೧೧] ಕಾಲಹರಲೀe (೧೧ ಇಗ ಕರತರುವುದಕ್ಕೆ ಹೋಗಿರುವಲ್ಲಿ, ಆತನು ವಿಭೂತಿ ರುದ್ರಾಕ್ಷರ ಳನ್ನು ಧರಿಸಿ ಶಿವಪೂಜಾಲೋಲನಾಗಿ ಕುಳಿತಿದ್ದು ದನ್ನು ಕಂಡೆವು; ಅದೇ ನು ವಿಯೊ ! ನಮಗೆ ತಿಳಿಯದು, ಅವನನ್ನು ಹಿಡಿಯಲು ಧೈರವಿ ಲ್ಲದೆ ಓಡಿಬಂದೆವು ” ಎಂದು ಬಿನ್ನೈಸಿದರು, ಅಂತಕನು ಕೇಳ ಹಲ್ಲಡಿ ದು-ಆಹಾ ! ಇದೆಲ್ಲಾ ರಂಭೆಯ ಕುಚೇಷ್ಮೆ ! ಅವನು ತಪ್ಪಿಸಿಕೊಂ ಡರೆ, ಆ ಮಾಯೆಗಾರಿಯನ್ನೇ ಎಳತಂದು ಅವಳಹಂಕಾರವನ್ನು ಇಳುಹಿ ಸುತ್ತೇನೆ ! ಎಂದು ಗರ್ಜಿಸಿ, ದಂಡವನ್ನು ಹೆಗಲಮೇಲಿಟ್ಟು ದೂತರನ್ನು ಕೂಡಿಕೊಂಡು, ಅಮರಾವತಿಯಲ್ಲಿರುವ ರಂಭೆಯ ಮನೆಗೆ ಬಂದನು - « ಎಲೆ ಸೂಳೆ ! ಏನು ಕೆಲಸವನ್ನು ಮಾಡಿದೆ ? ನಿನ್ನ ಬಳಿಯಲ್ಲಿ ಬಿಟ್ಟ ದ್ದ ಪಾಪಿಯನ್ನು ಅದೇಕೆ ಕಳುಹಲೊಲ್ಲೆ? ಎಂದು ಮೊರೆದು ಕೇಳಿದನು. ಆಕೆಯಾದರೆ-- ಯಮರಾಜನೆ ! ನನ್ನ ತಡೆಯೇನೂ ಇಲ್ಲ; ಅದೋ ಆ ಮನೆಯಲ್ಲಿ ಶೈತನಿರುವನು; ಕರೆದುಕೊಂಡು ಹೋಗು; ಎಂದು ನುಡಿದಳು. ಆಗ ಅಂತಕನು ಹೂಂಕರಿಸಿಕೊಂಡು ಶಿವಾಗಾರದಕಡೆಗೆ ನು ಗುತ್ತಿರಲು, ರಂಭೆಯು ಯಮಧರನೆ ! ಶಿವಾರಾಧಕರಮೇಲೆ ನೀನು ಕೈಮಾಡಬಹುದೆ? ಹಿಂದೆ ಮಾಲ್ಕಂಡೇಯನನ್ನು ನೀನು ಸೆಳೆದಾಗ ಶಿವನು ಎಚ್ಚರಿಸಿದುದನ್ನು ಮರೆತುಬಿಟ್ಟೆಯಾ ? ಎಂದು ಹೇಳಲು, ಕೃತಾಂತನು ಕೆಂಗಣ್ಣನ್ನು ಬಿಟ್ಟು, “ ನೀನೂ ನಿನ್ನ ಶಿವನೂ ಮಾಡುವುದನ್ನು ನೋಡಿ ಕೊಳ್ಳುತ್ತೇನೆ ” ಎಂದು ತಿರಸ್ಕರಿಸಿ, ಒಳನುಗ್ಗಿ ಆರ್ಭಟಿಸಿ, ಪೂಜ್ಯ ಲ್ಲಿದ್ದ ಶ್ರೇತನ ಕೊರಳಿಗೆ ಸಾಶವನ್ನಿಟ್ಟು ಸೆಳೆದನು. ಶೈತನು ಕಣ್ಣನ್ನು ಬಿಟ್ಟು, ಇದಿರಿಗೆ ನಿಂತಿದ್ದ ಯಮನ ಭೀಕರಾಕೃತಿಯನ್ನೂ ತನ್ನನ್ನು ಸೆಳೆ ಯುತ್ತಿರುವುದನ್ನೂ ನೋಡಿ ಹೆದರಿ,ಶಿವನೇ ! ಭಕ್ತವತ್ಸಲನೇ ! ಮೃ ತ್ಯಂಜಯನೇ ! ರಕ್ಷಿಸು ರಕ್ಷಿಸು !! ಎಂದು ಮೊರೆಯಿಟ್ಟನು. ಪ್ರಸನ್ನ ರಕ್ಷಕನಾದ ಶಿವನು ಆ ಆರಧನಿಯು ಮುಗಿಯುವಷ್ಟರಲ್ಲೇ ಶೇತನ ಕರಕಮಲದ ಇಸ್ಮಲಿಂಗದಿಂದಲೇ ಆವಿರ್ಭವಿಸಿದನು, ವಿಸ್ಸು ಬ್ರಹ್ಮಾದಿ ಗಳೂ ಪ್ರಮಥರುದ್ರಗಣರೂ ಒಡನೆಯೇ ಸಿದ್ಧರಾದರು. ಜಡೆಮುಡಿಯ, ದೇವಗಂಗೆಯ, ಕುಂಡಾಭರಣವೂ, ಭುಜಗಮಾಲೆಯೂ, ಪರಶಿವನ ಲೈಪ್ಪಿರಲು, ತನ್ನ ಬಲಗೈಯನ್ನು ಕ್ಷೇತನ ಶಿರಸ್ಸಿನಮೇಲಿಟ್ಟು ತಡವಿ,
ಪುಟ:ಚೆನ್ನ ಬಸವೇಶವಿಜಯಂ.djvu/೩೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.