ಚನ್ನಬಸವೇಶವಿಜಯಂ(ಕಾಂಜ ೫) [ಅಧಿಷ್ಟ್ರೀಯ ರೂ ಲಿಂಗವನ್ನು ಕಟ್ಟಿಕೊಳ್ಳದಿದ್ದು , ಅವನು ಕಡಿಯಲಾಗಿ ನಿಜರೂಪವ ನ್ನು ತೋರಿಸಿ, ಕಡೆಗೆ ಅವನಿಂದ ಲಿಂಗಧಾರಣೆಯನ್ನು ಮಾಡಿಸಿಕೊಂ ಡನು, ಕುಂಬಾರಗುಂಡಯ್ಯನು ಮಡಕೆಯನ್ನು ತಟ್ಟುವ ಲಯಕ್ಕೆ ಸರಿ ಯಾಗಿ ಶಿವನನ್ನು ಕುಣಿಸಿದನು. ಬುದ್ದಯ್ಯನೂ ಭದ್ರಗಾಯಕದ ಅಲ್ಲಮ ನೂ ಕೆಶವನ ಹಾಡಿ ಶಿವನನ್ನು ಮೆಚ್ಚಿಸಿದರು. ಚೌಡಯ್ಯನು ಶಿವ ನನ್ನು ಕುಣಿಸಿದನು. ಸೋಮಣ್ಣನು ರಂಗವಲ್ಲಿಯ ಸೇವೆಯಿಂದಲೂ, ಸು ಕುಮಾರಯ್ಯನ ಕಳುವಿನ ಕಾಯಕದಿಂದಲೂ, ವಿರಕ್ತಮಾಣಿಕಯ್ಯನು ಲಿಂಗವನ್ನು ಮೆಟ್ಟಿಯ, ಹೂವಿನ ದಂಡಯ್ಯನು ಹೂವಿನ ಕರಡಿಗೆಯಿಂದ ಲಿಂಗವನ್ನು ಬಡಿದೂ, ಲಿಂಗದಿಂದ ಮುಕ್ತಿಯನ್ನು ಪಡೆದರು, ಪರವಾದಿಗ ಳನ್ನು ಕೊಲ್ಲುತ್ತಿದ್ದ ವೀರಸಂಗಯ್ಯನು ಜಂಗಮವೇಷದಿಂದ ಬಂದವನಿಗೆ ಶರೀರವನ್ನಿತ್ತನು. ಹೇರೂರನಾಚಯ್ಯನು ಜಂಗಮನಿಗೆ ತನ್ನ ದೇಹವನ್ನು ಕಡಿದೊಪ್ಪಿಸಿದನು, ವಿರಸೋಮಯ್ಯನು ಕಾಲಿನಲ್ಲಿ ದಸಿಯು ನಟ್ಟಿದ್ದ ರೂ ಲಕ್ಷಿಸದೆ ಶಿವನಿಗೆ ಅಭಿಷೇಕ ಜಲವನ್ನು ತಂದರಿ ನಿದನು. ವಿರಳೋ ಗಣ್ಣನು ತನ್ನ ದೇಹವನ್ನು ಆಯುಧಗಳಿ೦ದ ಕಡಿದುಕೊಂಡನು. ದಸರ ಝೂನು ಜಂಗಮವೇಷದ ಮೋಟನು ತನ್ನನ್ನು ಹೊಡೆದರೂ, ಅವನಿಗೆ ಕೈ ಯೆತ್ತನು. ಕೆಸಿರಾಜನು ತನ್ನ ಕೈಯ ಲಿಂಗವು ನೀರಿನಲ್ಲಿ ಬಿದ್ದು ಹೊಗ ಲಾಗಿ ಸ್ತೋತ್ರಮಾಡಿ ಮತ್ತೆ ಅದನ್ನೇ ಒರಮಾಡಿಕೊಂಡನು. ಶಿವದೇವ ಝೂನು ಬಚ್ಚಲ ನೀರಿನಿಂದ ತೊನ್ನನ್ನು ಹೋಗಲಾಡಿಸಿದನು, ಅದರಂತೆ ಯೇ ಮಾವರದೂಡಯ್ಯನು ಸ್ನಾನಮಾಡಿದ ನೀರಿನಿಂದ ಅನೇಕರ ಕುಷ್ಯ ವನ್ನು ಪರಿಹರಿಸಿವನು, ನಿರೀಸದ ಸಂಗಯ್ಯನು ತನ್ನನ್ನು ಕಚ್ಚಿ ಸತ್ಯ ಹಾ ವಿಗೆ ಪ್ರಾಣವನ್ನಿತ್ತನು. ಅದರಂತೆಯೇ ಧಮ್ಮಯ್ಯನೂ ಹಾವಿನಹಾಳ ಕಲ್ಲ “ನೂ ತಮ್ಮನ್ನು ಕಚ್ಚಿ ಮಡಿದ ಹಾವುಗಳಿಗೆ ಹರಣವನ್ನಿತ್ತರು. ಇದೇ ಕಲ್ಯಾಣಪಟ್ಟಣದಲ್ಲಿರುವ ಕಿನ್ನರಬ್ರಹ್ಮಯ್ಯನು ಬಿಜ್ಜಳರಾಜನು ಕಾಣು ವಂತೆಯೇ ತ್ರಿಪುರಾಂತಕೇಶ್ವರನಿಂದ ಸಾಕ್ಷ್ಯವನ್ನು ನುಡಿಸಿದನು. ಈ ಮುಗಿದೇವಯ್ಯನು ಮನೆಯಿಂದ ಹೊರಡಿಸಲ್ಪಟ್ಟ ಕಾರಣದಿಂದ ಲಿಂಗದ ತಲೆಯಮೇಲೆ ತನ್ನ ಮನೆಯ ಮರಮುಟ್ಟುಗಳನ್ನೆಲ್ಲ ಹೊರಿಸಿಕೊಂಡು ಹೋ ದವನು. ಈತನೇ ಕನ್ನದ ಕಾಯಕದಿಂದ ಜಂಗಮಾರ್ಚನೆಯನ್ನು ನಾ
ಪುಟ:ಚೆನ್ನ ಬಸವೇಶವಿಜಯಂ.djvu/೩೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.