(e ಚನ್ನ ಬಸವೇಶವಿಜಯಂ (ಕಾಂಶ ೪) ಅಧ್ಯಾಯ ತಮನು ಆ ಯಮ್ಮೆಗಳಮೇಲೆ ಕೋಪಗೊಂಡು ( ಎಲೈ ಮಾಯಾವಿಗಳ ರಾ ! ಯಾವಕಾರಣದಿಂದ ನೀವು ಮೋಸಗೊಳಿಸಿ ಕಪಟದಿಂದ ಹೋಗಿ ರೋ ಆ ಕಾರಣದಿಂದ ನೀವು ಭೂಲೋಕದಲ್ಲಿ ವೇದಬಾಹ್ಯರಾಗಿ ಜನಿಸಿ, ಮೋಹಶಾಸ್ತ್ರಗಳನ್ನು ಕಲಿತು, ಶಿವಭಕ್ಕಿ ಶಿವಚಿಹ್ನೆಗಳಲ್ಲಿ ಪ್ರೇಮಿಗಳು ಗಿ, ಶಿವದ್ರೋಹಿಗಳಾಗಿ, ಕಪಟವಂತ್ರತಂತ್ರ ನಿಪುಣರಾಗಿ, ಜಗದಂಚಕ ರಾಗಿ, ಪಾಷಂಡಿಗಳಾಗಿ, ಅನೃತವಂಚನೆಗಳಿಂದ ಹೊಟ್ಟೆ ಹೊರೆಯುವ ಮು ಹಾಪಾಪಿಗಳಾಗಿ, ಕೊನೆಗೆ ನರಕವನ್ನು ಹೊಂದಿ”ಎಂದು ಶಾಪಕೊಟ್ಟನು. ಅತ್ಯ ಗಂಗೆಯನ್ನು ಹರಿಯಿಸಿಕೊಂಡುಬಂದು, ಹಸುವು ಸತ್ತಿದ್ದ ಸ್ಥಲದ ಮೇಲೆ ಸಾಗಿಸಿದನು. ಗೆ ಇತಮನು ತಂದುದರಿಂದ ಆ ನದಿಗೆ ಗೌತಮಿ ಯೆಂದು ಹೆಸರಾಯಿತು. ಗೋವನ್ನು ಸೊಂಕಿದುದರಿಂದ ಗೋದಾವರಿ ಯೆನಿಸಿತು. ಬಳಿಕ ಶಿವನು ತನ್ನ ಭಕ್ತನಾದ ಗೌತಮನು ದಾರುಕಾವನದ ಮಗಳಿಗೆ ಕೊಟ್ಟ ಶಾಪವನ್ನು ತಪ್ಪದೆ ನಡೆಯುವಂತೆ ಮಾಡಬೇಕೆಂದು ಯೋಚಿಸಿ, ವಿಷ್ಣುವನ್ನು ಕರೆದು, ನೀನು ಭೂಲೋಕದಲ್ಲಿ ಮೋಹಶಾಸ್ತ್ರ ವನ್ನು ಬಿತ್ತರಿಸಲು ಹೋಗು, ಎಂದು ಆಜ್ಞಾಪಿಸಲು, ಅಮೇರೆಗೆ ನಾ ರಾಯಣನು ಪಾಂಚರಾತ್ರವೈಖಾನಸ ಕಾಪಾಲ ಲಾಕುಳ ವಾಮ ಭೈರವ ಮೊದಲಾದ ಅನೇಕ ಮೊಹಕಾಸ್ತ್ರಗಳನ್ನು ರಚಿಸಿ, ಜನಗಳಿಗೆ ಬೋಧಿ ನಿದನು, ದಾರುಕಾವನದ ಖಗಳೆಲ್ಲ ಭೂಮಿಯಲ್ಲಿ ಹುಟ್ಟಿ, ಅವರೆಲ್ಲರ ನಂ ಶದವರೂ ಆ ಮೋಹಶಾಸ್ತ್ರಗಳಂತೆ ಆಚರಿಸಿ ನರಕಗಾಮಿಗಳಾದರು. ಆ ದರೆ, ಅತ್ರಿ ಕಶ್ಯಪ ಆಂಗಿರಸ ಕೌಶಿಕ ಭರದ್ವಾಜಾದಿ ಕೆಲವು ಮುನಿಗಳು ಮಾತ್ರ ಹರಿಯ ಮೋಹಶಾಸ್ತ್ರದ ಸ್ವರೂಪವನ್ನು ತಿಳಿದು, ಅದಕ್ಕೆ ಒಲಿ ಯದೆ, ಶಿವನನ್ನು ಕುರಿತು ತಪಸ್ಸನ್ನಾಚರಿಸಿದರು. ಅದಕ್ಕೆ ಪ್ರತ್ಯಕ್ಷನಾಗಿ ನಿಮ್ಮಿಷ್ಟವೇನೆಂದು ಸ್ವಾಮಿಯು ಕೇಳಲು, ದೇವೋತ್ತಮನ ! ನಮ್ಮ ಒಡನಾಡಿಗಳೆಲ್ಲ ಮೋಹಶಾಸಧ್ಯಯನದಿಂದ ಭಕ್ತಿಮೂರರಾಗಿ ಗತಿಬಾ ಹಿರರಾಗಿ ಕೆಟ್ಟುಹೋಗುತ್ತಿರುವರು ; ಸಚ್ಛಾಸ್ಯಬೋಧೆಯಿಂದ ಅವರ ನ್ನುದ್ಧರಿಸಬೇಕು ಎಂದು ಬೇಡಿದರು. ಅದಕ್ಕೆ ಶಿವನು ನನ್ನ ಅಪರಾವ ತಾರನಾದ ವೃಷಭೇಶನನ್ನು ಶ್ರೀಶೈಲಕ್ಕೆ ಕಳುಹಿಕೊಡುತ್ತೇನೆ, ಆತನು ಶೈವಾಗಮರಹಸ್ಯವನ್ನು ಬೋಧಿಸುತ್ತಾನೆ, ಹೋಗಿರಿ, ಎಂದು ಹೇಳಿ,
ಪುಟ:ಚೆನ್ನ ಬಸವೇಶವಿಜಯಂ.djvu/೩೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.