• ಕಥಾರಂಭವು. ಇುದಾಗಿರುವುದು, ಇದರಲ್ಲಿರುವ ಏಳು ದೀಪಗಳನ್ನು & ಸಮುದ್ರಗ ಳು ಚಕ್ರಾಕಾರವಾಗಿ ಆವರಿಸಿಕೊಂಡಿರುವುವು, ಅವುಗಳಲ್ಲಿ ಲವಣಸನು ದವು ಈ ಜಂಬೂದ್ವೀಪವನ್ನು ಸುತ್ತಿಕೊಂಡಿರುವುದು, ಆ ಸಮುದ್ರವಾ ದರೋ, ಮಿಾನು, ಮೊಸಳ, ಹಾವು, ಆಮೆ, ಏಡಿ ಮೊದಲಾದ ನಾನಾಜಲಚ ರಪ್ರಾಣಿಗಳಿಂದಲೂ, ಮುತ್ತು ಹವಳ ಮೊದಲಾದ ನಾನಾರತ್ನಗಳಿಂದಲೂ ಸುಳಿ,ತೆರೆನೊರೆಗಳಿಂದಲೂ, ದೋಣಿಗಳಿಂದಲೂ ಹಡಗುಗಳಿಂದಲೂ ಕೂ ಡಿ ಅಸಾರವಾಗಿ ಮೆರೆಯುತ್ತಿರುವುದು. ಆಸಮುದ್ರದ ನೀರು ಒಂದೊಂದುವೇ ೪ ಹೆಜ್ಜೆ ಉಬ್ಬುತ್ತಲೂ ಒಂದೊಂದುವೇಳೆ ತ ಸರಿಯುತ್ತಲೂ ಇರುವು ದನ್ನು ನೋಡಿದರೆ, “ ತನಗೆ ಮಹಾವಿಷ್ಣುವೇ ಅಳಿಯನು, ಬ್ರಹ್ಮನೇ ಮ ಮೃಗನು, ಲಕ್ಷ್ಮಿಯೇ ಮಗಳು, ದೇವಗಂಗೆಯೇ ಪತ್ನಿಯು, ದೇವತೆಗ ಳನ್ನು ತನ್ನ ಅಮೃತದಿಂದ ಸಲಹುವ ಚಂದ್ರನೇ ತನ್ನ ಮಗನು, ದೇವೇಂ ದ್ರನಿಗೆ ಕಾಮಧೇನು ಕಲ್ಪವೃಕ್ಷದಿಸಂಪತ್ತನ್ನು ಕೊಟ್ಟವನೇ ನಾನು, ಭಾರತಿಯ ತಮ್ಮನಾದ ಮೈನಾಕನು ಮರೆಹುಗಲು ಸಲಹಿದವನೇ ನಾನು, ಅದಕಾರಣ ನನಗೆ ಸಮಾನರಾರು? ೨2ಎಂಬ ಹಮ್ಮಿನಿಂದ ಸಮುದ್ರವು ಈ ಬ್ಲ್ಯುತ್ತಿರುವಂತೆ, ನನ್ನನ್ನು ಅಗಸ್ಯ ಮಹರ್ಮಿಯು ಕುಡಿದುಬಿಟ್ಟನು, ಬಡಬಾಗ್ನಿಯು ನನ್ನನ್ನು ಸದಾ ಹೀರುತ್ತಿರುವುದು,ನಾನು ಭಂಗವನ್ನು (ಹಾ ನಿ-ತೆರೆ) ಹೊಂದಿರುವೆನು ಎಂಬ ದುಃಖದಿಂದ ಕುಗ್ಗುತ್ತಿರುವಂತೆಯ ತೋರುತ್ತಿರುವುದು, ಇಂತಹ ಸಮುದ್ರವು ಸುತ್ತುವರಿದಿರುವ ಜಂಬೂ ದೀಪವ,ಕಾತಿ ಕೆದಾರ ಹಂಪೆ ಗಯೆ ಶ್ರೀಶೈಲ ಮೊದಲಾದ ನಾನಾಪುಣ್ಯ ಕ್ಷೇತ್ರಗಳನ್ನು ಪಡೆದು, ಧಾರ್ಥಕಾಮಮೋಕ್ಷ ಸಂಪಾದನಾರ್ಥವಾಗಿ ದುರ್ಧರತಪಸ್ಸನ್ನಾಚರಿಸುತ್ತಿರುವ ಮುಸಿಗಳಿಂದಲೂ ದೇವತೆಗಳಿಂದಲೂ ಕೂಡಿ, ಅನೇಕ ದೇಶಗಳಿಂದಲೂ, ನದೀವನಪರತಾವಳಿಗಳಿಂದಲೂ, ಮ ನೋಹರವಾಗಿ ತೋರುತ್ತಿರುವುದು. ಆ ದೀಪದ ಮಧ್ಯದಲ್ಲಿ ಈಶ್ವರ ವಾಹನಾರ್ಥವಾಗಿ ಬ್ರಹ್ಮ ನಿಂದ ನಿರಿ ನಿ ನಿದ್ದೆ ಮಾಡಲ್ಪಟ್ಟಿರುವ ಸಾಲಂಕಾ ರಮಹಾಗಜದಂತೆ ಮೆರುಪತವು ಶೋಭಿಸುತ್ತಿರುವುದು, ಆ ಪರತ ದ ಮೇಲಣ ಒಂದೊಂದು ಶಿಖರಗಳಲ್ಲಿ ವಿಷ್ಣು ಬ್ರಹ್ಂದ್ರಾದಿದೇವತೆಗಳ ಪಟ್ಟಣಗಳು ರಂಜಿಸುತ್ತಿರುವುವು, ದಕ್ಷಿಣಭಾಗದ ಶಿಖರದಲ್ಲಿ ಸಕಲ ದೇ
ಪುಟ:ಚೆನ್ನ ಬಸವೇಶವಿಜಯಂ.djvu/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.