೩೦ ಚನ್ನಬಸವೇಕವಿಜಯ~ (ಕಾಂಡ ೪) [ಅಧ್ಯಾಯ ರುಗಳಿಂದ ಮೃಗಗಳನ್ನಿಚೆಗೆ ಹೊರಡಿಸುತ್ತಲೂ, ಓಡುತ್ತಿರುವ ಮೃಗಗ ೪ಗೆ ಬಾಣಗಳನ್ನು ಗುರಿಕಟ್ಟಿ ಹೊಡೆಯುತ್ತಲೂ, ಕವಣೆಗಳನ್ನು ಬೀಸಿ. ಹಾರುವ ಹಕ್ಕಿಗಳನ್ನು ಕೆಡಹುತ್ತಲೂ, ಹುಲಿಗಳನ್ನು ಕೆಣಕಿ ಭಲ್ಲೆ ಯಗ ೪ಂದಿರಿಯುತ್ತಲೂ, ಹಂದಿಗಳನ್ನು ನಿಡುಗತ್ತಿಗಳಿಂದ ಕಡಿಯುತ್ತಲೂ, ಮೃಗ ಗಳು ಹೋದ ಸ್ಥಲವನ್ನು ಅವುಗಳ ಹಜ್ಜೆಯ ಗುರಿನಿಂದ ತಿಳಿಯುತ್ತಲೂ ಬರುತ್ತಿದ್ದರು. 'ಇವರ ಗಾವಳಿಯಿಂದ ಅಲ್ಲಿನ ಮೃಗಗಳಲ್ಲಿ ಕೆಲವು ತಮ್ಮ ತಮ್ಮ ಮರಿಗಳನ್ನು ಅಲ್ಲಲ್ಲೇ ಬಿಟ್ಟು ಓಡಿದುವು. ಮತ್ತೆ ಕೆಲವು ಗುಹಾಂ ತರಗಳಲ್ಲೇ ಅಡಗಿದುವು. ಕೆಲವು ಓಡುತ್ತಿರುವಾಗ ಸಿಕ್ಕಿ ಹತವಾದುವು. ಕೆಲವು ಬಲೆಗೆ ಸಿಕ್ಕಿ ಬಿದ್ದು ಅರಚುತ್ತಿದ್ದುವು. ಹೀಗೆ ಕಪಟಕಿರಾತರು ವನವನ್ನೆಲ್ಲ ತಿರುಗಿ ಬೇಂಟೆಯಾಡಿಕೊಂಡು ಬರುತ್ತಿರಲು, ಒಂದಾನೊಂ ದು ಗುಹಾಂತರದಲ್ಲಿ ಅಡಗಿಕೊಂಡಿದ್ದ ಹಂದಿಯಾಕಾರದ ಮೂಕಾಸುರನೆಂ ಬ ದೈತ್ಯನು ಇವರ ಕೋಲಾಹಲವನ್ನು ಕೇಳಿ ಕೆರಳಿ, ಈಚೆಗೆ ಬಂದ ನು, ಬ್ರಹ್ಮನು ಸಿಡಿಲಿನಿಂದ ಅದರ ಕೋರೆದಾಡೆಯನ್ನೂ, ಮಿಂಚಿನ ಜ್ವಾಲೆಯಿಂದ ಅದರ ಕಣ್ಣುಗಳನ್ನೂ, ಉಕ್ಕಿನ ಸಲಾಕಿಗಳಿಂದ ಅದರ ರೋಮಗಳನ್ನೂ, ಕಗ್ಗಲ್ಲಿನ ಗುಂಡನ್ನು ಕಡೆದು ಅದರಶರೀರವನ್ನೂ, ನಿರಿ ನಿರುವನೋ ಎಂಬಂತೆ ಭೀಕರವಾದ ಆಕೃತಿಯ ಆ ಹಂದಿಯು ತೋರು ತಿದ್ದಿತು. ಅದು ಕಿರಾತರನ್ನು ಕಂಡಕೂಡಲೆ ಮಹಾರೋಪದಿಂದ ಅಟ್ಟ ಕೊಂಡು ಬಂದಿತು. ಇವರೆಲ್ಲರೂ ಗಡಗಡನೆ ನಡುಗಿ ದಿಕ್ಕು ದಿಕ್ಕಿಗೆ ಓಡಿ ಮುಗ್ಗುರಿಸಿ, ಮರಗಳನ್ನೇರಿ, ಚೀರುತ್ತ, ಹಾರುತ್ಯ, ಕೆಲವರು ಶಿವನಬ೪ ಗೋಡಿದರು. ಅನೇಕರು ಅದರ ಕುಡಿದಾಡೆಯ ಏಟಿನಿಂದ ತೊಡೆಸೀಳಿ, ಕಾ ಲುರಿದು, ಗಾಯಗೊಂಡು, ರಕ್ತ ಸುರಿದು, ನಿಕ್ಷೇತನರಾಗಿ ಬಿದ್ದರು. ಶಿವ ನುಹಂದಿಯ ಹಾವಳಿಯನ್ನು ಕೇಳಿ, ಘುಡುಘುಡಿಸುತ್ತಿದ್ದ ಅದರಿದಿರಿಗೆ ಗಿ, ಬಿಲ್ಲಿಗೆ ಬಾಣವನ್ನು ಹೂಡಿ, ಅದರ ಮೇಲೆ ಪ್ರಯೋಗಿಸಿದನು. ಅದು ನಟ್ಟ ಬಾಣದಸಹಿತ ಗರಗರನೆ ತಿರುಗುತ್ತ ಓಡಿ, ತಪಸ್ಸಿನಲ್ಲಿನಿಂತಿದ್ದ ಅರ್ಜಿ ನನ ಮುಂಗಡೆಗೆ ಹೋಗಿ, ಆರ್ಭಟಿಸಿ ಬಿದ್ದಿತು. ಆ ಶಬ್ದದಿಂದ ಪಾರ್ಥನು ಕಣ್ಣೆರೆದು ನೋಡುವಲ್ಲಿ, ಭೀಕರಾಕೃತಿಯ ಹಂದಿಯು ಕಂಡಿತು. ಕೂಡ ಲೇ ಬೆನ್ನಿನಬಿಲ್ಲು ಬಾಣಗಳನ್ನು ತೆಗೆದು ಹಂದಿಯನ್ನೆಚ್ಛನು, ಅದು ತಗಲಿ
ಪುಟ:ಚೆನ್ನ ಬಸವೇಶವಿಜಯಂ.djvu/೩೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.