ಸಾನಂದಗಕ್ಕನ ಚರಿತನ ೩೫೬ ಮಪುರಾಣೇತಿಹಾಸಾದಿಗಳನ್ನೆಲ್ಲ ಓದಿ ಪರಮಜ್ಞಾನಿಯಾಗಿ, ವೈರಾಗ್ಯವು ಬಲಿದು, ದಂಡ ಕಮಂಡಲು ಕಾಪಾಯಾಂಬರ ವಿಭೂತಿರುದ್ರಾಕ್ಷಧಾರಿ ಯಾಗಿ ಅಪರಶಿವನಂತೆ ತೋರುತ್ತಿದ್ದನು. ಈ ಋಷಿಯು ದೃಢವಾದ ತಪ ದಿಂದ ಪರಶಿವನನ್ನು ಮೆಚ್ಚಿಸಿದನು. ಸ್ವಾಮಿಯು ಪ್ರತ್ಯಕ್ಷನಾಗಿ ಆವ ನಿಮ್ಮ ಪ್ರಕಾರ ಶಿವಮಂತ್ರವನ್ನು ತಾನೇ ಉಪದೇಶಿಸಿ, ಗಣಪದವಿಯನ್ನು ಕೊಟ್ಟು, ಅವನಿಗೆ ಸಂಚಾರಕ್ಕಾಗಿ ಪುಷ್ಪವಿಮಾನವನ್ನೂ, ಊಳಿಗದವ ರನ್ನೂ ಅನುಗ್ರಹಿಸಿ, ತೆರಳದನು. ಇತ್ತ ಸಾನಂದಗಣೇಶನು ಸದಾ ತನ್ನ ಬಳಿಯಲ್ಲಿ ಯಸ್ಯಮವನ್ನು ಕೂಡಿಕೊಂಡು, ತತ್ವಾರ್ಥವಿಚಾರ ದಿಂದ ಕಾಲವನ್ನು ಕಳೆಯುತ್ತಿದ್ದನು. ಒಂದುದಿನ, ಪ್ರಸ್ತಾಪತೇನ ಒಬ್ಬ ಯಮಿಯು ಭೂಲೋಕದ ಜನಗಳ ಪಾಪಪುಞ್ಞಾಚರಣಗಳನ್ನೂ, ಯಮು ದೂತರು ಪುಣ್ಯಶಾಲಿಗಳನ್ನು ಕರೆದುಕೊಂಡುಹೋಗುವ ರೀತಿಯನ್ನೂ,ಪಾ ವಿಗಳನ್ನು ಎಳೆದುಕೊಂಡು ಹೋಗಿ ಹಿಂಸಿಸುವುದನ್ನೂ ಕುರಿತು ವಿವರಿಸ ತೊಡಗಿದನು. ಹೇಗೆಂದರೆ- ಧರಾಚರಣೆಯಲ್ಲಿದ್ದ ಪ್ರಶಾಲಿಗಳನ್ನು ಕರೆ ದೊಯ್ಯುವ ರ್ಪಲೋಕದ ಮಾರ್ಗವನ್ನು-ಕಸ್ತೂರಿ ಪನ್ನೀರಿನ ಚಳಯವ ನ್ನು ಕೊಟ್ಟು , ಬಗೆಬಗೆಯ ರಂಗಿನ ರಂಗವಲ್ಲಿಗಳನ್ನು ಬಿಟ್ಟು, ಅಲ್ಲಲ್ಲಿಗೆ ಗುಡಿತೋರಣಚಪ್ಪರಗಳನ್ನು ರಚಿಸಿ, ಮೇಲ್ಕಟ್ಟುಗಳನ್ನು ಕಟ್ಟಿ, ಹೂ ವಿನ ಮಾಲೆಗಳನ್ನೂ ಮುತ್ತಿನ ಕುಚ್ಚುಗಳನ್ನೂ ಇಳಿಯಬಿಟ್ಟು, ಧೂಪದ ಹೊಗೆಯನ್ನು ಹಾಕಿ, ಮಘಮಘಿಸುವಂತೆ ಮಾಡಿರುವರು. ಅಲ್ಲಲ್ಲಿಗೆ ತಂ ಪಾದ ನೆಳಲಿನ ತೋಪುಗಳು, ತಿಳಿಗೊಳಗಳು, ಅರವಟ್ಟಿಗೆಗಳು, ಸಾಲು ಮರಗಳು, ಅತಾಗೃಹಗಳು, ನನ ಗಾನಮಂಟಪಗಳು, ಉದ್ಯಾನಗಳು, ಫಲವೃಕ್ಷಗಳು, ಕ್ರೀಡಾಪಕ್ಷಿಗಳು, ರಂಜಿಸುತ್ತಿರುವುವು, ಆ ದಾರಿಯಲ್ಲಿ ಬರುವ ಧಾತ್ಮರನ್ನು ನೋಡಿದವರು ಈ ದಿವಸ ನಿಮ್ಮ ದರ್ಶನದಿಂದ ನಾವು ಧನ್ಯರಾದೆವೆಂದು ನುಡಿದು, ಕೈ ಹಿಡಿದು ಒಂದೊಂದು ಮಂಟಪಗ ೪ಗೆ ಕರೆದುಕೊಂಡುಹೋಗಿ, ಪಾದ್ಯಾರ್ಘಾದಿಗಳನ್ನು ಕೊಟ್ಟು, ಪತ್ರ ಸಾನ್ನಭೋಜನ ಮಾಡಿಸಿ, ಬಗೆಬಗೆಯ ಹಣ್ಣು ಹೂವು ಗಂಧ ಮೊದಲಾ ದುವುಗಳನ್ನೊಪ್ಪಿಸಿ, ಉಪಚಾರಗಳಿಂದ ಸಂತೋಷಪಡಿಸಿ, ವಸ್ತಾನ ರಣಾಲಂಕಾರಗಳನ್ನಿತ್ತು ಮಲ್ಟಾವಿಸಿ, ಮುಂದೆ ಕಳುಹಿಕೊಡುವರು.
ಪುಟ:ಚೆನ್ನ ಬಸವೇಶವಿಜಯಂ.djvu/೩೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.