ಪಕುಪತಿಪಟ್ಟವು. ಎಳೆ ಹಿತೆಯರಾಗಿ ಆತನ ಸಂಗವನ್ನು ಮಾಡಿ ಜಾರತ್ವದಲ್ಲಿ ಅಭಿರುಚಿಗೊಂಡರು. ಹೆಂಗುಸರು ಕಸಪೊರಕೆ, ಒನಕೆ, ಒರಲು, ಗೋಡೆ ಮೊದಲಾದುವುಗ ಳನ್ನು ಪೂಜಿಸುವುದಕ್ಕೆ ಪ್ರೇರಿತರಾದರು. ಹಗಲೂ ರಾತ್ರಿಯೂ ತ್ರಿಪುರ ದಲ್ಲೆಲ್ಲ ಜಾರತನವೇ ನಡೆಯುವಂತಾಯಿತು. ಸರ್ವರೂ ಮದ್ಯಪಾನಪ್ಪ ಮತ್ತರಾದರು. ಈ ಸಂಗತಿಯನ್ನೆಲ್ಲ ನಾರದನು ತನ್ನ ಗುರುವಿನೊಡನೆ ಬಿ ನೈನಿ, ಸ್ವಾಮಿಾ ! ನಾವು ಬಂದ ಕಾರವೆಲ್ಲ ನಿದ್ದಿ ಸಿತು; ಆದರೆ ಮೂ ರುಪುರಗಳಲ್ಲಿ ಒಬ್ಬೊಬ್ಬರಂತೆ ಪರಮಯೋಗಿ, ಶೀಲಪರ, ವಿರಕ್ತ ಎಂಬ ಮೂರು ಮಂದಿಗಳಿದ್ದಾರೆ. ಅವರ ದಧೀಚಿ ಉಪಮನ್ನು ಅಗ ಸ್ವಾದಿಗಳಿಗಿಂತಲೂ ಮಹಾಶಿವಭಕ್ತರಾಗಿದ್ದಾರೆ; ಅವರು ಮಾತ್ರ ನ ಮೈ ಬಲೆಗೆ ವಶರಾಗಲಿಲ್ಲ; ಎಂದು ನುಡಿದನು. ಅವರ ತಂಟೆಗೆ ಹೊಗ ಬೇಡವೆಂದು ವಿಷ್ಣುವು ಹೇಳಲು, ಗುರುಶಿಷ್ಯರುಗಳು ಅಲ್ಲಿಂದ ಕೈಲಾ ಸದ ಕಡೆಗೆ ತಿರುಗಿದರು. ಮಧ್ಯೆ ವಿಷ್ಣುವು- ಅಯ್ಯಾ ನಾರದನೆ ! ನಾ ವು ದೇವತೆಗಳ ಕಾಠ್ಯಕ್ಕಾಗಿ ಶಿವಭಕ್ತರಲ್ಲಿ ನಾಸ್ತಿಕ್ಯವನ್ನು ವೃದ್ಧಿಮಾ ಡಲು ಬುದ್ಧಾವತಾರವನ್ನು ಪರಿಗ್ರಹಿಸಿದ್ದೆವು. ಈ ದೋಷದಿಂದ ದೂತ ರಾದ ನಮಗೆ ಶಿವಸಭೆಯ ಪ್ರಾಪ್ತಿಯು ಹೇಗೆತಾನೇ ಆದೀತು ? ಅದು ಕಾರಣ, ಈ ದೋಷವನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ ತಪಸ್ಸ ಸ್ನಾಚರಿಸಬೇಕು; ಎಂದು ಹೇಳಲು, ಅದರಂತೆಯೇ ನಾರದನೂ ಒಪ್ಪಿ, ಇಬ್ಬರೂ ತಪಸ್ಸಿಗೆ ಕುಳಿತರು. ಶಿವನು ಅಶರೀರಿಯಾಗಿ ಬಂದು- ನೀವಿ ಬ್ಬರೂ ದೇವತೆಗಳ ಮಾತನ್ನು ಕೇಳಿ, ನನ್ನ ಭಕ್ತರಲ್ಲಿ ಶಿವಭಕ್ತಿಯನ್ನು ತಪ್ಪಿನಿ, ಮೋಹಶಾಸ್ತ್ರವನ್ನು ಹರಡಿರುವಿರಿ; ಅದುಕಾರಣ ಸರದೇವ ತಾಸ್ತೋಮದೊಡನೆ ನೀವೂ ಕೂಡ ಕೈಲಾಸವನ್ನು ಪ್ರವೇಶಿಸುವುದಕ್ಕೆ ಅನರ್ಹರು; ನೀವೆಲ್ಲರೂ ಹೊಗಿ ಮಾನಸಸರೋವರದಲ್ಲಿ ಮುಳುಗಿ ತಪ ಸ್ವನ್ನಾಚರಿಸಿ ಶುದ್ದ ರಾದರೆ ಆಗ ನನ್ನನುಗ್ರಹಕ್ಕೆ ಪಾತ್ರರಾಗುವಿರಿ, ಎಂ ದು ನುಡಿದನು, ಈ ಆಕಾಶವಾಣಿಯನ್ನು ವಿಷ್ಣು ನಾರದರು ಕೇಳಿ, ತಪ ಸ್ಪಿನಿಂದೆದ್ದು ದೇವತೆಗಳದ್ಧ ಬಳಿಗೆ ಬಂದು, ಅದುವರೆಗೆ ನಡೆದ ಸಂಗತಿಯ ನೆಲ್ಲ ಹೇಳಿ, ಎಲ್ಲರನ್ನೂ ಕರೆದುಕೊಂಡು ಹಿಮವತ್ಪರತಕ್ಕೆ ಹೋಗಿ, ಮಾನಸಸರೋವರದಲ್ಲಿ ದೇಹವನ್ನೆಲ್ಲ ಮುಳುಗಿಸಿಕೊಂಡು ಕೈಗಳನ್ನು
ಪುಟ:ಚೆನ್ನ ಬಸವೇಶವಿಜಯಂ.djvu/೨೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.