ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] | ಕುಮಾರೋತ್ಪತ್ತಿಯು ಆಗಿಸಿ ಹೊರಚಿಮ್ಮಿತು. ಆ ಸೈನ್ಯವನ್ನು ಕುಮಾರನಿಗೆ ಕುಡಿಸಿದಳು. ದೇವತೆ ಗಳೆಲ್ಲರೂ ಸಂತೋಷಗೊಂಡು ಅಂತರಿಕ್ಷದಲ್ಲಿ ಪುಷ್ಪವೃಷ್ಟಿಯನ್ನು ಕರೆ ದರು. ಭವಭವಾನಿಯರು ಮಗುವನ್ನು ಪುಷ್ಟ ವಿಮಾನದಲ್ಲಿ ಕುಳ್ಳಿರಿಸಿ ಕೊಂಡು ಕೈಲಾಸಕ್ಕೆ ತೆರಳಿದರು. ಕುವರನು ಪಾರತಿಯ ತೊಡೆಯಲ್ಲಿ ಮಲಗಿರುವಾಗಳೇ ಸೂರಚಂದ್ರಮಂಡಲಗಳನ್ನು ಕಂಡು, ಅವುಗಳನ್ನು ಮಿಣುಕುಹುಳುಗಳನ್ನು ಹಿಡಿವಂತೆ ಹಿಡಿಯಲು ಕೈಚಾಚುತ್ತಿದ್ದನು. ಗಿರಿ ಗಳನ್ನು ಕಿತ್ತು ಚಂಡಾಡುವುದಕ್ಕೆ ಉಜ್ಜುಗಿಸುತ್ತಿದ್ದನು. ಭೂಮ್ಯಾಕಾ ಶಗಳನ್ನು ತಾಟುಂಡೆಯಕಾಯನ್ನಾಡಿಸುವಂತೆ ಆಡಲು ಪ್ರಯತ್ನಿಸುವನು. ಇಂತಹ ಮಹಾ ಪರಾಕ್ರಮದ ಕಂದನನ್ನು ಪಾವತಿಯು ನೋಡಿ ಸಂತೋ ನದಿಂದ ಉಬ್ಬುತ್ತಿದ್ದಳು. ಇತ್ತ ದೆವತೆಗಳು ಹರಿಬ್ರಹ್ಮರನ್ನು ಕರೆದು ಕೊಂಡು ಕೈಲಾಸಕ್ಕೆ ಬಂದರು. ತಾರಕಾಸುರನ ಉಪಟಲವನ್ನು ಕುರಿತು ಮತ್ತೆ ಶಿವನೊಡನೆ ಮೊರೆಯಿಟ್ಟರು. ಪರಮೇಶನು- ಹೆದರಬೇಡಿರೆಂದು ಅವರಿಗೆ ಅಭಯವಿತ್ತು, ತನ್ನ ಕುಮಾರನಿಗೆ ಯುವರಾಜಪಟ್ಟವನ್ನು ಕಟ್ಟಿ ದೇವತೆಗಳೆಲ್ಲರೂ ಅವನಿಗೆ ಕಾಣ್ನೆಯಿತ್ತು ಮಾದಿಸಬೇಕೆಂದು ಅಪ್ಪಣೆ ಮಾಡಲು, ಎಲ್ಲರೂ ಹಾಗೆಯೇ ಆಚರಿಸಿ ಷಣ್ಮುಖಸ್ವಾಮಿಯನ್ನು ಕೊಂ ಡಾಡಿದರು. ೬ವನು ಕುಮಾರನನ್ನು ಕುರಿತು- “ ಸುತನೇ : ಲೋಕ ಕಂಟಕನಾದ ತಾರಕನನ್ನು ಕೊಂದು ಜಯಶೀಲನಾಗಿ ಬಾ ” ಎಂದು ಅಪ್ಪಣೆ ಮಾಡಿ, ಹರಸಿ ಕಳುಹಿದನು. ಕೂಡಲೇ ಧಳ ಧಳಂಧಳವೆಂದು ದೇವದುಂದುಭಿಯ ಶಬ್ದ ವಾಯಿತು. ಆ ಧ್ವನಿಗೆ ಜಗತ್ತೆಲ್ಲ ನಡುಗಿತು. ಸಮುದ್ರದೊಳಗಿದ್ದ ಜಲಚರಗಳೆಲ್ಲ ಬೆದರಿ ಓಡಾಡಿದುವು, ಕುಮಾರನಪ್ಪ ಣೆಯ ಮೇರೆ ಸಕಲದೇವತೆಗಳೂ ತಮ್ಮ ತಮ್ಮ ವಾಹನವನ್ನೇರಿ ಸೇನೆ ಯೊಡನೆ ಯುದ್ಧ ಸನ್ನದ್ಧರಾದರು. ಪಣ್ಮುಖನು ನವಿಲನ್ನೇರಿ ಹರಿಬ್ರಹ್ಮರ ಮಧ್ಯದಲ್ಲಿ ನಿಂತು ಹೊರಟನು. ಮುಂದೆ ಸ್ತುತಿಪಾಠಕರು ಕುಮಾರ ದೇವನ ಶೌಯ್ಯಾಡಂಬರವನ್ನು ಉದ್ಭವಿಸುತ್ತಿದ್ದರು. ಸಕಲದೇವತೆ ಗಳೂ ಜಯಜಯವೆಂದು ಕೈಯೆತ್ತಿ ಹೊಗಳಿದರು. ಕಹಳೆಗಳು ಭೋ ರ್ಗರೆದುವು. ದಿಕ್ಷಾಲಕರು ಪಟ್ಟು ಖನಸುತ್ತಲೂ ತಮ್ಮ ತಮ್ಮ ದಿಕ್ಕಿ ನಲ್ಲಿ ನಿಂತು ಹೊರಟು, ಕೈಬೀಸಿ ಸೇನೆಯನ್ನು ನಡೆಸುತ್ತಿದ್ದರು, ಗಣಾ