644 ಚನ್ನ ಬಸವೇಶವಿಜಯಂ (೪೦ದ ೪) [ಅಧ್ಯಾಯ ಉಳಿದಿರುವನೆಂಬುದನ್ನು ನಾನು ತಿಳಿದಿರಲಿಲ್ಲ; ನೀವಾದರೂ ಇದುವರೆಗೂ ಹೇಳಬೇಡವೆ ? ಚೆನ್ನಾಯಿತು ! ನಮ್ಮ ಪ್ರನನ್ನು ಕೊಂದ ಹರಿಯನ್ನು ಮರೆಹಾಕಿಕೊಂಡು ನನ್ನನ್ನು ಜೈಸುವುದಕ್ಕಾಗಿ ಬರುವನೆಂಬ ಆ ಗಂ ಡುಗಲಿಯ ಹೆಸರೇನು ? ಮತ್ತೊಮ್ಮೆ ಹೇಳಿರಿ, ಎಂದು ಗರೋಕ್ತಿಯ ನ್ಸಾಡಿ ಹೂಂಕರಿಸಿದನು. ಮತ್ತೂ ನಾರದನ ಕಡೆಗೆ ತಿರುಗಿ-ಋಷಿವರ ರೆ ! ಹಾಗಾದರೆ ಹರಿಬ್ರಹ್ಮಾದಿಗಳೆಲ್ಲ ಆ ಬೂದಿಬಡಕನೊಡನೆ ನಮ್ಮ ಮೇ ಲೆ ದೊಡ್ಡದಾಗಿ ದೂರು ಹೇಳಿಕೊಂಡರೋ ? ಅವರ ಮಾತಿಗೆ ಮರುಳಾಗಿ ಆ ಅರೆಗಂಡುಸು ನನ್ನ ಮೇಲೆ ಯುದ್ಧಕ್ಕೆ ಬರುವನೋ ? ಬರಲಿ ; ಬರಲಿ; ಎಂದು ತಲೆಕುಣಿಸಿ, ಮಮ್ಮಿಯನ್ನು ಮಾದಿಸಿ ಕಳುಹಿಕೊಟ್ಟನು. ಬಳ ಕ ಶತಮಾಯನೆಂಬ ದಳವಾಯಿಯನ್ನು ಕರಸಿ, “ ಕುಂಭ ಶುಂಭ ನಿಶುಂ ಭ ಜಂಭ ಲಂಬ ಶಬಲ ಪ್ರಬಲ ಸುಬಲ ವಿಪುಳ ಚಪಳ ಕಪಿಳ ವೀರ ಧೀರ ಹುಂಡ ಮುಂಡ ಚಂಡಾಸುರಾದಿ ರಾಕ್ಷಸಪ್ರಮುಖರನ್ನೆಲ್ಲ ಅವ ರವರ ಸೇನೆಯೊಡನೆ ಕೂಡಿ ಬರುವಂತೆ ಆಜ್ಞಾಪಿಸು, ಜಯಯಾತ್ರೆಯಲ್ಲೇ ರಿಯನ್ನು ಹೊಡೆಯಿಸು, ದೇವತೆಗಳ ಹುಟ್ಟನ್ನು ಈ ಬಾರಿ ನಿರೂಲಗೊ ೪ಸು, ಶಿವನ ಲೋಕಕ್ಕೆ ದಾಳಿಯಿಡಿಸು ?” ಎಂದು ಆಜ್ಞಾಪಿಸಿದನು, ಅಲ್ಲಿ ಕುಳಿತಿದ್ದ -ಅಂಧಕನ ಚಿಕ್ಕಪ್ಪನಾದ ಹಿರಣ್ಯಕಶಿಪುವಿನ ಮಗನಾದ-ಪ್ರಜ್ಞಾ ದನುಕೇಳಿ, ಎದ್ದು -'ಅನುಜನೆ! ಇದೇನು ನಿನ್ನ ಸಾಹಸ? ಶಿವನೆಂದರೇನು? ನೀನೆಂದರೇನು ? ಅವನ ಮೇಲೆ ನೀನು ಕೈವಾಡುವುದೆಂದರೇನು ? ಅವ ನಾರು ? ನೀನಾರು ? ಎಂಬುದನ್ನು ನೀನು ವಿಚಾರಮಾಡಿ ತಿಳಿ ; ಶಂಕರ ನ ಕಣ್ಣನ್ನು ಪಾರತಿಯು ಮುಚ್ಚಲು, ಅದರಿಂದ ಹುಟ್ಟಿದ ಕತ್ತಲೆಯೇ ನೀನಾಗಿ ಶಿಶುರೂಪದಿಂದ ಶಿವನ ಬಳಿಯಲ್ಲಿ ಅಳುತ್ತ ನಿಂತಿದ್ದೆ ; ನಿಮ್ಮ ತಂ ದೆ ಹಿರಣ್ಯಾಕ್ಷನು ಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ಪುತ್ರವರವನ್ನು ಬೇಡ ಲು, ನಿನ್ನನ್ನೇ ನಿಮ್ಮ ತಂದೆಯ ಕೈಗೆ ಒಪ್ಪಿಸಿದನು ; ಈ ಸಂಗತಿಯು ನಿಜವೋ ಸುಳ್ಳೋ ಎಂಬುದನ್ನು, ನಿಮ್ಮ ಗುರುವಿನ ಮುಖದಿಂದಲೇ ಕೇ ಳು ; ತೋಳುಗಳು ಬಲಿತಮಾತ್ರದಿಂದ ಕೊಬ್ಬಿ ತಾಯನ್ನೇ ಮೋಹದಿಂ ದ ಆಲಿಂಗಿಸಲು ಪ್ರಯತ್ನಿಸುವವನಂತೆ ನೀನು ಜನಕನಾದ ಶಿವನಮೇಲೆ ಯೇ ಯುದ್ಧಕ್ಕೆ ಹೊರಡಬಹುದೆ ? ಅದು ನಿನಗೆ ಶ್ರೇಯಸ್ಕರವಾಗುವುದೆ? 0 #
ಪುಟ:ಚೆನ್ನ ಬಸವೇಶವಿಜಯಂ.djvu/೨೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.