೨೫೦ ಚನ್ನಬಸವೇಶವಿಜಯಂ (ಆಂಡಳಿ) [ಅಧ್ಯಾಯ ಲೆ ಬಿದ್ದ ಸರ್ಪಗಳಂತಾದುವು, ಸಿಹ್ನವನ್ನು ಕೆಣಕಿದ ಆನೆಯಂತಾದುವು, ರಕ್ಕಸರ ದೇಹಖಂಡ ಮಾಂಸ ರಕ್ತಗಳರಾಶಿಗಳನ್ನು ತಿಂದು ತೇಗಿ ಶಾಕಿನಿ ಡಾಕಿನಿ ಭೂತಬೇತಾಳಾದಿಗಳವೀರಭದ್ರೇಶನ ಕಿರಿಯನ್ನು ಕೊಂಡಾಡಿ ಕುಣಿಯುತ್ತಿದ್ದವು. ಉಳಿದ ರಕ್ಕಸರು ವೀರೆಶನ ಪರಾಕ್ರಮವನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟು ತಲೆಯನ್ನು ತೂಗಾಡಿದರು. ದೇವತೆಗಳೆಲ್ಲರೂ ಜಯಮಾಪಮಾಡಿ ಆನಂದಿಸಿದರು. ಅಷ್ಟರಲ್ಲಿ ಕಮಲಾಕ್ಷನು ತನ್ನ ಸೇ ನಾಸ್ತೋಮವೆಲ್ಲವೂ ವೀರಭದ್ರೇಶನಿಂದ ಲಯಗೊಂಡುದನ್ನು ಕಂಡು, ಅ ತಿರಾವೇಶದಿಂದ ರಥವನ್ನು ವೀರೇಶನ ಮುಂಗಡೆಗೆ ಸಾಗಿಸಿ, ಧ ನುರ್ಬಾಣಗಳನ್ನು ಕೈಯಲ್ಲಿ ಪಿಡಿದು, ಊಾಸೆಯನ್ನು ಹುರಿಮಾಡಿ ಗರ್ಜಿ ಸಿ- ಎಲೋ ಶೂರನೆ ! ನೀನೆಯೊ ವೀರಭದ್ರೇಶನೆಂಬವನು ? ಇದುವರೆಗೆ ಸಾಧಾರಣಸೇನೆಯನ್ನು ಕೊಂದ ನಿನ್ನ ಹೆಮ್ಮೆಯನ್ನು ಇನ್ನು ಮರೆತುಬಿಡು; ತ್ರಿಪುರವನ್ನು ಬಡದಕ್ಷನ ಯಾಗಶಾಲೆಯೆಂದು ತಿಳಿದು ಕೊಂಡೆಯೋ ? ಎಂ ದು ಮೂದಲಿಸುತ್ತ, ಗುರಿಯಿಟ್ಟು ಮೂವತ್ತೆಂಟು ಬಾಣಗಳನ್ನು ಪ್ರಯೋ ಗಿನಿವನು, ವೀರೇಶನು ರಕ್ಕಸನ ಕೊಬ್ಬಿನ ಮಾತನ್ನು ಕೇಳಿ ನಕ್ಕು, ಥ ಟ್ಟನೆ ಒಂದೇ ನಿತತಾಸ್ತ್ರವನ್ನು ಬಿಟ್ಟು ಆ ಬಾಣಗಳನ್ನೆಲ್ಲ ಮಧ್ಯದಲ್ಲೇ ಖಂಡಿಸಿ, ಮತ್ತೆ ಧನುಷ್ಠಾ೦ಕಾರವನ್ನು ಮಾಡಿ, ಆ ಶಬ್ದದಿಂದಲೇ ದನು ಜಾಳೆಯ ಎದೆಯನ್ನು ಬೆರಿಯಿಸಿ, ಮತ್ತೊಂದು ಬಾಣವನ್ನು ದೈತ್ಯನ ಎ ದೆಗೆ ಗುರಿಯಿಟ್ಟು ಹೊಡೆದು ( ಇರೋ ಬಡಹಾರದಕ್ಷನನ್ನು ಕಡಿದ ನನ್ನ ಶ್ಲವನ್ನು ನೀನೂ ಸ್ವಲ್ಪ ನೋಡು ” ಎಂದು ಹೇಳಿ, ಗರ್ಜಿಸಿದನು. ಕಮಲಾಕ್ಷನು ಆ ಯೇಟಿನಿಂದ ಗಾಯವಡೆದು ಕಂಪಿಸಿ, ಮತ್ತೆ ಧೈರದಿಂ ದ ವೀರೇಶನ ಮೇಲೆ ಬಾಣದ ಮಳೆಯನ್ನು ಕರೆದನು. ಆಗ ವೀರೇಶನ ಕೆರಳ, ಕಣ್ಣಿನಿಂದ ಕಿಡಿಗಳನ್ನು ಸುರಿಸುತ್ತ ಹೂಂಕರಿಸಿ, ಎಲೊನೀ ಚನೆ ! ನನ್ನೊಡನೆ ಇಷ್ಟುಕಾಲ ಸೆಣಸುವುದಕ್ಕೆ ನೀನೆಷ್ಟರವನು ! ಎಂ ದು ಹೇಳಿ, ನಿಶಿತಾಸ್ತ್ರವೊಂದನ್ನು ತೆಗೆಯುವರಲ್ಲಿ, ದೈತ್ಯನು ಬತ್ತ ಆಕೆಯಿಂದ ಮಹಾಶಕ್ಕಾಯುಧವನ್ನು ತೆಗೆದು ಗರಗರನೆ ತಿರುಗಿಸಿ “ ಎ ೮ ವಿರನೆ ! ಇದು ನಿನ್ನನ್ನು ಸುಟ್ಟು ಹಾಕದೆ ಬಿಡುವುದಿಲ್ಲ ; ನಿನ್ನ ಪ್ರಾಣವನ್ನುಳುಹಿಕೊಳ್ಳುವುದಕ್ಕೆ ನಿಮ್ಮ ಪ್ಪನನ್ನು ಬರಹೇಳು ?” ಎಂದು
ಪುಟ:ಚೆನ್ನ ಬಸವೇಶವಿಜಯಂ.djvu/೨೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.