{vಳೆ ಚನ್ನಬಸವೇಕವಿಜಯ(ಕುಂಡ ೫) [ಅಧ್ಯಾಯ ವು. !! ಕೋಟಿ ರೋವಗಳಿರುವುವು, ೪೬೦ ಮೂಳೆಗಳಿರುವುವು, ಈ ಸಪ್ತಧಾತುಗಳಲ್ಲಿ ನರಗಳು ರೇತಸ್ಸು ಮೂಳೆ ರೋಮಗಳು ಸಹ ತಂದೆ ಯಂಶವು ; ಚ ಮಾಂಸ ರಕ್ತಗಳು ತಾಯ ಅಂಶಗಳು ; ಮೇಲೆ ಹೇಳಿ ದ ಆಕಾಶಾದಿಪಂಚಭೂತಗಳನ್ನು ಒಂದೊಂದನ್ನೆರಡೆರಡಾಗಿ ಭಾಗಿಸಿ, ಪ್ರ ತಿಯೊಂದರ ಮೊದಲಭಾಗವನ್ನು ಮಹಾಭೂತವನ್ನಾಗಿಟ್ಟು, ಉಳಿದ ಒಂ ದೊಂದು ಭಾಗವನ್ನು ಎರಡೆರಡು ಭಾಗವನ್ನಾಗಿ ಮಾಡಿ, ಆ ಭಾಗಗಳ « ಮತ್ತೆ 8-8 ಭಾಗವನ್ನಾಗಿ ಮಾಡಿ, ಆ ಭಾಗವನ್ನು ಅದರದರ ಎರ ಡನೆ ಭಾಗದಲ್ಲಿ ಸೇರಿಸದೆ, ಉಳಿದುವುಗಳ ಎರಡೆರಡನೆಯ ಭಾಗದಲ್ಲಿ ಒಂ ದೊಂದನ್ನು ಕೂಡಿಸಿದರೆ, ೨೫ ತತ್ವಗಳಾಗುವುವು, ಹೇಗೆಂದರೆ- ಆಕಾಶ ದ ಎರಡನೆ ಭಾಗವು ಜ್ಞಾತೃವು, ವಾಯುವಿನ ೨ ನೆ ಭಾಗದಲ್ಲಿ ಕಡಿದು ದೇ ಮನಸ್ಸು, ತೇಜಸ್ಸಿನ ೨ ನೆ ಭಾಗದಲ್ಲಿ ಸೇರಿದುದೇ ಬುದ್ದಿಯು, ಜಲ ದ ೨ ನೆ ಭಾಗದಲ್ಲಿ ಸೇರಿದುದೇ ಚಿತ್ತವು, ಭೂಮಿಯ ೨ ನೆ ಭಾಗದಲ್ಲಿ ಬೆ ರೆದುದೇ ಅಹಂಕಾರವು, ಇವು ಆಕಾಶದ ಪಂಚಿಕರಣಗಳು, ಹೀಗೆಯೇ ವಾಯುವಿನ ದ್ವಿತೀಯಭಾಗವನ್ನು ಇತರ ಭೂತಗಳ ದಿತೀಯಭಾಗದೊ ಡನೆ ಕೂಡಿಸುತ್ತ ಹೋದರೆ ಸಾಣ-ಅಪಾನ-ಸಮಾನ-ಉದಾನ-ವ್ಯಾನ ವೆಂಬ ಪಂಚನಾಯುಗಳು; ಅಗ್ನಿಯಿಂದ- ನೇತ್ರ, ತ್ರ, ತಕ್ಕು, ಜಿಹ್ವಾ, ಪ್ರಾಣವೆಂಬ ಪಂಕಜ್ಞಾನೇಂದ್ರಿಯಗಳು: ಜಲದಿಂದ-ಶಬ್ದ, ಸ್ಪ ರ್ಕ, ರೂಪ, ರಸ, ಗಂಧ ಎಂಬ ವಿಷಯಗಳು, ಸೃಷ್ಟಿಯಿಂದ- ವಾಕ್ಕು, ಪಾಣಿ, ಪಾದ, ಸಂಯು, ಉಪಸ್ಥೆ, ಎಂಬ ೫ ಕಕ್ಕೇ೦ದ್ರಿಯಗಳು ಉದಿಸಿ ದುವು. ಇನ್ನು ವಿಂಡಾಂಡಸಂಚಿಕರಣವೆಂತೆಂದರೆ ಹಿಂದೆ ಹೇಳಿದ ಈ ಪಂಚಭೂತಗಳೇ ಪಂಚಾಂಶ ಸಂಚಿಕೃತವಾಗಿ ದೇಹವೆನಿಸುವುವು ದೇ ಹದಲ್ಲಿರುವ ಅಸ್ಥಿ, ತೊಕ್ಕು, ನಾಡಿ, ಮಾಂಸ, ರೋನು.ಇವೈದೂ ಪೃಷ್ಟಿಯಿಂದಾದಂಶಗಳು, ಹಸಿವು, ನೀರಡಿಕೆ, ನಿದ್ರೆ, ಆಲಸ್ಯ, ಸಂಗಇವಿಷ್ಟೂ ಅಗ್ನಿಯಿಂದಾದ ಗುಣಗಳು, ಕೂಡುವುದು, ಅಗಲುವುದು, ಸು ತ್ತುವುದು, ಹಾರುವುದು, ನಡೆಯುವುದು, ಇವಿಷ್ಟೂ ವಾಯುವಿನಿಂದಾದ ಗುಣಗಳು, ಅಜ್ಞಾನ, ಪ್ರೀತಿ, ದ್ವೇಷ, ನಾಚಿಕೆ, ಭಯ- ಇವಿಷ್ಟೂ ಆ ಕಾಶದಿಂದಾದ ಗುಣಗಳು, ಹೀಗೆ ಸ್ಫೂಲದೇಹದಲ್ಲಿರುವ ಪಂಚಭೂತಗಳ
ಪುಟ:ಚೆನ್ನ ಬಸವೇಶವಿಜಯಂ.djvu/೩೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.