ಹೀರಶೈವಶರಣರ ಚರಿತ್ರ 是說 ಡುತ್ತ, ಗೋಡೆಯ ಮಣ್ಣನ್ನು ಚಿನ್ನವನ್ನಾಗಿ ಮಾಡಿದ ಬೊಮ್ಮಯ್ಯನು. ಹಾದರದ ಬೊಮ್ಮಣ್ಣನು ಸಾಯಲಾಗಿ, ಇವನ ಹೆಂಡತಿಯು ಹಾದರದಿಂದ ಹಣವನ್ನು ಗಳಿಸಿ, ಜಂಗಮರಿಗೆ ಪಾಕಮಾಡಿಕ್ಕಿ, ಅವರು ಹಸಿದುದರಿಂದ ತಡಮಾಡದೆ ಎದ್ದು ಸದ್ದಿಗೆ ಬಾರೆಂದು ಸತ್ತಿದ್ದ ಗಂಡನನ್ನು ಕೂಗಿ ಎಬ್ಬಿ ಸಿದಳು, ಈ ನಿರ್ಲಜ್ಞೆಯ ಶಾಂತಯ್ಯನೂ ಇವನ ಹೆಂಡತಿಯು ಸಹ ಶ್ರೀ ತವನ್ನು ತಡೆಯಲಾರೆನೆಂದು ಜಂಗಮವೇಷದ ಶಿವನು ಬೇಡಲಾಗಿ ಉಟ್ಟಿದ್ದ ಬಟ್ಟೆಗಳನ್ನೇ ತೆಗೆದುಕೊಟ್ಟು ದಿಗಂಬರರಾಗಿದ್ದವರು, ಈ ಮರುಳಶಂಕ ರದೇವನು ಕಾಳಿಂಗದೇಶದಿಂದ ಇಲ್ಲಿಗೆ ಒಂದು ೧೨ ವರ್ಷಗಳಾದುವು. ಇವನು ಪಸಾದಸೇವನೆಯಿಂದಲೇ ಮುಕ್ತಿಯನ್ನು ಪಡೆಯುವನು, ಪಾ ರತಿಯಂಶವೇ ಉಡುತಡಿಯ ಮಹಾದೇವಿಯಕ್ಕನಾಗಿ ಹುಟ್ಟಿ, ಕಾಶಿರಾ ಜನನ್ನು ಭವಿ ಯೆಂಬುದಾಗಿ ಜರೆದುಬಿಟ್ಟು, ಘನವೈರಾಗ್ಯದಿಂದ ಬಾಳಿದ ವಳು, ಮಲ್ಲ?ಣಪನೆಂಬುವನು ಮೇಖಲಾಸುರನನ್ನು ಕೊಂದು, ಭೂಮಿ ಯಲ್ಲಿ ಕಲಕೇತಯ್ಯನೆಂಬ ಹೆಸರಿನಿಂದವತರಿಸಿ, ಬಿಜ್ಜಳನ ತಗರನ್ನು ಕೊಂದು, ದೊರೆಯ.. ಬಂದು ಸ್ತುತಿಸಲಾಗಿ ಅದಕ್ಕೆ ಪ್ರಾಣವನ್ನಿತ್ತು, ಅ ದರ ಕೊಂಬನ್ನು ಸದಾ ಕೈಯಲ್ಲಿ ಹಿಡಿದು, ಸುಂಕದ ಬೆಂಕಯ್ಯನಿಗೆ ಹೊ ನ್ನು ಉದುರಿಸಿಕೊಟ್ಟನು, ದಕ್ಷಯಾಗವನ್ನು ನಾಶಮಾಡಿದ ವೀರಭದ್ರೇ ಶನೇ ಭೂಮಿಯಲ್ಲಿ ಪರವಾದಿಗಳನ್ನು ಬಲಗೊಳಿಸುವುದಕ್ಕಾಗಿ ಮಡಿವಳ ಮಾಚಯ್ಯನಾಗಿ ಅವತರಿಸಿ, ಬಿಜ್ಜಳನ ಸೈನ್ಯವನ್ನು ಕೊಂದು, ಮತ್ತೆ ಅವನು ಸ್ತುತಿಸಲಾಗಿ ಮೊದಲಿನಂತೆ ಹುಟ್ಟಿಸಿ, ಶಿವಶರಣರ ಮನೋಮಾ ಲಿನ್ಯವನ್ನೆಲ್ಲ ತೊಳೆದು ಸಿಗ್ನಲಗೊಳಿಸುತ್ತ, ಮಡಿವಳತನದ ಕಾಯಕದಲ್ಲಿ ರುವನು, ಈತನೇ ನಿಜಗುಣಮಹಾರಾಜನು, ಈತನೇ ಚಂದಿಮರಸನು, ಇವರೀರರೂ ಘನತರಮಂತ್ರಿಗಳಾಗಿದ್ದು ವೈರಾಗ್ಯವನ್ನು ಪಡೆದವರು. ಈತನು ಸಪ್ಪೆಯ ಅಲ್ಲಮದೇವ, ಈತನೇ ಮಿಂಡಸಂಗಯ್ಯ, ಈತನೇ ಮುಗ್ಗ ಸಂಗಯ್ಯ, ಈತನೇ ಮಾರಿತಂದೆ, ಈತನೇ ಪ್ರಸಾದಿಭೋಗಣ್ಣ, ಈತನೇ ಮೇದರಕೇತಯ್ಯ, ಈತನೇ ಡೋಹರಕಕ್ಕಯ್ಯ, ಈತನೇ ಭರಿ ತಾರ್ಪಣದ ಸಂಗಯ್ಯ, ಈತನೇ ವೈದ್ಧದ ಸಂಗಣ್ಣ, ಈತನೇ ಸತ್ಯಣ್ಣ, ಈತನು ದಾಸೋಹಿಸಂಗಣ್ಣ, ಈತನು ಬಾಚಿಯ ಕಾಯಕದ ಬಸವಪ್ಪ,
ಪುಟ:ಚೆನ್ನ ಬಸವೇಶವಿಜಯಂ.djvu/೩೮೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.