೧೦] ಗಿರಿಜಾಕಲ್ಯಾಣವು c೧೧ ಗ ಅವರೀರರೂ ಪಾರತಿಯ ಪಾದಕ್ಕೆ ನಮಸ್ಕರಿಸಿ, “ ತಾಯೆ ! ನಿನ್ನ ನ್ನು ನಾವು ಪಡೆದ ಪುಣ್ಯದ ಫಲದಿಂದ ಪರಶಿವನು ಸಕಲಪರಿವಾರದೊಡ ನೆ ನಮ್ಮ ಮನೆಗೆ ಬಂದನು. ಎಲ್ಲರ ದರ್ಶನವೂ ಸೇವೆಯ ನಮಗೆ ಸುಲ ಭವಾಗಿ ದೊರೆದಿತು. ಈ ನಿನ್ನ ಅನುಗ್ರಹವನ್ನು ನಾವು ಎಂದಿಗೂ ಮ ರೆಯಲಾರೆವು, ನೀನೂ ಕೂಡ ಮುಂದೆ ನಮ್ಮನ್ನು ಮರೆಯದೆ ಒಂದೇವಿ ಧವಾದ ಅಭಿಮಾನದಿಂದ ಕಾಪಾಡಬೇಕು ?” ಎಂದು ಹೇಳುತ್ತ ಕಣ್ಣೀರ ನ್ನು ತುಂಬಿದರು. ಪಾರತಿಯ ಕಣ್ಣೀರ್ ರೆದು ಸಮಾಧಾನಪಡಿಸಿ ಕಳು ಹಿಕೊಟ್ಟಳು. ಶಿವಶಿವೆಯರು ವೃಷಭವನ್ನೇರಿ ಹೊರಟರು, ದುಂದುಭಿ ಯು ಮೊಳಗಿತು. ಸಕಲದೇವತೆಗಳೂ ತಂತಮ್ಮ ವಾಹನವನ್ನೇರಿದರು. ಆ ವ: ಬರುವ ಸಂತೋಷವಾಕ್ಕಿಯನ್ನು ಕೇಳಿ ಕೈಲಾಸಪುರವು ಅತ್ಯಂತ ಸಂಭ್ರಮದಿಂದ ಶೃಂಗರಿಸಲ್ಪಟ್ಟಿತು, ಪುರಜನರೆಲ್ಲರೂ ಸಾಲಾಗಿ ಕಿಕ್ಕಿರಿ ದು ನಿಂತು ಪಟ್ಟದರಾಣಿಯೊಡನೆ ಕೂಡಿ ಬಂದು ಮಹಾದೇವನನ್ನು ನೋಡಿ ಪದಾನಂದತುಂದಿಲರಾಗಿ, ದಾರಿಯುದ್ದಕ್ಕೂ ಆರತಿಗಳನ್ನು ಬೆಳಗಿ, ಪು ಸೃಷ್ಟಿ ಯನ್ನು ಕರೆದು, ಜಘಾ ಪ್ರವನ್ನು ಮಾಡುತ್ತಿದ್ದರು. ಶಿವು ಅಲಮಯ ನ ಪ್ರವೇಶಿಸಿದ. ಮಹಾಸಭೆಯಲ್ಲಿ ಅಲಂಕೃತವಾಗಿದ್ದ ಸಿ ಸ್ಮಾಸನವನ ಪತ್ನಿಸದತನಾಗಿ ಮಂಡಿಸಿದನು. ಹಒಹ್ಮಾದಿಗಳ ಲ್ಲರೂ ತಮ್ಮ ತಮ್ಮ ಉಳಿತಾಸನಗಳಲ್ಲಿ ಕುಳಿತರು. ಎಲ್ಲರಿಗೂ ಉಚಿತ ವಾದ ಉಡುಗೊರೆ ಹಾರ ತಾಂಬೂಲಗಳಿಂದ ಮಕ್ಕಾದೆಗೊಳಿಸಿ ಅಪ್ಪಣೆ ಯಿತ್ತು ಕಳುಹಿಕೊಟ್ಟನು. ತಾನು ಪತ್ನಿಯೊಡನೆ ಪರಮವೈಭವದಿಂದ ಒಪ್ಪಿದ್ದನು. ಹೀಗೆ ಪರಶಿವನು ತನ್ನಲ್ಲಿ ಲೀನವಾದ ಆತ್ಮ ಶಕ್ತಿಯನ್ನೇ ಹೊರಗೆಡಹಿ ಸಾಕಾರಗೊಳಿಸಿ, ಜಗದಾಪಾರಬೋಧನೆಯ ಮಜಾ ಕೃಪೆಯಿಂದ ಗಿರಿಜಾಕಲ್ಯಾಣಲೀಲೆಯನ್ನು ಪರಿಗ್ರಹಿಸಿದನೆಂದು ಚೆನ್ನಬ ಸವೇಶನು ಸಿದ್ದರಾಮೇಶನಿಗೆ ನಿರೂಪಿಸಿದನೆಂಬಿಲ್ಲಿಗೆ ಹತ್ತನೆ ಅಧಾ ಯವು ಸಂಪೂರ್ಣವು. ೧೧ನೆ ಅಧ್ಯಾಯವೊ. ------- ಕು ಮಾ ರೋ ತೃತಿಯ ,
ಪುಟ:ಚೆನ್ನ ಬಸವೇಶವಿಜಯಂ.djvu/೨೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.