ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಕವಿಜಯಂ (ಕಾಂಡ ೪) అధ్యయ ತರಗೆಲೆಗಳನ್ನೂ, ಕೆಲದಿನ ಜಲಾಹಾರ ವಾಯಾಹಾರಗಳನ್ನೂ ಮಾಡು ತಿದ್ದು, ಕಡೆಗೆ ನಿರಾಹಾರಿಯಾಗಿ ಉಗ್ರ ತಪಸ್ಸಿನಲ್ಲಿದ್ದನು. ಆಗ ಅರ್ಜು ನನ ತಂದೆಯಾದ ದೇವೇಂದ್ರನು ತನ್ನ ಮಗನ ತಪೋದಾರ್ಥವನ್ನು ಪರೀ ಕ್ಷಿಸುವುದಕ್ಕಾಗಿ ಬ್ರಾಹ್ಮಣವೇಷದಿಂದ ಬಂದು, ಅವನಿದಿರಿಗೆ ನಿಂತು, ಅಯ್ಯಾ ತಪಸ್ವಿ ! ನಿನ್ನ ವೇಷದ ವೈಚಿತ್ರವೇನು ? ನಿನ್ನ ಧನುರ್ಬಾಣ ಗಳತ್ತ ? ನಿನ್ನ ಭಸ್ಮರುದ್ರಾಕ್ಷಗಳತ್ತ ? ನಿನ್ನ ಶಾಂತಿಯತ್ತ ? ಈ ವೇ ಪ್ರದ ಕೊರತೆಯತ್ತ ? ಎಂದು ಹಾಸ್ಯಮಾಡಲು, ಅರ್ಜುನನು ಕಣ್ಣೆರೆ ದು, ಅಯ್ಯಾ ! ನಿಶ್ಚಲಚಿತ್ರದಲ್ಲಿ ಶಿವಧ್ಯಾನವು ದೃಢವಾಗಿರುವಾಗ, ಹೊ ರಗಿನ ವೇಷವನ್ನು ಕಟ್ಟಿಕೊಂಡೇನು ? ಎಂದನು. ಅದಕ್ಕೆ ಕಪಟವೇಷದ ಇಂದ್ರನು ಅಯ್ಯಾ ! ಮಹಾಮಹಾಯೋಗಿಗಳ ತಪಸ್ಸಿಗೂ ಗೋಚ ರಿಸದ ಶಿವನನ್ನು ನೀನು ಮೆಚ್ಚಿಸಿಕೊಳ್ಳುವೆನೆಂಬುದು, ಹೆಳವನು ಮರದ ತುದಿಯ ಹಣ್ಣನ್ನು ಬಯಸಿ ಪಡೆಯುತ್ತೇನೆಂದು ಪ್ರಯತ್ನಿಸುವಂತೆ ಆಗ್ಧ ಗ್ಯಕರವಾಗಿದೆ ಯೆನ್ನಲು, ತಪಸ್ಸಿಯು- ಅಹುದು, ಶಿವನು ಇತರರಿಗೆ ದುರ್ಲಭನೇಆದರೂ ಭಕ್ತರಿಗೆ ದುರ್ಲಭನಲ್ಲ; ನನ್ನ ದೃಢಭಕ್ತಿಯಿಂದ ಅವನ ಪಾದವನ್ನು ಹಿಡಿಯಬಲ್ಲೆನು; ಒಂದುವೇಳೆ ನನ್ನ ಭಕ್ತಿಗೆ ಆತನು ಮೆಚ್ಚದಿದ್ದರೆ, ಅವನ ಪಾದಕ್ಕೆ ನನ್ನ ಪ್ರಾಣವನ್ನು ಇಲ್ಲಿಯೇ ಸಮರ್ಪಿ ಸುವೆನು; ಎಂದು ಪ್ರತಿಜ್ಞಾಪೂರಕವಾಗಿ ನುಡಿಯಲು, ಅದಕ್ಕೆ ಇಂದ್ರ ನು ಮೆಚ್ಚಿ, ಸಂತೋಷದಿಂದ ನಿಜರೂಪನ್ನು ತೋರಿಸಿ, ನಿನಗೆ ತಪಸ್ಸಿ ದ್ವಿ ಯಾಗಲಿ ಯೆಂದು ಆಶೀರದಿಸಿ, ಸ್ವರ್ಗಕ್ಕೆ ತೆರಳಿದನು. ಇತ್ತ ಪಾರ್ಥ ನ ತಪಸ್ಸೇಜಸ್ಸು ವನಾಂತರವನ್ನೆಲ್ಲ ಮುಸುಗಿ ಉರಿಸುತ್ತ ಬಂದಿತು. ಖಗ ಮೃಗ ಭುಜಗ ತರು ಮಾಪ್ರಾಣಗಳೆಲ್ಲ ಬೆಂದುವು. ಆ ವನಾಂತರದಲ್ಲಿ ತಪ (ುಮಾಡುತ್ತಿದ್ದ ಮಗಳೆಲ್ಲ ಉರಿಗೆ ಬೆದರಿ, ಗಗನದಲ್ಲಿ ಹೋಗುತ್ತಿದ್ದ ನಾರದನನ್ನು ಕಂಡು, ನಮಗೊದಗಿರುವ ವಿಪತ್ತನ್ನು ಪರಿಹರಿಸಿಕೊಡಬೇ ಕೆಂದು ಬೇಡಿದರು: ಶಿವನಿಗೆ ಇದನ್ನರುಹಿ ಪರಿಹಾರಮಾಡಿಸಿಕೊಡುತ್ತ ನೆಂದು ಆತನು ನಂಬುಗೆಗೊಟ್ಟು, ಕೈಲಾಸಕ್ಕೆ ಹೋದನು, ಅದರಂತೆ ಶಂ ಕರನನ್ನು ಕಂಡು ಮಣಿದು, “ಜಗದೀಶನೆ! ಇಂದ್ರಕೀಲದಲ್ಲಿ ಒಬ್ಬನುತಪ ಸೃನ್ನಾಚರಿಸುತ್ತಿರುವನು; ಅವನನ್ನು ನೋಡಿದರೆ ಋಷಿಯಂತೆಯಕಾಣು