4೪. ಚಿನ್ನ ಬಸವೇಶವಿಜಯа (ಕಾಂಡ ೫) [ಅಧ್ಯಾಯ ಪಣನಿಗೆ ಅಲ್ಲಿಯ ಪಟ್ಟವನ್ನು ಕಟ್ಟಿ, ಹೆಂಡತಿಯನ್ನು ಕರೆದುಕೊಂಡು ಬಂದನು, ಹೆಣ್ಣಿಗಾಗಿ ಕಪ್ಪಪಟ್ಟವನೇ ಇವನು, ಎಂದು ಚೆನ್ನಬಸವೇಶ ನು ನುಡಿಯಲು, ಸಿದ್ದರಾಮೇಶನು. ಎಲೆ ಗುರುವೆ, ಇವೆರಡು ವಂಶದವ ರಲ್ಲಿ ಅತಿದಾನಧಯ್ಯ ಪರೋಪಕಾರಗಳನ್ನು ಮಾಡಿ ಭೂಮಿಯನ್ನು ಆಳಿದ ವರಾರು ? ಚಕ್ರವರಿಗಳಾಗಿದ್ದವರಾರು ? ಅವರಲ್ಲಿ ಸರಿವಂತರಾರು? ಕೆಟ್ಟವರಾರು ? ಅದನ್ನು ನಿರೂಪಿಸಬೇಕೆಂದು ಕೇಳಿಕೊಳ್ಳಲು, ಚೆನ್ನಬ ಸವೇಶನು... ಅಯ್ಯಾ ! ಅವರಲ್ಲಿ ಹರಿಶ್ಚಂದ್ರ ನಳ ಪುರೂರವ ಸಗರ ಪುರು ಕುತ್ಸ ಕಾರವಿ ಎಂಬ ಈ ಆರುಮಂದಿಗಳೇ ಚಕ್ರವರಿಗಳು; ಸು ಹೋತ್ರ ಮರುತ೦ತ ಭರತ ಗಯ ಶತಿ ಬಿಂದು ಅಂಬರೀಷ ದಿ೪ಪ ರಘು ರಾಮ ಭಗಿರಥ ರಂತಿದೇವ ಯಯಾತಿ ನಹುಷ ದಂತಿ ಪೃಥು ಮಾಂಧಾತ ಎಂಬ ೧೬ ಮಂದಿಗಳು ಮಹಾರಾಜರು; ಜನಕ ದಶರಥ ಶಂತನು ಮೊದ ಲಾವವು ಸಹಸ್ರನಂದಿ ರಾಜರುಗಳು; ಈ ಭೂತಲದಲ್ಲಿ ನಳನೂ ಧಕ್ಕೆ ರಾಯನೂ ಜೂಜಾಡಿಯ, ಯಾದವರು ಮದ್ಯಪಾನದಿಂದ, ಕೀಚಕ ನಾಲಿ ರಾವಣರು ಪರಸ್ತ್ರೀ ವ್ಯಾಮೋಹದಿಂದಲೂ, ದಶರಥ ಪಾಂಡು ಭೂಪಾಲರ ಬೇಂಟೆಯ ವ್ಯಸನದಿಂದಲೂ, ದಕ್ಷನೂ ಬ್ರಹ್ಮನೂ ಶಿಶು ಪಾಲನೂ ಪರದೂಷಣೆಯಿಂದಲೂ, ಚಂದ್ರನೂ ತ್ರಿಶಂಕುವೂ ಗುರುದ್ರೋ ಹದಿಂದಲೂ ಕೆಟ್ಟರು, ಮಾಂಧಾತನು ಬೇಡಿದವರಿಗೆ ಕೊಟ್ಟ, ಕರ್ಣನು ಯುದ್ವಾಂಕಣದಲ್ಲಿ ಕೃಷ್ಣನಿಗೆ ವಜ್ರಕವಚವನ್ನು ಕೊಟ್ಟ, ಗರುಡನು ಕಚ್ಚಿ ಕೊಂದ ಹಾವಿಗೆ ಪ್ರಾಣವನ್ನು ಕೊಟ್ಟುದರಿಂದ ಜೀಮೂತವಾಹ ನೂ, ಇಂದ್ರನಿಗೆ ಬೆನ್ನಮೂಳೆಯನ್ನು ಕೊಟ್ಟುದರಿಂದ ದಧೀಚೆ, ವಾಮನಮೂರಿಗೆ ಭೂದಾನವನ್ನು ಮಾಡಿದುದರಿಂದ ಬಲಿಯ, ಕಿರಿ ಪುರುಷರಾದರು. ಅಷ್ಮೆ ಹೊರತು ಭಕ್ತಿಯಿಂದ ಇವರಾರೂ ಮೋಕ್ಷ ವನ್ನು ಪಡೆದವರಲ್ಲ. ಎಂದು ಚೆನ್ನ ಒಸವೇಶನು ನುಡಿದನೆಂಬಿಲ್ಲಿಗೆ ಬಂದನೆ ಅಧ್ಯಾಯವು ಸಂಪೂರ್ಣವು.
ಪುಟ:ಚೆನ್ನ ಬಸವೇಶವಿಜಯಂ.djvu/೩೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.