Qng ೧e ಚನ್ನ ಬಸವೇಶವಿಜಯಂ (Fಂಡಳಿ) [ಅಧ್ಯಾಯ ಶೂಲದಿಂದಿರಿದು, ಭಕ್ತನನ್ನು ರಕ್ಷಿಸಿದನು, ಅದುಕಾರಣ, ಎಲೆ ದೊರೆ ಯೆ ! ನೀನೂಕೂಡ ಭಕ್ತಿಯಿಂದ ಸ್ವಲ್ಪ ಕಾಲ ಶಿವಾರ್ಚನೆಯನ್ನು ಮಾ ಡಿದರೂ, ಯಮಭಯವನ್ನು ಗೆದ್ದು ಸುಖಸಡುವೆ ” ಎಂದು ಹೇಳಲು, ಕಬ್ಬುನವು ಸಿದ್ದ ರಸಸಂಸದಿಂದ ಸುವಕ್ತವಾಗುವಂತೆ, ರಂಭೆಯ ಉಪ ದೇಶವಚನಪ್ರಭಾವದಿಂದ ರೈತನ ದುಮ್ಮನಸ್ಸು ನಿಲವಾಯಿತು. ಸುರ ತೇಚ್ಚೆಯಳಿದು ಶಿವ ಪೂಜೇಟ್ಟೆಯು ಮೂಡಿತು. (ಸದ್ಯೋಧೆಯು ಯಾವ ಶ್ರೇಯಸ್ಸನತಾನೇ ಉಂಟುಮಾಡುವುದಿಲ್ಲ ?) ಆ ಕೂಡಲೇ ಕ್ಷೇತನು ( ತಥಾಸ್ತು ೨” ಎಂದನ, ರಂಭೆಯು ಪಾವ್ಯಾರ್ಧಾತವನೀಯ ವಸ್ತ್ರ, ಭಸಿತ ರುದ್ರಾಕ್ಷ ಗಂಧ ಮಾಲ್ಕ ಧೂಪ ದೀಪ ನೈವೇದ್ಯಾದಿ ಪರಿಕರಗಳನ್ನೆಲ್ಲ ಅಣಿಮಾಡಿಸಿದಳು, ಅವನ್ನೆಲ್ಲ ಶೈತನು ನೋಡಿ, “ ರಂಭಾದೆವಿಯೆ ! ಪಾಪಾತ್ಮನಾದ ನಾನು ನಿನ್ನನುಗ್ರಹದಿಂದ ಸುಕೃತಿಯಾದೆನು, ಶಿವಾರ್ಚನೆ ಯನ್ನು ಮಾಡುವ ಕುಮವನ್ನೆಲ್ಲ ನನಗೆ ತೋರಿಸಿಕೊಟ್ಟು, ಉದ್ದರಿಸು ?” ಎಂದು ಪ್ರಾರ್ಥಿಸಿದನು, ಆಕೆಯು ಆತನಿಗೆ ಮಂತ್ರೋಪದೇಶ ಪೂರಕ ವಾಗಿ ಹಸ್ತಕ್ಕೆ ಶಿವಲಿಂಗವನ್ನು ಕೊಟ್ಟು, ದೀಕ್ಷೆಗೊಳಿಸಿ, ಪೂಜಾಧಿಕಾ ರವನ್ನಿತ್ತು, ಕ್ರಮವಾಗಿ ಸಾಂಗಶಿವಾರ್ಚನೆಯನ್ನು ಮಾಡಿಸಿದಳು. ಒಂ ದೊಂದುಪಚಾರಗಳನ್ನು ಮಾಡುತ್ತ ಬಂದಂತೆ ಆ ಶೈತನ ಮನಸ್ಸಿನ ಭ ಕ್ರಿಯೂ ಒಂದೊಂದು ಮೆಟ್ಟಿಲಾಗಿ ಏರುತ್ತ ದೃಢಗೊಂಡಿತು, ಸಕಿ ಪಚಾರಗಳನ್ನೂ ಮುಗಿಸಿ ಮಹಾಮಂಗಳಾತ್ತಿಯನ್ನು ಮಾಡುವ ಹೊತ್ತಿಗೆ ಬೆಳಗಿನ ಕೋಳಿಗಳು ಕೂಗಿದುವು. ಅರುಣೋದಯವಾಯಿತು. ರೈತ ನು ಆನಂದಬಾಷ್ಯಗಳಿಂದ ಕೂಡಿ ಮೈಮರೆದು ಶಿವನಿಗೆ ಪ್ರಸ್ಥಾಂಜಲಿ ಯನ್ನು ಸಮರ್ಪಿಸುತ್ತಿದ್ದನು. ಅಷ್ಟರಲ್ಲಿ ಯಮದೂತರು ಬಾಗಿಲಿಗೆ ಬಂ ದು, ನಿನ್ನಲ್ಲಿ ಬಿಟ್ಟಿದ್ದವನನ್ನು ಕಳುಹಿಕೊಡು, ಎಂದು ರಂಭೆಯನ್ನು ಕೇಳಿದರು. ಆಕೆಯು ಶಿವಪೂಜಾಗಾರದಲ್ಲಿ ರೈತನಿರುವನೆಂದು ಹೇಳಿ ಅದರ ಬಾಗಿಲನ್ನು ತೋರಿಸಿದಳು. ಅದರೊಳಗೆ ಶೈತನು ಶಿವಾರ್ಚನ ಲೋಲವಾಗಿರುವುದನ್ನು ದೂತರು ಕಂಡು, ಒಳಹುಗುವುದಕ್ಕೆ ಅಂಚೆ, ಹಿಂದೆಗೆದು, ಯಮನ ಬಳಿಗೆ ಓಡಿಹೋಗಿ,_ ಜೀಯಾ! ಪಾಪಿಷ್ಠನಾದ ಶೈತರನ್ನು ನಿನ್ನಪ್ಪಣೆಯವರೆ ರಂಭೆಯ ಮನೆಗೆ ನಿನ್ನೆ ಕಳುಹಿಸಿದ್ದು,
ಪುಟ:ಚೆನ್ನ ಬಸವೇಶವಿಜಯಂ.djvu/೩೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.