೧೧] ಇಬಹರಳೆ kot ವನ್ನು ಕೇಳು- ಜೀವಾಂತದವರೆಗೂ ಸದ್ದದ ಗಂಧವನ್ನರಿಯದ ಅತಿ ಪಾಪಿಯಾದ ಒಕ್ಕಲಿಗನೊಬ್ಬನು ಕಡೆಗಾಲದಲ್ಲಿ ತನ್ನ ಮಗನನ್ನು ಕರೆದು, ಹದಕ್ಕೆ ಬಂದಿರುವ ತನ್ನ ಹೊಲವನ್ನು “ ಹರಗಣ್ಣ ” ಎಂದು ಬುದ್ದಿ ಹೇಳಿ ಸತ್ತನು. ಅಂತ್ಯಕಾಲದಲ್ಲಿ ಅವನ ಬಾಯಲ್ಲಿ “ ಹರ ಗಣ ಎಂಬ ಶಿವನಾಮೋಚ್ಛಾರವು ಕಂಡುಬಂದುದುಂದ, ಅವನನ್ನು ಶಿವದೂ ತರು ಕೈಲಾಸಕ್ಕೆ ಕರೆದೊಯ್ದ ರು. ಇದಲ್ಲದೆ ಸಾನಂದಮಹಾಮುನಿಯು ಯಮಲೋಕಕ್ಕೆ ಹೋಗಿ ಅಲ್ಲಿ ಪಂಚಾಕ್ಷರಮಹಾಮಂತ್ರವನ್ನು ದ್ರೋ ಪಿಸಲು, ನರಕಪೀಡಿತರಾಗಿದ್ದ ಜನಗಳೆಲ್ಲರೂ ಅದರ ಶ್ರವಣಮಾತ್ರದಿಂ ದಲೇ ಆ ಮಂತ್ರೋಚ್ಛಾರಣೆಯನ್ನು ತಾವೂ ಮಾಡಿ ಶಿವಲೋಕಕ್ಕೆ ತರ ಆದರು, ಮತ್ತೂ ಶಿವಪುಣ್ಣಕಾಗ್ನಪ್ರಭಾವವೊಂದನ್ನು ಹೇಳುತ್ತೇನೆ ಕೇಳು- ಒಬ್ಬ ಹಾರೂನು ಹೋಲಿತಿಯೊಡನೆ ಕೂಡಿ ಪಾಪಾಚರಣದಲ್ಲಿ ರುತ್ತಿರಲು, ಜಾತಿಯವರು ಅವನನ್ನು ಹೊರತೆಗೆದರು. ಅವನು ಆ ಚಂ ಡಾಲೆಯೊಡಗೂಡಿ ಕಾಡಿನಲ್ಲಿ ಮನೆಮಾಡಿಕೊಂಡಿದ್ದನು. ಆಕೆಯು ಸಾ ಯಲು, ಅವಳ ಹೊಟ್ಟೆಯಲ್ಲಿ ಹುಟ್ಟಿದ್ದ ಹೆಣ್ಣು ಮಕ್ಕಳನ್ನೇ ತಾನು ಕೂಡಿ ಕೊಂಡು, ಒಂದು ಹಾಳು ಡಿಯಲ್ಲಿ ವಾಸಿಸುತ್ತ ಕಾಲಯಾಪನೆ ಮಾಡು ತಿದ್ದನು. ರಾತ್ರಿಗಾಲದಲ್ಲಿ ಕಳ್ಳರು ಬಿದ್ದು ಹೊಡೆಯುವರೆಂಬ ಭೀತಿ ಯಿಂದ ಆ ದೇವಾಲಯದಲ್ಲಿನ ದೀಪವು ಆರಿಹೋಗದಂತೆ ಬತ್ತಿಯನ್ನೆತ್ತಿ ಬೆಳಕನ್ನು ಮಾಡಿಕೊಂಡಿದ್ದನು. ಅಷ್ಟೊಂದು ಸಾಮಾಚಾರಿಯಾಗಿದ್ದರೂ ದೇವಾಲಯದಲ್ಲಿ ದೀಪವನ್ನುರಿಸಿದ ಪುಣವಿಶೇಪದಿಂದ ಅವನು ಅಂತೃಕಾ ಲದಲ್ಲಿ ಶಿವದೂತರಿಂದ ಕೈಲಾಸಕ್ಕೆ ಒಯ್ಯಲ್ಪಟ್ಟನು, ಮೃಕಂಡುಮಪ್ರಿಯ ಹನ್ನೆರಡು ವರ್ಷದ ಮಗನು ತನ್ನ ಆಯುಸ್ಸು ಅಲ್ಲಿಗೇ ತೀರಿಬಂದ ಸಮಯ ದಲ್ಲಿ, ಘನವಾದ ಭಕ್ತಿಯಿಂದ ಶಿವಾರ್ಚನೆಯನ್ನು ಮಾಡುತ್ತ ಕುಳಿತಿರಲು, ಯಮನು ಅವನನ್ನು ತನ್ನ ಲೋಕಕ್ಕೆ ಎಳೆದುಕೊಂಡು ಹೋಗಬೇಕೆಂದು ಬಂದು, ಪೂಜೆಯಲ್ಲಿದ್ದ ಮಪಿ ಪುತ್ರನನ್ನು ಸೆಳೆಯುವುದಕ್ಕಾಗಿ ಅವನ ಕೊರಲಿಗೆ ಪಾಶವನ್ನು ಎಸೆದನು; ಕುಮಾರನಾದರೋ ಭಯದಿಂದ ನಡುಗಿ, ಲಿಂಗವನ್ನು ತಬ್ಬಿ, ಶಿವ ಭೋ! ಎಂದು ಕೂಗಿಕೊಂಡನು, ಆ ಕೂಡಲೇ ಪ್ರಸನ್ನ ರಕ್ಷಕನಾದ ಶಿವನು ಆಲಿಂಗದಲ್ಲಿ ಒಡೆದು ಮೂಡಿ, ಯಮನನ್ನು
ಪುಟ:ಚೆನ್ನ ಬಸವೇಶವಿಜಯಂ.djvu/೩೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.