ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೫೩ ಕಮಲಾಕ್ಷದೇವಸೇನಾ ಯುದ್ಧವು ಮಹಾರ್ಭಟವನ್ನು ಮಾಡಿ, ವೀರೇಶನ ಮೇಲೆ ಪ್ರಯೋಗಿಸಿದನು. ಅದು ಅಲಗಿನಿಂದ ಮಹಾಗ್ನಿ ವರ್ಷವನ್ನು ಕರೆಯುತ್ತ ಭೀಕರವಾಗಿ ಬರುತ್ತಿರ ಲು, ಉಭಯಪಕ್ಷದ ಸೇನೆಯೂ ಅದನ್ನು ನೋಡಲಾರದೆ ಕಣ್ಣನ್ನು ಮು ಕ್ಟಿಕೊಂಡಿತು. ಆಗ ವೀರಭದ್ರೇಶನು ಕೂರಗಳಾದ ೫ ಅಸ್ತ್ರಗಳನ್ನು ಪ್ರಯೋಗಿಸಿ, ಶಕ್ಕಾಯುಧವನ್ನು ತುಂಡುಮಾಡಿ ಕೆಡಹಿದನು. ಒಡ ನೆಯೇ ಮತ್ತೊಂದು ಮಹಾಸ್ಯವನ್ನು ಬಿಟ್ಟು, ಅತುಳಶೌಸ್ಟಾಟೋಪ ದಿಂದಾರ್ಭಟಿಸಿ, ಕಮಲಾಕ್ಷನ ಎದೆಗೆ ಗುರಿಯಿಟ್ಟು ಹೊಡೆದನು. ಅದು ಕ್ಷಣಮಾತ್ರದಲ್ಲಿ ರಕ್ಕಸನನ್ನು ನೆಟ್ಟು ಅವನ ಶರೀರವನ್ನೇ ಆಕಾಶಕ್ಕೆ ಹಾರಿಸಿಕೊಂಡು ರಕ್ತಸ್ರಾವಣವನ್ನು ಮಾಡಿಸುತ್ತ ಹೋಗಿ ತ್ರಿಪುರದಲ್ಲಿ ತಾರಕಾಕ್ಷನ ಇದಿರಿಗೆ ಬಿಸುಡಿತು. ಕಂಠಗತಪ್ರಾಣನಾಗಿ ಮೂರ್ಛಿಯೊಂ ದಿ ತನ್ನ ಮುಂದೆ ಬಿದ್ದ ತಮ್ಮನನ್ನು ತಾರಕಾಕ್ಷನು ನೋಡಿ, ಖಿನ್ನನಾಗಿ, ಕೆಣಕಿದ ಸಿಕ್ಕದಂತೆ ಮಹಾಗರ್ಜನೆಯನ್ನು ಮಾಡಿ, ಅತ್ತಿತ್ತ ಕುಳಿತಿರುವ ತನ್ನ ಸಭಾಪ್ರಮುಖರನ್ನೆಲ್ಲ ದುರದುರನೆ ನೋಡಿದನು. ಅವರಲ್ಲಿದ್ದ ಶಿಂತು ಮಾರನೆಂಬ ತಾರಕಾಕ್ಷನ ಮೈದುನನು ಎದ್ದು, ಬಾವನಿಗೆ ಕೈಮುಗಿ ದು_ ನನಗೆ ಅಪ್ಪಣೆಯನ್ನು ಮಾಡಿದರೆ ತ್ರಿಲೋಕದಲ್ಲಿರುವ ಸುರನರ ಭು ಜಗರ ತತಿಯನ್ನೆಲ್ಲ ತರಿದು ತಂದೊಪ್ಪಿಸುತ್ತೇನೆ, ಹರಿಬ್ರಹ್ಮರುಗಳಾದ ರೂ ಕಟ್ಟಿ ತರುತ್ತೇನೆ, ಕಡೆಗೆ ಶಿವನು ಬಂದರೂ ಅವನನ್ನೂ ಶಕ್ತಿಗುಂದಿ ಸುತ್ತೇನೆ, ವೀಳಯವನ್ನು ಕೊಟ್ಟು ನನ್ನ ಪರಾಕ್ರಮವನ್ನು ಪರೀಕ್ಷೆ ಸು?” ಎಂದು ಬಿನ್ನೆ ಸ: ಎ, ತಾರಕಾಕ್ಷನು ಮೈದುನನ ಕೌರ್ ವಚನಕ್ಕೆ ಸಂತೋಷ್ಟಿಸಿ, ಅವನಿಷ್ಟದಂತೆಯೇ ಸಕಲಸ್ಯದೊಡನೆ ಯುದ್ಧಕ್ಕೆ ತೆರ ಳಲು ಅವನಿಗೆ ಅಪ್ಪಣೆಯನ್ನು ಕೊಟ್ಟು ಕಳುಹಿದನು ಎಂದು ಚೆನ್ನಬ ಸವೇಶನು ನುಡಿದ ನೆಂಬೆಲ್ಲಿಗೆ ಮೂರನೆ ಅಧ್ಯಾಯವು ಮುಗಿದುದು. ೪ ನೆ ಅಧ್ಯಾಯವು. ತಿ ಪು ರಸ ಸ್ಮಾ ರ ವು - ಎಲೆ ಸಿದ್ದರಾಮೇಶನೆ ಕೇಳು-ಕ್ರರಶಿಂಶುಮಾರನು ತನಗೆ ಬೇ ಕಾದಷ್ಟು ಚತುರಂಗಸೈನ್ಯವನ್ನು ಕೂಡಿಕೊಂಡು ಯುದ್ಧಾಂಗಣದ ಕಡೆಗೆ