Yov ಇnv ಚನ್ನಬಸವೇಳವಿಜಯಂ (wಂಡ) ಅಧ್ಯಾಯ ಶಿವದ್ರೋಹಿಯನ್ನು ಶಿಕ್ಷಿಸಬೇಕೆಂದು ಸಂಕಲ್ಪಿಸಿದ್ದ ಜಗದೇವಬೊಮ್ಮ ಮೃಗಳು ನಮ್ಮಪ್ಪಣೆಯನ್ನು ಪಡೆದು ದೊರೆಯ ಬಳಿಯಲ್ಲಿ ದೀವಟಿಗೆಯ ಊಳಗದಲ್ಲಿರುವರು. ಇತ್ತ ನಾವು ಶಿವಶರಣರನ್ನೆಲ್ಲ ಕರಿಸಿ, “ ನಾವಿನ್ನು ಈ ಶಿವದ್ರೋಹಿಯ ಪಟ್ಟಣದಲ್ಲಿರಬಾರದು, ಉಳುವೆಯ 'ಮಾಮನೆಗೆ ಹೋಗಬೇಕು ” ಎಂದು ಹೇಳಲು, ಕೆಲವರು ಅದಕ್ಕೊಪ್ಪಿ ಬರುವರು. ಮತ್ತಕೆಲರು ಬರದೆ ಹೋಗುವರು. ಒಪ್ಪಿದವರನ್ನೆಲ್ಲ ಸಂಗಮೇಶನ ಪರ ಕೆಂದು ನಾವು ಉಳುವೆಗೆ ಕಳುಹಿಕೊಟ್ಟು, ಆನೆ ಕುದುರೆ ಕಾಲಾಳು ಮೊ ದಲಾದ ಕಾವಲುಗಾರರನ್ನು ನಮ್ಮ ಅರಮನೆಗಿಟ್ಟುಕೊಂಡಿರುವೆವು, ಅತ್ತ ಜಗದೇವಬೊಮ್ಮಣ್ಣಗಳು ದೀವಟಿಗೆಯನ್ನು ಹಿಡಿದುಕೊಂಡು ಸಮಯವ ನ್ನು ನಿರೀಕ್ಷಿಸುತ್ತಿದ್ದು, ದೊರೆಯು ಸಭೆಯನ್ನು ವಿಸರ್ಜಿಸಿ ಪಂಜಗಳ ಬೆಳಕಿನಿಂದ ಅರಮನೆಯನ್ನು ಹುಗುತ್ತಿರುವಲ್ಲಿ, ಇವರುಗಳು ಸುರಗಿಗಳಿಂದ ದೊರೆಯ ಹೊಟ್ಟೆಯನ್ನಿರಿದು ಕೊಂದು ಕೆಡಹಿ, ಶಿವದ್ರೋಹಿಯನ್ನು ಕೊಂದೆವೆಂದು ಆರ್ಭಟಿಸುತ್ತ, ನಮ್ಮ ರಮನೆಗೆ ಬಂದು, ತಾವು ಮಾಡಿದ ಕೆ ಲಸವನ್ನು ನಮಗೆ ತಿಳಿಸಿಬಿಟ್ಟು, ಸಂತೋಷದಿಂದ ಕೈಲಾಸಕ್ಕೆ ತೆರಳುವರು. ನಾವು ಹ»ಶಾದಿಗಳನ್ನು ಕೂಡಿಕೊಂಡು ಕಲ್ಯಾಣಪಟ್ಟಣವನ್ನು ಬಿ ಟ್ಟು ಹೋಗುತ್ತಿರಲು, ಹಿಂದಣಿಂದ ಅಳಿಯಬಿಜ್ಜಳನು ದಂಡನ್ನು ಕಟ್ಟಿ ಕೊಂಡು ಬಂದು, ನಮ್ಮನ್ನು ತಡೆಗೋಡೆಂಬಲ್ಲಿ ಅಡ್ಡಗಟ್ಟುವನು. ಮಡಿವ ಳಯ್ಯಗಳುಕೂಗಿನ ಮಾರಯ್ಯನವರು ಮೊದಲಾದ ನಮ್ಮ ಶಿವಶರಣರಿಗೂ ಅವನಸೇನೆಗೂ ಯುದ್ದವಾಗುವುದು, ಪ್ರತಿಸೇನೆಯು ಅಳಿದು ಸೋಲುವು ದು, ಅಳಿಯ ಬಿಜ್ಜಳನನ್ನು ಸೆರೆಹಿಡಿದು ತರುವರು.ಶಿವಶರಣರು ಪರವಧೆಯ ಮಾಡಿದುದನ್ನು ನಾಗಾಂಬಿಕೆಯು ಕೇಳಿ, ಮನದಲ್ಲಿ ಮುಗಿ, ಅಳದಿರು ವ ಸೇನೆಗೆ ಪ್ರಾಣದಾನ ಮಾಡಬೇಕೆಂತಲೂ, ಅಳಿಯ ಬಿಜ್ಜಳನನ್ನು ಬಂ ಧನದಿಂದ ಬಿಟ್ಟು ಬಿಡಬೇಕೆಂತಲೂ ನನಗೆ ಆಜ್ಞಾಪಿಸುವಳಲ್ಲದೆ, ಅತ್ತ ಕೈ ಲಾಸದಲ್ಲಿ ಜಗದೇವಬೊಮ್ಮಯ್ಯಗಳನ್ನು ಶಿವನು ಕಂಡು, ನೀವು ಬಿಜ್ಜಳ ರಾಜನನ್ನು ವಧಿಸಿಬಂದ ಕಾರಣದಿಂದ ಮರಳಿ ಭೂಲೋಕಕ್ಕೆ ಹೋಗಿ, ಶೂಲವನ್ನೇರಿಬರಬೇಕೆಂದು ಕಳುಹಿಕೊಡುವನೆಂತಲೂ, ಅವರು ಅದೇ ಮೇರೆ ಓರುಗಲ್ಲೆಂಬ ಪಟ್ಟಣದಲ್ಲಿ ವೀರಗುಂಡಬ್ರಹ್ಮರೆಂಬ ಹೆಸರಿನಿಂದ
ಪುಟ:ಚೆನ್ನ ಬಸವೇಶವಿಜಯಂ.djvu/೪೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.