೩೩೬ ವೀರಶೈವಶರಣರ ಚರಿತ್ರೆ ಶಿವನು ಉಪೇಕ್ಷಿಸಿ ಸುಮ್ಮನಾದನೆಂದು ನಂದೀಶನು ತಿಳಿದು, ಕೋಪ ಗೊಂಡು ಸಭೆಯಿಂದೆದ್ದು ಹೊರಟನು. ನಾರದನು ಈ ಸುದ್ದಿಯನ್ನು ಶಂ ಕರನಿಗೆ ಅರಿಕೆಮಾಡಿದನು. ಆಗ ಇಂದ್ರನನ್ನು ಕುರಿತು-ಅಯ್ಯಾ ! ನಮ್ಮ ನ್ನು ವಹಿಸುವ ಸಾಮರFವು ಧರಸ್ವರೂಪನಾದ ಈ ನಂದಿಗಲ್ಲದೆ ಮ ತಾರಿಗಿರುವುದು ? ಅದನ್ನು ಕಾಣದೆ ನೀನು ಆತನನ್ನು ಜರೆಯಬಹುದೆ ? ನೀನೇ ಹೋಗಿ ನಂದೀಶನನ್ನು ಸಮಾಧಾನ ಮಾಡಿ ಕರೆದುಕೊಂಡುಬಾ ರೆಂದು ಶಿವನು ಅಪ್ಪಣೆ ಮಾಡಲು, ಇಂದ್ರನು ಚತುರಂಗಸೇನಾಸಮೇತ ನಾಗಿ ಹೋಗಿ ನಂದೀಶನನ್ನು ಕರೆಯಲು, ಅವನು ಬರದೆ ಹೋದನು ಆಗ ಯಮ ವರುಣರು ಪಾಶವನ್ನಿಕ್ಕಿ ನಂದೀಶನನ್ನೆಳೆದರು. ಅವನು ಕೋಪ ದಿಂದ ಭೂಮಿಯನ್ನು ಪಾದದಿಂದ ರುಾಡಿಸಿ ಕೆರೆಯಲು, ಅದರಿಂದ ರಾಶಿ ಯಾಗಿ ಬಿದ್ದ ಮಣ್ಣು ಕೇದಾ ರವಾಯಿತು, ಕೊಂಬಿನಿಂದ ಹಾರಿಸಿದ ಮಣ್ಣು ಸಮುದ್ರದಲ್ಲಿ ಬಿದ್ದು ನಿಷ್ಕಳದೀಪವಾಯಿತು. ತೋಡಿದ ಗುಳಿಯು ಮಾನ ಸಸರೋವರವಾಯಿತು. ಹೂಂಕರಿಸಿ ಸಂಶಂಗಳನ್ನು ಕೇಳಲು, ಆತನ ಶಾಸೋಚ್ಚಾ ಸದಿಂದ ದೇವತೆಗಳು ತರಗೆಲೆಗಳಂತೆ ಹಾರಾಡಿದರು. ಆಗ ಇಂದ್ರನು ನಂದೀಶನ ಮಹತ್ವವನ್ನು ತಿಳಿದು, ಭಯಭಕ್ತಿಯಿಂದ ಪ್ರೊ ತ್ರ ಮಾಡಲಾಗಿ, ಆತನು ಪ್ರಸನ್ನನಾಗಿ ನಿನ್ನ ಇಸ್ಮವೇನೆಂದು ಕೇಳಿದ ನು, ಇಂದ್ರನು-ಪ್ರಭುವೆ ! ಈ ನನ್ನ ಭಾಗ್ಯವು ಅತ್ಯಲ್ಪವಾದುದು, ಮ ತ್ತೂ ಅಸ್ಥಿರವು, ಶಾಶ್ವತವಾದ ಘನಮುಕ್ತಿಯನ್ನು ಪಡೆವುದಕ್ಕಾಗಿ ನನಗೆ ಆತ್ಮಲಿಂಗಧಾರಣವನ್ನು ಅನುಗ್ರಹಿಸು ಎಂದು ಬೇಡಲು, ನಂದೀಶನುಇಂದ್ರನೇ, ನಿನಗೆ ಈ ಜನ್ಮದಲ್ಲಿ ಅದು ಲಭಿಸಲಾರದು, ನರಜನ್ಮದಲ್ಲಿ ನೀ ನು ಅವತರಿಸಿ ಶಿವಭಕ್ತಿಯುಳ್ಳವನಾಗಿದ್ದರೆ, ನಾನೇ ಬಂದು ನಿನ್ನ ಅಪ್ಪಾ ರ್ಥವನ್ನು ನೆರವೇರಿಸುವೆನು ಎಂದನು. ಅದರಂತೆಯೇ ಇಂದ್ರನು ಭೂ ಲೋಕಕ್ಕೆ ಬಂದು, ಪಟ್ಟಿಗಲ್ಲೆಂಬ ಪಟ್ಟಣದಲ್ಲಿ ಚಾಳುಕ್ಕುಲದರಸನಾ ದ ತೈಲೋ ಕ್ಯಚೂಡಾಮಣಿ ಯೆಂಬ ಪ್ರಭುವಿನ ಪತ್ನಿ ಮಹರ್ಲೆಳೆ ಬೆಂಬುವಳ ಗರ್ಭದಲ್ಲಿ ಅನಿಮಿಯರೆಂಬ ನಾವದಿಂದ ಹುಟ್ಟಿದನು. ಇವನು ಯಣವನಸ್ಥನಾಗಿ ಪ್ರತಿದಿನವೂ ಶಿವಲಿಂಗದರ್ಶನವಿಲ್ಲದೆ ಭುಂಜಿಸದ ವ್ರತವ ನ್ನು ಹಿಡಿದಿದ್ದನು. ಒಂಮದಿನ ಬೇಟೆಗೆ ಹೋಗಿ ಕಾಡಿನಲ್ಲಿ ಶಿವಲಿಂಗವನ್ನು 48
ಪುಟ:ಚೆನ್ನ ಬಸವೇಶವಿಜಯಂ.djvu/೩೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.