುಗಳನ್ನೂ, ಕೆಲವುಕಾಲ ತರಗೆಲೆಗಳನ್ನೂ, ಬಳಿಕ ನೀರನ್ನೂ ವಾಯುವನ್ನೂ ಆಹಾರವಾಗಿ ತೆಗೆದುಕೊಳ್ಳುತ್ತಿದ್ದು, ಕಡೆಕಡೆಗೆ ಆಹಾ ರದ ಹಂಬಲನ್ನೇ ಬಿಟ್ಟು, ಶಿವಪಾದಧ್ಯಾನಾಮೃತವನ್ನೇ ಸವಿಯುತ್ತಲಿ ದ್ದಳು. ಸಂಪೂರ್ಣವಾಗಿ ಆಹಾರವನ್ನೇ ತ್ಯಜಿಸಿದ್ದ ರೂ ಮಹಾದೇವಿಯ ಮುಖದಲ್ಲಿ ದೇಹದಲ್ಲಿ ಕಾಂತಿಯ ಲೇಶಮಾತ್ರವೂ ಕುಗ್ಗಲಿಲ್ಲ, ಸೂ ಬಗು ಸೊರಗಲಿಲ್ಲ, ಸಂದವು ಸುಗ್ಗಲಿಲ್ಲ; ತಪೋಜ್ವಾಲೆಯ ತೇಜ ಸ್ಪು ದೇಹವನ್ನೆಲ್ಲ ಆವರಿಸಿ; ಮತ್ತಷ್ಟು ಶೋಭಾಯಮಾನಗೊಳಿಸಿತು. ದೇವದಾನವಕಿನ್ನರಕಿಂಪುರುಷಾದಿಗಳೆಲ್ಲರೂ ಪಾರ್ವತಿಯ ತರೋತಿಶಯ ವನ್ನು ಕಂಡು ಆಶ್ಚ ಪಟ್ಟು, ಭಕ್ತಿಯಿಂದ ಆಕಾಶದಲ್ಲೇ ನಮಸ್ಕರಿಸು ತಿದ್ದರು. ದೇವಿಯ ಮಹಾತಪೋಜ್ವಾಲೆಯು ಆ ವನಾಂತವನ್ನೆಲ್ಲ ವ್ಯಾ ವಿನಿ, ಸೂಮಂಡಲದವರೆಗೂ ಹಬ್ಬಿತು. ಈ ಜ್ವಾಲೆಯಿಂದ ಜಗತ್ತೆಲ್ಲ ತತ್ತರಿಸಿತು. ಶಿವನು ಪಾರತಿಯ ಉಗ್ರತಪಕ್ಖರಣವನ್ನು ತಿಳಿದು, ಮಹಾ ಯತೀಶರನ ರೂಪನ್ನು ಧರಿಸಿ, ಆಕೆಯು ಕುಳಿತಿರುವ ಪರ್ಣಶಾಲೆಯ ಬಳಿಗೆ ಬಂದನು. ಸಖಿಯರು ಥಟ್ಟನೆದ್ದು ಯತೀಶನಿಗೆ ನಮಸ್ಕರಿಸಿ, ಉಚಿತಾಸನದಲ್ಲಿ ಕುಳ್ಳಿರಿಸಿ, ಅರ್ಘಮಾದ್ಯಾಚಮನಗಳನ್ನು ಕೊಟ್ಟು, ಗೆಡ್ಡೆ ಗೆಣಸು ಹಣ್ಣುಗಳನ್ನು ಮುಂದಿರಿಸಿ, ಭಕ್ತಿಯಿಂದ ಕೈಮುಗಿದು, < ಇವುಗಳನ್ನು ಸೇವಿಸಿ ಬಹುದೂರದಿಂದ ಬಳಲಿ ಬಂದಿರುವ ದಣಿವನ್ನು ಪರಿಹರಿಸಿಕೊಳ್ಳಿರಿ ” ಎಂದು ಬಿನ್ನೈಸಿದರು, ಕಪಟಿಯತಿಯಾದರೂನಾವು ಹಣ್ಣನ್ನು ತಿನ್ನುತ್ತೇವೆ, ಅದು ಹಾಗಿರಲಿ; ಈ ಸುಂದರಿಯು ಆರ ಇದಲ್ಲಿ ಕುಳಿತು ಇಷ್ಟು ಘೋರತಪಸ್ಸನ್ನಾಚರಿಸುವುದಕ್ಕೆ ಕಾರಣವೇನು? ಎಂದು ಕೇಳಿದನು, ಸಖಿಯರಾದರೋ- ದಾರಿಕಾರನಾಗಿ ಬಂದ ನೀನು
ಪುಟ:ಚೆನ್ನ ಬಸವೇಶವಿಜಯಂ.djvu/೨೦೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.