ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿರಿಜವಿವಾಹಪ್ರಯತ್ನವು

ವಿಲಸಿತನಾಗಿ ನಗೆಗಣ್ಣಿನಿಂದ ಪಾರ್ವತಿಯನ್ನು ನೋಡಿದನು. ಗಿರಿಜೆಯು ಥಟ್ಟನೆದ್ದು ದೀರ್ಘದಂಡವಾಗಿ ನಮಸ್ಕರಿಸಿ, ಎದ್ದು ಕೈಮುಗಿದು ನಿಂತು, ಜಯಜಯ ಮಹಾದೇವ ! ಜಯಜಯ ಜಗನ್ನಾಥ ! ಜಯಜಯ ಕೈ ಪಾಪೂರ, ಜಯಜಯ ಶುಭಾಕರ ! ಜಯಭಕ್ಕೆ ಮಂದಾರ : ಜಯ ಪುಣ್ಣಮಯಚರಣ ! ಎಂದು ಮೊದಲಾಗಿ ಸ್ತುತಿಸಿ, ಬಡವನಿಗೆ ಭಾಗ್ಯ ವೂ, ಕುರುಡನಿಗೆ ಕಣ್ಣೂ, ಹೆಳವನಿಗೆ ಕಾಲೂ, ಬಂದಂತೆ ತನಗೆ ಶಿವದ ರ್ಶನವಾಗಲು ಹಿಗ್ಗಿ, ಮತ್ತೆ ಮತ್ತೆ ಮಣಿದಳು. ಶಿವನಾದರೂ ಅತ್ಯಂತ ಕೃಪೆಗೊಂಡು, ತನ್ನ ದಿವ್ಯ ಹಸ್ತದಿಂದ ಪಾರ್ವತಿಯ ಶಿರವನ್ನು ಹಿಡಿದೆ ತಿ, ಎಳೆ ಜಗನ್ನು ತೆಯೆ ! ನಿನ್ನ ಮನೋನಿಶ್ಚಯವನ್ನು ಪರೀಕ್ಷಿಸುವು ದಕ್ಕಾಗಿಯೇ ನಾವು ಇಷ್ಟು ದಿವಸ ತಡಮಾಡಿದೆವು ; ಇನ್ನು ಮುಂದೆ ನಿನ್ನಿ ಸ್ಮ ಪ್ರಕಾರ ನನ್ನ ಶರೀರದಲ್ಲಿ ಅರ್ಧಭಾಗವನ್ನೇ ನಿನ್ನದನ್ನಾಗಿ ಮಾಡಿಕೊಂ ಡು, ಒಡವೆರೆದು ಬಾಳುತ್ತ ಜಗತ್ತನ್ನು ರಕ್ಷಿಸಿಕೊಂಡಿರು ; ಎಂದು ವರ ವಯಲು, ಪಾರತಿಯು ಕೃತಜ್ಞತೆಯಿಂದ ನಮಸ್ಕರಿಸಿ, “ ಸ್ವಾ ವಿಾ ! ಮತ್ತೊಂದು ನನ್ನ ಪ್ರಾರ್ಥನೆಯಿರುವುದು ಮನ್ಮಥನು ನನಗಾಗಿ ತನ್ನ ಶರೀರವನ್ನು ನಿಮಗೆ ಅರ್ಪಿಸಿದನು ; ಅಂತಹ ಪರೋಪಕಾರದ ಪು ಇವಾದರೂ ಈಗ ಅವನನ್ನು ಕಾಯಬಾರದೆ ? ಅದುಕಾರಣ, ತಾವು ಮೊದಲು ಆ ಮನ್ಮಥನ ಪ್ರಾಣದಾನವನ್ನು ಮಾಡಿ, ಬಳಿಕ ನನ್ನನ್ನು ರ ಕ್ಷಿಸುವುದ ಕ್ಕಾಗಿ ವಿಷ್ಟು ಬ್ರಷ್ಟೇ೦ದ್ರಾದಿಗಳೊಡನೆ ನೀವು ಕೂಡಿ, ಗಿರಿ ರಾಜನ ಅರಮನೆಗೆ ಬಂದು, ಮಹೋತ್ಸವದಿಂದ ನನ್ನ ಪಾಣಿಗ್ರಹಣವಂ ಮಾಡಬೇಕು ?” ಎಂದು ಪ್ರಾರ್ಥಿಸಿದಳು, ಶಿವನಾದರೋ- ದೇವಿಯೆ ! ಸ ರೇಶರನಾಜ್ಞೆಯು ಲೋಕದಲ್ಲಿ ಹುಸಿಯಾಗಬಾರದು, ಅದನ್ನು ಕಾ ಶೃತಗೊಳಿಸಬೇಕು. ಹಾಗಲ್ಲದೆ ವಿರೋಧಾಭರಣವನ್ನು ಮಾಡಿದವರು ಅಗ್ನಿಗೆ ಆಹುತಿಯೇ ಆಗಬೇಕು. ಹೀಗಿರುವಲ್ಲಿ ವಿರೋಧಾಚರಣೆ ಯಿಂದ ಸುಟ್ಟು ಹೋದ ಮನ್ಮಥನನ್ನು ಮತ್ತೆ ಉಳಿಸಬಹುದೆ ? ಆ ದರೂ ನಿನ್ನ ಪ್ರಾರ್ಥನೆಯನ್ನು ನೆರವೇರಿಸದೆ ಇರುವುದಕ್ಕಿಲ್ಲವಾದುದರಿo ದಲೂ, ನನ್ನ ಆಜ್ಞೆಯು ಕೆಡದಂತೆ ಮೂಡಬೇಕಾಗಿರುವುದರಿಂದ ಲೂ, ಮನ್ಮಥನು ರತಿಯ ವಿಷಯದಲ್ಲಿ ಮಾತ್ರ ಸಶರೀರನಾಗಿರುವಂ