೧೨] ಸುಖಾವಹನ ಲೀಲೆ (c ಕಳುಹಿಕೊಟ್ಟನು. ಮತ್ತೂ ತಾನೂ ಒಂದು ತಲೆ ಎರಡು ಭುಜಗ ಳು ಮೂರು ಕಣ್ಣುಗಳನ್ನು ಧರಿಸಿ, ಶುದ್ಧ ಸ್ಪಟಿಕವರ್ಣದಿಂದ ಸುಖಾವ ಹಮೂರಿಯಾಗಿ ಕುಳಿತು, ವೃಪಾಧಿಪತಿಗೆ ಪಶುಪತತತ್ತೋಪದೇಶ ವನ್ನು ಮಾಡಿ, ಇದರ ರಹಸ್ವಾರ್ಥವನ್ನು ನೀನು ಜಗತ್ತಿಗೆ ಬೋಧಿಸು, ಎಂದು ಹೇಳಿ ಕಳುಹಿಕೊಟ್ಟನು.ಆತನು ಶಿವನಪ್ರೇರಣೆಯಮೇರೆಗೆ ಮೇದಿ ನಿಯಲ್ಲಿ ಅವತರಿಸಿ, ಅಜ್ಞಾನಿಗಳಾದ ಜನಗಳಿಗೆಲ್ಲ ಕೈವೋಪದೇಶವನ್ನು ಮಾ ಡಿ, ಶಿವಭಕ್ತಿಯನ್ನು ವೃದ್ಧಿಪಡಿಸಿ, ಕೈಲಾಸವನ್ನು ಸೇರಿದನು ; ಎಂದು ಚೆನ್ನಬಸವೇಶನು ಸಿದ್ಧರಾಮೇಶನಿಗೆ ನಿರವಿಸಿ, ಚ ೦ ಡ ವ ರ ಪ ದಾ ನ . - ಬ೪ಕ ಶಿವನ ಚಂಡವರಪ್ರದಾನಲೀಲೆಯನ್ನು ವಿವರಿಸತೊಡಗಿದ ನೆಂತೆಂದರೆ- ಶ್ರೀಶೈಲದ ನೆರೆಯಪಟ್ಟಣವೊಂದರಲ್ಲಿದ್ದ ಒಬ್ಬಾನೊಬ್ಬ ಶಿವದಿಂಹನಿಗೆ ಚಂಡನೆಂಬ ಪುತ್ರನಿದ್ದನು, ಆತನು ಪ್ರತಿದಿನವೂ ತನ್ನ ಮನೆಯ ದನಗಳನ್ನು ಕಾಡಿಗೆ ಅಟ್ಟಿಕೊಂಡುಹೋಗಿ ಮೇಯಿಸಿ ಬರು ತಿದ್ದನು. ಹೀಗಿರುವಲ್ಲಿ ಜನಗಳು ದೇವಾಲಯದಲ್ಲಿ ಶಿವಲಿಂಗಕ್ಕೆ ಅಭಿ ಪ್ರೇಕವನ್ನು ಮಾಡಿ ಪೂಜಿಸುವುದನ್ನು ಇವನು ಕಂಡು, ತಾನೂ ಹಾಗೆ ಯೇ ಪೂಜಿಸಬೇಕೆಂದು ಯೋಚಿಸಿ, ಹೊಳೆಯ ದಡದಲ್ಲಿನ ಮಳಲನ್ನು ಲಿಂಗದಂತೆ ಗುಡ್ಡ ಮಾಡಿ, ತನ್ನ ಹಸುಗಳ ಹಾಲನ್ನೆಲ್ಲ ಕರೆದು ಆ ಲಿಂಗ ಕೈ ಅಭಿಷೇಕಿಸಿ, ಅಡವಿಯ ಹೂವು ಪತ್ರಗಳನ್ನು ಎತ್ತಿ ತಂದು ಲಿಂಗಕ್ಕೆ ಧರಿಸಿ, ನಮಸ್ಕರಿಸಿ, ಸುತ್ತಲೂ ಆನಂದದಿಂದ ಕುಣಿದಾಡಿ, ಬಳಿಕ ಮನೆ ಗೆ ಹೋಗುತ್ತಿದ್ದನು, ನಿತ್ಯವೂ ಹೀಗೆ ಮಾಡುತ್ತಿರಲು, ಮನೆಗೆ ಬಂದ ಹಸುಗಳನ್ನು ಕರೆದಾಗ ಕೆಚ್ಚಲಲ್ಲಿ ಹಾಲೇ ಯಿಲ್ಲದಿರುವುದನ್ನು ತಾಯ್ತಂ ದೆಗಳು ನೋಡಿ, ಇದಕ್ಕೆ ಕಾರಣವೇನೆಂದು ಚಿಂತೆಪಡುತ್ತಿದ್ದರು, ಒಂ ದುದಿನ ಇದೇನು ಸಂಗತಿಯೋ ನೋಡಿ ತಿಳಿಯಬೇಕೆಂದು, ತಂದೆಯು ಗುಟ್ಟಾಗಿ ಮಗನ ಹಿಂದೆಯೇ ಕಾಡಿಗೆ ಹೋದನು, ಎಂದಿನಂತೆ ಮಗನು ಮಳಲಲಿಂಗದ ಆರಾಧನೆಯನ್ನು ಮಾಡುತ್ತಿದ್ದು ದನ್ನು ನೋಡಿ, ಪ್ರತಿದಿನ ವೂ ಹಾಲನ್ನು ಹೀಗೆಯೇ ಹಾಳ್ಳಾಡುತ್ತಿದ್ದನೆಂದು ಯೋಚಿಸಿ, ಸಿಟ್ಟು
ಪುಟ:ಚೆನ್ನ ಬಸವೇಶವಿಜಯಂ.djvu/೩೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.