n ಸಮಸPಾನಯವಂಕವಿವರಣದ 4೪೧ ಸತ್ಯವತೆಯೆಂಬ ಹೆಂಡತಿಯಲ್ಲಿ ಹರಿಶ್ಚಂದ್ರನು ಹುಟ್ಟಿದನು. ಅವನಿಗೆ ಲೋಹಿತಾಶನು, ಅವನಿಂದ ಹರಿತನು, ಅವನಿಗೆ ದುನ್ನು ವು, ಅವನಿಗೆ ವಿಜಯ ಸುತೇ ಜರೂ, ಅವರಲ್ಲಿ ವಿಜಯನಿಗೆ ರುಚಕನೂ, ಅವನಿಗೆ ಬಾ ಹುವೂ, ಅವನಿಂದ ಸಗರನೂ ಹುಟ್ಟಿದರು. ಅವನಿಗೆ ಪ್ರಭೆ ಭಾನುಮತಿ ಯರೆಂಬ ಇಬ್ಬರು ಹೆಂಡತಿಯರು, ಬಡಬಾಗ್ನಿಯ ಅನುಗ್ರಹದಿಂದ ಪ್ರಭೆ ಯಲ್ಲಿ ೩೦ ಸಾವಿರಮಕ್ಕಳನ್ನೂ, ಭಾನುಮತಿಯಲ್ಲಿ ಅಸಮಂಜಸನೆಂಬ ನಂ ಶೋದ್ದಾರಕನಾದ ಮಗನೊಬ್ಬನನ್ನೂ ಪಡೆದನು, ಅಸಮಂಜಸನಿಗೆ ಅಂಶು ಮಾನೆಂಬ ಮಗನಾದನು. ಅವನಿಗೆ ದಿಲೀಪನು, ಅವನಿಂದ ಭಗೀರಥನು ಜನಿಸಿದರು, ಇವನ ವಂಶದಲ್ಲಿ ಹುಟ್ಟಿದ ದೀರ್ಘಬಾಹು (ಅಥವಾ ಸ್ಟ ಲಬಾಹು) ಎಂಬುವನಿಗೆ ಅಜಮಹಾರಾಜನು ಮಗನಾದನು, ಅವನ ಮಗ ನು ರಘುವು, ಅವನಿಗೆ ಅಜನು ಪುತ್ರನು. ಅವನಿಂದ ದಶರಥನು ಹುಟ್ಟಿದನು. ಅವನಿಗೆ ರಾಮ ಲಕ್ಷಣ ಭರತ ಶತ್ರುಘ್ನರೆಂಬ ನಾಲ್ಕು ಮಂದಿ ಮಕ್ಕಳಾ ದರು, ಹಿರಿಯನಾದ ರಾಮನು ಬಾಲಲೀಲೆಯನ್ನು ಕಳೆದು ತಾಟಕಿಯೆಂಬ ರಾಕ್ಷಸಿಯನ್ನು ಕೊಂದು, ಭೂಪುತ್ರಿಯಾದ ಸೀತೆಯನ್ನು ಮದುವೆಯಾಗಿ ಬರುತ್ತಿರುವಾಗ, ಪರಶುರಾಮನು ಅಡ್ಡಗಟ್ಟಲು, ಅವನ ಬಿಲ್ಲನ್ನು ಕಿತ್ತು, ಪುರವನ್ನು ಹೊಕ್ಕು, ತನ್ನ ಪಟ್ಟಾಭಿಷೇಕಸಮಯದಲ್ಲಿ ತಂದೆಯಾಜ್ಞೆಯ ಪಾಲನೆಗಾಗಿ ವನಕ್ಕೆ ಹೋಗಿ, ತನ್ನ ತಮ್ಮಂದಿರು ಕರೆದರೂ ಪಟ್ಟಣಕ್ಕೆ ಬರದೆ, ಹಿರಿಯ ತಮ್ಮನಾದ ಲಕ್ಷ್ಮಣನೊಡನೆಯ ಹೆಂಡತಿಯೊಡನೆಯ ವನವಾಸಮಾಡಿಕೊಂಡಿರುತ್ಯ, ಅಲ್ಲಿ ಶೂರ್ಪನಟಿಯೆಂಬ ರಾಕ್ಷನಿಯ ಗನ್ನು ಕೊಯ, ಖ ದೂಷಣ ಶಿರಾದಿ ರಾಕ್ಷಸರನ್ನು ಕೊಂದು, ಹೊಂಬಣ್ಣದ ಜಿಂಕೆಯೊಂದನ್ನು ಕಂಡು, ಅದರ ಬೆನ್ನಟ್ಟಿ ಹೋದಾಗ, ತ ನ್ನ ಪತ್ನಿಯನ್ನು ರಾಕ್ಷಸನೊಬ್ಬನು ಕದ್ದೊಯ್ಯಲು, ಹಿಂದಿರುಗಿಬಂದು ನೀ ತೆಯನ್ನು ಕಾಣದೆ, ಅತಿಶಯವಾಗಿ ರೋದಿಸಿ, ಹಂಬಲಿಸಿ, ಅಲ್ಲಲ್ಲಿ ತಡಕಿ, ಬಳಿಕ ಹನುಮಂತನು ದೊರೆಯಲು, ಆದೂತನ ಮುಖದಿಂದ ಸೀತೆಯು ರಾವಣನ ಅಧೀನದಲ್ಲಿರುವಳೆಂದು ತಿಳಿದು, ಸುಗೀವನ ಸಹಾಯದಿಂದ ಸ ಮುದ್ರಕ್ಕೆ ಸೇತುವನ್ನು ಕಟ್ಟಿ, ದಾಂಟಿ, ಲಂಕೆಗೆ ಹೋಗಿ, ರಾವಣ ಕುಂಭಕರ್ಣಾದಿರಾಕ್ಷಸರನ್ನೆಲ್ಲ ಸಕ್ಕರಿಸಿ, ರಾವಣನ ತಮ್ಮನಾದ ವಿಭೀ Eಣ ಬ ಕ
ಪುಟ:ಚೆನ್ನ ಬಸವೇಶವಿಜಯಂ.djvu/೩೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.