ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩]

ಕಿರತರುದಲೀಲೆ ವುದಿಲ್ಲ: ರಾಜನಂತೆಯೂ ಕಾಣುವುದಿಲ್ಲ; ಏಕೆಂದರೆ-ಬೆನ್ನಿನಲ್ಲಿ ಬಿಲ್ಲು ಬಾಣ ಬತ್ತಳಿಕೆಗಳು ತೋರುತ್ತಿರುವುವು; ಇಂಥವನು ಉಗ್ರ ತಪಸ್ಸಿನಲ್ಲಿ ಕುಳಿತಿರು ವುದರಿಂದ ಅದರಜ್ವಾಲೆಯು ವನಾಂತರವನ್ನೆಲ್ಲ ಸುತ್ತಿವುದು; ಅಲ್ಲಿರುವಮ ಪಿಗಳ ಜಪತಪೋವತಾದಿಗಳೆಲ್ಲ ನಿಂತುಹೋಗಿರುವುವು; ಈಚೋದ್ಯವನ್ನು ಕಂಡು ಸ್ವಾಮಿಗೆ ಬಿನ್ನಿಸುವುದಕ್ಕಾಗಿ ಬಂದೆನು ” ಎಂದು ಹೇಳಿದನು. ಶಿವನು ಅದನ್ನು ಕೇಳಿ ನಕ್ಕು, ಮುನಿಪನೆ ! ಆತನು ನಮ್ಮ ಪರಮಭ ಕ್ಯನು, ಅವನಿಂದ ಇತರರಿಗೆ ಯಾವ ಉಪಹತಿಯೂ ಉಂಟಾಗುವುದಿಲ್ಲ; ನಾವು ಅಲ್ಲಿಗೆ ಬಂದು, ಆ ತಪೋವನವನ್ನೆಲ್ಲ ಋಷಿಗಳಿಗೆ ಬಿಡಿಸಿಕೊಡು ತೇವೆ; ನೀನು ಹೋಗಿ ಭಯಪಟ್ಟಿರುವ ಆ ತಪಸ್ವಿಗಳಿಗೆಲ್ಲ ಧೈರವನ್ನು ಹೇಳು ?” ಎಂದು ಅಪ್ಪಣೆ ಮಾಡಿ ಕಳುಹಿಸಿ, ನಂದೀಶನನ್ನು ಕರೆದು, ಬೇಟೆಗೆ ಹೋಗುವುದಕ್ಕಾಗಿ ನಮ್ಮ ಪ್ರಥಮರನ್ನೆಲ್ಲಿ ಸಿದ್ಧರಾಗುವಂತೆ ನಿ೪ ಸು, ಎಂದು ಆಜ್ಞೆ ಕೊಟ್ಟು, ತಾನು ಬೇಡನ ವೇಷವನ್ನು ಧರಿಸಿದನು.- ತೊಡೆಗೆ ಚೆಲ್ಲಣವನ್ನಿಕ್ಕಿ ದಟ್ಟಿಯನ್ನು ಕಟ್ಟಿದನು. ಗುಂಜಿಯ ಆಭರಣಗ ಳನ್ನು ಧರಿಸಿ, ಹಣೆಗೆ ಕಸ್ತೂರಿಯ ತಿಕವನ್ನಿಕ್ಕಿದನು. ಕೆರವನ್ನು ಮೆ ಟ್ಟಿ ಬಿಲ್ಲು ಬಾಣಗಳನ್ನು ಸಿಡಿದನು. ಪ್ರಮಥರೆಲ್ಲರೂ ತಕ್ಕ ವೇಷದಿಂದ ಬಲೆ ಬಡಿಕೋಲು ಗಾಣ ಕಲ್ಲಿ ಮೊದಲಾದುವುಗಳನ್ನು ಹಿಡಿದು ನಾಯಿಗ ಳೊಡನೆ ಕೂಡಿಕೊಂಡು ಬಂದರು. ಪಾರತಿಯ ಪ್ರಮಥರ ಹೆಂಡತಿ ಯರೂ ಬೇಡಿತಿಯರಾಗಿ, ಚಿಗುರುಡೆ ದಂತದಬಳೆ ಮುತ್ತುಗುಂಜಿಗಳ ಹಾರ-ಇವುಗಳನ್ನು ತೊಟ್ಟು ಸಿದ್ಧರಾದರು. ಶಿವನಿಗೆ ವೇದಪುರಾಣಶಾ " ಗಳೇ ನಾಯಿ ನಿಡುಗೋಲು ಕವಣೆ ಕತ್ರಿ ಬಲೆ ಮೊದಲಾದ ಉಪ ಕರಣಗಳಾದುವು. ಸಕಲ ಪರಿವಾರದೊಡನೆ ಶಿವನು ಇಂದ್ರಕೀಲದ ಕಡೆಗೆ ಪ್ರಯಾಣಗೊಂಡನು. ಆ ಅರಣ್ಯವು ಗಿರಿನದಿಗಳಿಂದಲೂ, ಹುಲಿ ಕರಡಿ ಸಿ ಹೈ ಶರಭ ಶಾರ್ದೂಲಾದಿಮೃಗಗಳಿಂದಲೂ, ನಾನಾ ಪಕ್ಷಗಳಿಂದಲೂ, ಅಲ್ಲಿ ಗಲ್ಲಿಗೆ ತೋರುವ ಬೇಡರ ಹಟ್ಟಿಗಳಿಂದಲೂ ಶೋಭಿಸುತ್ತಿದ್ದಿತು. ಮಮ್ಮಿ ಗಳು ತಪಸ್ಸನ್ನಾಚರಿಸುತ್ತಿರುವ ಆಶ್ರಮಗಳು ತೋರುತ್ತಿದ್ದುವು. ಆ ಅರ ಇದಲ್ಲಿ ಕಿರಾತವೇಷದ ರುದ್ರನ ಕಡೆಯ ಪರಿವಾರದವರು ಬಲೆಗಳನ್ನು ಬಿಸಿ, ಹಕ್ಕಿಗಳನ್ನು ಹಿಡಿಯುತ್ತಲೂ, ಬಡಿಕೋಲಿನಿಂದ ಕುಟ್ಟಿ ಹೋದ 42