೫ಗೆ ಕಮಲಾಕ್ಷದೇವಸೇನಾಯುದ್ಧವು ದಾಡುತ್ತಿದ್ದುವು, ರಾಕ್ಷಸರು ಕೋರೆದಾಡೆಯನ್ನು ಬಿಟ್ಟು ನಾಲಿಗೆಯ ನ್ನು ಸೀಳಿ ಮಹಾಗರ್ಜನೆಯನ್ನು ಮಾಡಿ ಮುಂಗಡೆಯ ದೇವಸೇನೆಯ ನ್ನು ಕೊಚ್ಚು ಬರಲು, ಹಿಂದಿದ್ದ ದೇವತೆಗಳೆಲ್ಲ ಪಲಾಯನಗೊಂ ಡು, ಅಯ್ಯೋ ! ಆ ಹಾಳು ಹರಿಯು ಮೇರುಗಿರಿಯಲ್ಲಿ ಅಡಗಿದ್ದ ನ ಮೈ ನ್ನು ಸುಮ್ಮನೆ ಇರಗೊಡಿಸದೆ, ಶಿವನು ನನ್ನನ್ನು ಉಳುಹುತ್ತಾನೆ ಬ ೩ರಿ ಯೆಂದು ಬೋಧಿಸಿ, ಉಪಾಯದಿಂದ ಕರೆದುಕೊಂಡು ಬಂದು ಈ ಗ ಈ ಹೆಮ್ಮಾರಿಯ ಬಾಯಿಗೆ ನನ್ನನ್ನು ತುತ್ತು ಮಾಡಿದನೆ ! ಎಂದು ಪ್ರ ಲಾವಿಸುತ್ತಿದ್ದ ರು. ಇದನ್ನು ಶಿವಕುಮಾರನಾದ ವೀರಭದ್ರೇಶನು ಕೇಳಿ, ರೋಪದಿಂದ ಅವರ ಕೆನ್ನೆಗೆ ತಟ್ಟಿ, ಸುಮ್ಮನಿರಿಸಿ, ತಾನೇ ಯುದ್ಧಕ್ಕೆ ನ ಡೆದನ, ಇಮೋ ತಾರಕಾರಿ ಬಂದನು ! ಇದೋ ದಕ್ಷಾಧರಧರಿಸಿ ಬಂ ದನು ! ಇದೊ ರಾಕ್ಷಸಗಿರಿವನು ಬಂದನು ! ಎಂದು ಮೊದಲಾಗಿ ಸತಿಸಾರಕರು ಮುಂದೆ ಹೊಗಳುತ್ತಿದ್ದರು. ವೀರಭದ್ರನ ಸೇನೆಯು ಪ್ರಚಂಡಾಕ್ಷಸಸ: ಯಮೇಲೆ ಬಿದ್ದಿತು. ಚೂಣಿಯವರ ಕೈ ಕೈ ಹ ತುವಿರೇಶನು ನಿನಾದವನ್ನು ಮಾಡಿ, ಹಸ್ತದ ಕತ್ತಿಯನ್ನು ಜಳ ಪಿಸಿ, ರಕ್ಕಸರ ಮುಂಗತೆಗೆ ಹೊಗಿ, – ಸಣ್ಣ ಸಣ್ಣ ನೊರಜಗಳೆಲ್ಲ ದಾರಿ ಬಿಡಿ, ನಿಮ್ಮಲ್ಲಿ ಬಾರಬಲ್ಲವುಳ್ಳ ವೀರರುಗಳು ಯಾರಾದರೂ ಇದ್ದರೆ ಮುಂದೆ ಬನ್ನಿ, ನಿಮ್ಮ ಹೊಟ್ಟೆಗಳನ್ನು ಒಗಿದು ರಕ್ತವನ್ನೂ ಕರುಳ ನ್ಯೂ ಭೂತಗಣಕ್ಕೆ ಕೊಟ್ಟು ತೃಪ್ತಿಪಡಿಸುತ್ತೇನೆ ?” ಎಂದು ಹೇಳುತ್ತ, ಮಹಾ'ದಿಂದ ರಕ್ಕಸರ ತಲೆಗಳನ್ನು ಚಂಡಾಡುತ್ತ ನುಗ್ಗಿದರು. ಕಾಡಿಗೆ ನುಗ್ಗಿ ದಕಿಚ್ಚಿನಂತೆಯ, ಸಮುದ್ರದಲ್ಲಿ ಬೇಯುವ ಬಡಬಾಗ್ನಿಯಂತೆಯೂ, ಕ್ಷಣಕಾಲವೂ ವಿರಾಮವಿಲ್ಲದೆ ವಿರೇಶನ ಕೈಕತ್ತಿಯು ರಕ್ಕಸರ ಚತುರಂಗ ಬಲವನ ಆಹುತಿ ತೆಗೆದುಕೊಳ್ಳುತ್ತಿದ್ದಿತು. ಈಪ್ರಳಯವನ್ನು ರಾಕ್ಷಸಸೇ ನಾಪಮುಖರು ನೋಡಿ, ಇವನೆಯೋ ಪ್ರಳಯಕಾಲದ ರುದ್ರ ? ಎಂದು ಕೇಳುತ್ತ, ತನ್ನ ಕೋಟ್ಯಂತರ ಸೈನ್ಯವನ್ನು ಒಂದೇ ಬಾರಿಗೆ ವೀರೇಶನ ಮೇಲೆ ನುಗ್ಗು ವಂತೆ ಅಪ್ಪಣೆ ಮಾಡಿ, ತಾವುಗಳೂ ಮಹಾರ್ಭಟದಿಂದ ಮು ತಿದರು. ಆದರೇನು ? ಅಷ್ಟೊಂದುಸೇನೆಯೂ ವಿರೇಶನ ಬಳಿಗೆ ಬರುವ ಸ್ಮರಲ್ಲೇ ದೀಪಕ್ಕೆರಗಿದ ಪತಂಗದ ಹುಳುವಿನಂತಾದುವು, ಗರುಡನನ ೧ |
ಪುಟ:ಚೆನ್ನ ಬಸವೇಶವಿಜಯಂ.djvu/೨೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.