ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(o೪ ಕನ್ನಬಸವೇಳವಿಜಯಂ (wಂಡಳಿ) [ಅಧ್ಯಾಯ ರಾಜ್ಯವನ್ನಾಳಕೊಂಡಿರುತ್ತ, ಒಂದುದಿವಸ ತನ್ನ ಚತುರಂಗಸೇನೆಯೊ ಡನೆ ಕೂಡಿ, ಮಹಾವಾದ್ಯವೈಭವದಿಂದ ಪಟ್ಟಣದ ಹೊರಗಣ ಬೈಲಿನಲ್ಲಿ ವಿನೋದಯುದ್ಧವನ್ನು ಮಾಡಿ ಬರುವುದಕ್ಕಾಗಿ ಅಂದಳವನ್ನೇರಿ ರಾಜವೀ ಧಿಯಲ್ಲಿ ಹೋಗುತ್ತಿದ್ದನು. ಆ ಪಟ್ಟಣದಲ್ಲಿದ್ದ ಒಬ್ಬ ವರಕನು ತನ್ನ ವ್ಯಾಪಾರಕ್ಕಾಗಿ ದೀಪಾಂತರಕ್ಕೆ ಹೋಗಿರಲು, ಅವನ ಪತ್ನಿಯು ರಾಜ ನ ಉತ್ಸವವನ್ನು ನೋಡುವುದಕ್ಕಾಗಿ ಮನೆಯ ಬಿಸಿಲುಪ್ಪರಿಗೆಯನ್ನೇರಿ ನಿಂತಿದ್ದಳು, ಆಕೆಯ ನವಯಾವನರೂಪವಿಲಾಸವಿಭ್ರವಾದಿಗಳು ರಾಜನ ಕಣ್ಣಿಗೆ ಬಿದ್ದು ವು, ಕೂಡಲೇ ಅವನ ಇಂದ್ರಿಯಗಳು ಮುಗ್ಧವಾದುವು. ಮನಸ್ಸು ಆಕೆಯಲ್ಲೇ ನಟ್ಟಿತು, ಕಾಮಬಾಣವೀಡಿತನಾಗಿ, 'ಧೃತಿಗೆಟ್ಟು ಲಜ್ಜೆ ಬಿಟ್ಟು, ವಿರಹಾಕುಲನಾದನು. ಚತುರಂಗಸೇನೆಯೊಡನೆ ರಾಜನದೇ ಹವು ಮಾತ್ರ ಹೋಗುತ್ತಿದ್ದಿತೇ ಹೊರತು ಮನೋವ್ಯಾಪಾರವೆಲ್ಲ ಅವಳ ಛೇ ಲೀನವಾಗಿದ್ದಿತು. ಪಟ್ಟಣದ ಹೊರಗಣ ಬೈಲಿನಲ್ಲಿ ತನ್ನ ಸೇನೆಯು ವಿನೋದಯುದ್ಧವನ್ನು ಮಾಡುತ್ತಿದ್ದರೂ ರಾಜನು ಅದರಲ್ಲಿ ಮನಸ್ಸಿಲ್ಲದೆ ಚಿತ್ರಪ್ರತಿಮೆಯಂತೆ ಕುಳಿತಿದ್ದನು, ಅಲ್ಲಿಂದ ಹಿಂತಿರುಗಿ ಅರಮನೆಯ ಬಾ ಗಿಲಲ್ಲಿಳಿದು, ಪರಿವಾರವನ್ನೆಲ್ಲ ಕೈಸನ್ನೆಯಿಂದಲೇ ಕಳುಹಿಸಿ, ಆರತಿಯೆ ಇುವ ಅಂಗನೆಯರನ್ನು ನೋಡಿ ಹೌಗುಪ್ಪೆಗೊಂಡು, ಒಳಹೊಕ್ಕು, ಮಲ ಗುವ ಮನೆಗೆ ಹೋಗಿ, ಹಾಸುಗೆಯ ಮೇಲೆ ಮಲಗಿದನು. ಅಪ್ಪರಲ್ಲಿ ಸಂಧ್ಯಾಕಾಲವಾಯಿತು. ಸೂರನು ಮುಳುಗಿದನು. ರಾಜನ ಚಿತ್ರದಲ್ಲಿ ಮೋಹವು ಕವಿದಿರುವಂತೆ ಲೋಕವನ್ನೆಲ್ಲ ಕತ್ತಲೆಯು ಆವರಿಸಿತು. ಮದ ನನು ಲೋಕವಿಜಯಕ್ಕಾಗಿ ಧನುಸ್ಸಿನಲ್ಲಿ ಬಾಣಗಳನ್ನ ಹೂಡಿ ಹೊರಟ ನು, ದೊರೆಯು ವಿರಹಾಗ್ನಿಯಿಂದ ತಾಪಗೊಂಡು ಚಿಂತಿಸುತ್ತ, ತನಗೆ ಆಪ್ತಳಾದ ಸಖಿಯೊಬ್ಬಳನ್ನು ಕರೆದು, ಮೃದುವಾದ ಮಾತಿನಿಂದ • ಎಲೆ ಸಖಿ, ನಿನ್ನಿಂದ ನನಗೆ ಒಂದು ಕಾರವಾಗಬೇಕಾಗಿದೆ. ಇದುವ ರೆಗೆ ನಿನ್ನ ಆಪ್ತತನವು ನನ್ನ ಮನಮುಟ್ಟಿರುವುದರಿಂದ ನಿನ್ನಿಂದಲೇ ಆ ಕೆಲ ಸವು ನೆರವೇರುವುದೆಂದು ನಂಬಿ ನಿನಗೆ ಹೇಳುತ್ತೇನೆ, ಆ ಕಾರವನ್ನು ನೀನು ಮಾಡಿಕೊಟ್ಟರೆ ನನ್ನ ಪ್ರಾಣವು ಉಳಿಯುವುದು, ಇಲ್ಲದಿದ್ದರೆ ನನಗೆ ಮರಣವೇ ನಿಶ್ಚಯ; ಆ ಕಾರವಾವುದೆಂದರೆ- ಈ ದಿನ ನಾನು