ಕಣ್ಣಿನವು ೪nt ಹುಟ್ಟುವರೆಂತಲೂ, ಶಿವನು ಕಳ್ಳನ ವೇಷದಿಂದ ಬಂದು, ಅಲ್ಲಿನ ಗಣಪತಿ ರಾಯನರಮನೆಯಲ್ಲಿ ಕದ್ದು , ವೀರಗುಂಡಬ್ರಹ್ಮರ ಮರೆಹುಗಲು, ಅವನ ನ್ನು ರಾಜಭಟರಿಗೆ ಕೊಡದೆ ರಕ್ಷಿಸುವುದಕ್ಕಾಗಿ ವೀರಗುಂಡಬ್ರಹ್ಮರು ತಾವೇ ಶೂಲವನ್ನು ಹತ್ತಿ ಮುಕ್ತರಾಗುವರೆಂತಲೂ, ಅದುಕಾರಣ, ಶಿವ ಭಕ್ತರು ಇಂಥ ಹಿಂಸಾಕಾರವನ್ನು ಮನಸ್ಸಿನಲ್ಲೂ ಯೋಚಿಸಬಾರದೆಂ ತಲೂ, ಬೋಧಿಸುವಳು. ಆಗ ನಾನು ಅಳಯ ಬಿಜ್ಜಳನನ್ನು ಬಂಧನ ದಿಂದ ಬಿಡಿಸಿ, ಅವನ ದಂಡಿಗೆಲ್ಲ ಪ್ರಾಣವನ್ನಿತ್ತು, ಹೊಗೆಂದು ಹೇಳುವ ನು, ಅವನು ಮುಂದೆ ನನಗೆ ಗತಿಯೇನೆಂದು ಕೇಳುವನು, “ ನೀನು ಬಿ ಜ್ಞಳನಂತೆ ಶಿವದ್ರೋಹಿಯಾಗದೆ ಸದಾಚಾರದಲ್ಲಿರು ೨” ಎಂದು ಬೋಧಿ ನಿ, ಅವನಿಗೆ ಬಿಜ್ಜಳನ ಪಟ್ಟವನ್ನು ಕಟ್ಟಿಸಿ, “ ಎಲೆ ದೊರೆಯೆ, ಈ ಪಟ್ಟಣವು ನಿನಗೆ ಇನ್ನು ೬೦ ವರ್ಷಗಳವರೆಗೂ ನಡೆವುದು, ಅಲ್ಲಿಂದಾಚೆಗೆ ಶಿವವರದಿಂದ ಪೀತಾಂಬರರಾಕ್ಷಸನು ತುರುಕರ ಜಾತಿಯಲ್ಲಿ ಹುಟ್ಟಿ ಬಂ ದು, ಅವನೂ ಅವನ ಸಜಾತಿಯವರೂ ಈ ದೇಶವನ್ನು ೭೬೦ ವರ್ಷಗಳವ ರೆಗೆ ಆಳುವರು, ಅದರಿಂದ ಈ ದೇಶವೆಲ್ಲ ತುರುಕಾಣ್ಯವೆನಿಸಿಕೊಳ್ಳುವು ದು, ಅವರು ಈ ಕಲ್ಯಾಣಪಟ್ಟಣವನ್ನು ಹಾಳ್ಳಾಡಿ ಕಲುಬುರ್ಗಿಯನ್ನು ಕಟ್ಟಿಸುವರು, ನಾವಿನ್ನು ಇರಬಾರದು, ಅದುಕಾರಣ ಹೋಗುತ್ತೇವೆ ೨೨ ಎಂದು ಹೇಳಿ ಅವನನ್ನು ಕಳುಹಿಸಿಕೊಡುವೆವು, ಅಳಿಯ ಬಿಜ್ಜಳನು ಾ ಫ್ಲ್ಯವನ್ನು ಸುಖದಿಂದ ಆಳಿಕೊಂಡಿರುವನು. ನಾವು ಉಳುವೆಗೆ ಹೊರಡ ಲು ಸಿದ್ಧರಾದಾಗ, ಮಡಿವಳ ಮಾಚಯ್ಯನು ಹಿಪ್ಪರಿಗೆಪಟ್ಟಣಕ್ಕೆ ಹೋ ಗಿ, ತಮ್ಮ ಗುರುವಾರ ಲಿಂಗಣ್ಣಾರರ ಪಾದದಲ್ಲಿ ಣಕ್ಯನಾಗುವನು. ನಾವು ಶಿವಶರಣರೊಡನೆ ಉಳುವೆಗೆ ಬಂದು ದೊಡ್ಡ ಸರವನ್ನು ಮಾಡಿಸುವೆವು. ಶರಣರೆಲ್ಲರೂ ತಮ್ಮಿ ಬಂದಂತೆ ಬಯಲಾಗುವರು, ನಮ್ಮ ಸಮಯಾ ಚಾರದ ೧೨ ಸಾವಿರ ಜಂಗಮರನ್ನೂ, ಬಸವಣ್ಣನ ಸಮಯಾಚಾರದ ೪೬ ಸಾವಿರ ಮಾಹೇಶ್ವರರನ್ನೂ ಸಹ ಒಟ್ಟಿಗೆ ಹೊನ್ನರಳಯ ಮರಕ್ಕೆ ಕಟ್ಟಿದ ತೊಟ್ಟಿಲಿನಲ್ಲಿ ಕುಳ್ಳಿರಿಸಿ ತೂಗುವೆವು, ಅವರೆಲ್ಲರೂ ಹಾಗೆಯೇ ನಿರವಯವವನ್ನೆದುವರು.* ನಾವು ಉಳಿದಿದ್ದ ಚರಮರಿಗಳಿಗೆಲ್ಲ ನನ್ನ ಸ್ಕರಿಸಿ, “ ತಾವುಗಳು ನಿರಾಕಾರವನ್ನು ಧರಿಸುವಿರೋ ? ಅಥವಾ ಸಾಕಾ
ಪುಟ:ಚೆನ್ನ ಬಸವೇಶವಿಜಯಂ.djvu/೪೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.