ܪܘܘܿ. ಅಂಧಕಾಸುರಸಾರವು tod ಆಧುತ ಮೊದಲಾದ ಅಗ್ರನರನಭೇದಗಳನ್ನು ಮುಗಿಸಿ, ಪತಕಾದಿಹಸ್ಯ ಭಾವಗಳನ್ನೂ, ಕಂಪಿತ ಉದ್ದಾ ಹಿತ ಮೊದಲಾದ ಕಟಭಂಗಿಭೇದಗ * ಳನ್ನೂ, ಊರ್ಧ, ವಿಸ್ತ್ರತ ಮೊದಲಾದ ಭುಜಭೇದಗಳನ್ನೂ, ನಾನಾ ಜಂಘಾಭೇದಗಳನ್ನೂ ತೋರಿಸಿ, ಸ್ಥಾಯಿ ಸಂಚಾರಾದಿಭಾವಗಳನ್ನು ಹಿಡಿದು, ಕಾಯಕ ವಾಚಕ ಅಹಾರ ಸಾತ್ವಿಕ ಮೊದಲಾದ ಅಭಿನಯಗ ಳನ್ನು ಮಾಡಿ, ನವರಸವನ್ನು ಅನುಸರಿಸಿ, ಗಮಕ ತಿರುಗು ಬಿರುಗು ಬೇಡ ಗು ಬಿನ್ನಣಗಳನ್ನು ಪರಿಪರಿಯಾಗಿ ಪ್ರಸರಿಸಿ, ಅತಿಚಮತ್ಕಾರದಿಂದ ಭರ ತಶಾಸ್ತ್ರ ಮಗ್ನಗಳನ್ನೆಲ್ಲ ಲೋಕಕ್ಕೆ ವಿಸ್ತರಿಸಿ, ಮಹಾನಾಟ್ಟವನ್ನು ಮಾಡಿ ದನು. ಮುಡಿಯಲ್ಲಿದ್ದ ಗಂಗೆಯು ಜರ್ಝರಿತವಾಗಿ ದಿಂಡಲಕ್ಕೆಲ್ಲಚೆಲ್ಲಿತು. ಸರ್ಪಗಳು ಕುಲುಕಾಡಿ ಕಾರಿದ ವಿಷವು ಅಗ್ನಿ ಕಣವನ್ನು ಸುರಿಸಿತು. ಸು ರಿದ ಬೆವರು ಪ್ರವಾಹವಾಗಿ ಹರಿದಿತು. ಪದಹತಿಯಿಂದ ದಿಗ್ಗಜಗಳೂ ಕೂಲ್ಕ ಶೇಷರೂ ತಲೆದಗ್ಗಿಸಿ ಬಿದ್ದು ಕೊಂಡರು, ತಿರುವಿನ ರಭಸದಿಂದ ಹು ಟ್ಟದ ಬಿರುಗಾಳಿಯ ಬಡಿತದಿಂದ ಕುಲಾಚಲಗಳು ಉರುಳಾಡಿದುವು. ನಕ್ಷ ತ್ರಗಳು ಉದುರಾಡಿದುವು. ಲೋಕವೆಲ್ಲ ಇದೇನೋ ಅವಾಂತರಪ್ರಳಯ ವುಂಟಾಯ್ಕೆಂದು ಭಯಗೊಂಡಿತು, ಗಿರಿಜೆಯು ಪತಿಯ ಮಹಾನರನ ವನ್ನು ನೋಡಿ ವಿಸ್ಮಯಗೊಂಡಳು. ದೇವದುಂದುಭಿಯು ಮೊಳಗಿ, ಪು ಪೃವೃಷ್ಟಿಯು ಕರೆದಿತು. ಮನುಮುನಿಪ್ರಮಥಗಣಾದಿಗಳು ಜಯಜ ಯಧಾನವನ್ನು ಮಾಡಿದರು. ಆಗ ಶಿವನು ಅಂಧಕಾಸುರನ ದೇಹದ ಮೇ ಲಿಂದ ಇಳಿದನು. ಅವನಿಷ್ಟ ಪ್ರಕಾರ ಗಣಪದವಿಯನ್ನು ಅನುಗ್ರಹಿಸಿದನು. ಸಕಲಸೇನಾಸಮೂಹದೊಡನೆ ಏಾರತೀಸಮೇತನಾಗಿ ಅತಿವೈಭವದಿಂದ ಕೈಲಾಸಕ್ಕೆ ತೆರಳಿದನು ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ಹತ್ತನೆ ಅಧ್ಯಾಯವು ಸಂಪೂರ್ಣವು. » ೧೧ ನೆ ಅಧ್ಯಾಯವು. ಕಾಲ ಹ ರ ಲಿ ಲೆ , ಸಿದ್ಧರಾಮೇಶನೆ ಕೇಳು, ಪೂರದಲ್ಲಿ ಶ್ವೇತನೆಂಬ ರಾಜನೊಬ್ಬನು ಅತ್ಯಂತಭಾಗ್ಯಶಾಲಿಯಾಗಿ, ಅನೇಕ ರಾಷ್ಟ್ರ ದುರ್ಗಗಳನ್ನು ಜೈಸಿ,
ಪುಟ:ಚೆನ್ನ ಬಸವೇಶವಿಜಯಂ.djvu/೩೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.