ಎA ಚನ್ನ ಬಸವೇಕವಿಜಯಂ (wಂದ ೩) [ಅಧ್ಯಾಯ ಧೀಶ್ವರರುಗಳು ಉಷೆ ! ಯೆಂದು ಕೂಗಿಡುತ್ತಿದ್ದರು. ಎತ್ತ ನೋಡಿದರೂ ಆನೆ ಕುದುರೆಗಳು, ಎಲ್ಲಿನೋಡಿದರೂ ಛತ್ರಚಾಮರಗಳು, ಹೇಗೆ ತಿರುಗಿ ದರೂ ಮಣಿಕಿರೀಟಾವಳಿಗಳು, ಎಲ್ಲಿಯವರೆಗೆ ನೋಡಿದರೂ ಆಯುಧಗಳ ಸಾಲುಗಳು ಕಣ್ಣಿಗೆ ಕಾಣಿಸುತ್ತಿದ್ದುವು. ಇಂದ್ರನು ಈ ಮಹಾದೇವಸೇ ನೆಯನ್ನು ನೋಡಿ, ಇಷ್ಟೊಂದು ಸೇನೆಯ ಎಲ್ಲಿ ಅಡಗಿದ್ದಿತು ! ಎಂದು ಆಶ್ಚರಪಟ್ಟು, ಇಂತಹ ಮಹಾಸೇನೆಯನ್ನು ಗೆಲ್ಲುವುದಕ್ಕೆ ಆ ನೀಚತಾರ ಕನಿಗೆ ಶಕ್ತಿಯಲ್ಲಿ ಬಂದಿತು ? ಈದಿನ ತಮಗೇ ಜಯವಾಗುವುದು ನಿಜ ವೆಂದು ನಿಶ್ಚಸಿ, ಸಂತೋಷದಿಂದ ತೆರಳಿದನು. ಅತ್ತ ತಾರಕನ ಬಳಿಗೆ ಒಬ್ಬ ದೂತನು ಹೋಗಿ- ದೇವತೆಗಳು ಶಿವಕುಮಾರನಿಗೆ ಸೈನ್ಯಾಧಿಪತಿ ಪಟ್ಟವನ್ನು ಕಟ್ಟಿ ನಿನ್ನ ಮೇಲೆ ಯುದ್ಧಕ್ಕೆ ಬರುತ್ತಿರುವರು ಎಂದು ಬಿ ನೈನಿದನು, ಅದನ್ನು ಕೇಳಿ ತಾರಕನು ಕೋಪದಿಂದ ಕೆಂಗಣ್ಣನ್ನು ಬಿಡು , ಕುಡಿಮೀಸೆಯ) ಕುಣಿದಾಡುತ್ತಿರಲು, ಕೈಕತ್ತಿಯನ್ನು ಜಳಪಿಸಿ, “ ನನ್ನ ಸಕಲ ಸೇನೆಯ ಯುದ್ಧಕ್ಕೆ ಸಿದ್ಧವಾಗಲಿ ” ಎಂದು ನುಡಿದನು. ಕ್ಷಣಕಾಲದಲ್ಲಿ ಮಹಾಸಮುದ್ರದಂತೆ ಸೈನ್ಯವು ಅಣಿಯಾಗಿ ನಿಲ್ಲಲು, ತಾ ನು ಕಾಂಚನಮಣಿರಥವನ್ನೇರಿ, ವಾಧ್ಯಸಿಯ ಕೋಲಾಹಲದಿಂದ ಸಾಗಿ ಬಂದನು. ಅವನ ಒಡಹುಟ್ಟಿದ ಗಜರ, ಶಂಖಕರ್ಣ, ಶತಮಾಯ, ವೃ ಪ, ಮಹಾನಾಭ, ದುಂದುಭಿ, ವಿರೂಪಾಕ್ಷ, ಸರ್ಭಾನು, ಹಯಗ್ರೀವ ಮೊದಲಾದ ಮಹಾದೈತ್ಯರೆಲ್ಲರೂ ತಮ್ಮ ತಮ್ಮ ಸೇನೆಯೊಡನೆ ಪಕ್ಕಗಳಲ್ಲಿ ಬರುತ್ತಿದ್ದರು, ಸೇನೆಯ ಲೆಕ್ಕವನ್ನು ಮಾಡುವುದಕ್ಕೆ ಬ್ರಹ್ಮನಿಗೂ ಸಾ ಧ್ಯವೋ ಅಲ್ಲವೋ ಎಂದು ಊಹಿಸುವಷ್ಟು ರಾಕ್ಷಸಸೇನೆಯು ಮಹತ್ತರ ವಾಗಿದ್ದಿತು. ದೇವತೆಗಳು ಇದನ್ನು ಕಂಡು ಆಶ್ಚಪಟ್ಟರು. ಆಗ ತಾರ ಕನ ದಳಪತಿಯಾದ ವಜ್ರನಾಭನು ತಮ್ಮ ಸೇನೆಯಲ್ಲಿ ಸಾಕಾರವಾಗಿ ವ್ಯೂಹರಚನೆಯನ್ನು ಮಾಡಿದನು. ಸೇನೆಯಲ್ಲಿ ಪಟುಭಟರಾದವರನ್ನೆಲ್ಲ ದಳಗಳಸ್ಥಾನದಲ್ಲಿ ನಿಲ್ಲಿಸಿದನು. ತಾರಕನ ತಮ್ಮಂದಿರನ್ನೆಲ್ಲ ಮಧ್ಯದ ಕೇಸ ರಗಳ ಸ್ಥಾನದಲ್ಲಿ ನಿಲ್ಲಿಸಿದನು. ಅದರ ಮಧ್ಯದ ಕರ್ಣಿಕೆಯ ಬಳಿಯಲ್ಲಿ ಜಂಭನನ್ನು ನಿಲ್ಲಿಸಿದನು, ಈ ವ್ಯೂಹದ ಮುಂಗಡೆಯಲ್ಲಿ ಶುಂಭನ್ನೂ, ಹಿಂದುಗಡೆಯಲ್ಲಿ ಶಬಲನೂ, ಎಡಗಡೆಯಲ್ಲಿ ಕೇತುವೂ, ಬಲದಲ್ಲಿ ಶರಭ
ಪುಟ:ಚೆನ್ನ ಬಸವೇಶವಿಜಯಂ.djvu/೨೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.