ಮಂಚಣ್ಣನ ಟಾಓ ದನು- ಪ್ರಭುವೇ ! ಈ ಕಲ್ಯಾಣಪಟ್ಟಣದೊಳಗೆಲ್ಲ ಯಾವ ಯಾವ ದೇ ಶದಿಂದಲೋ ಬಂದ ಶಿವಭಕ್ತರೇ ತುಂಬಿಕೊಂಡರು. ನಿನ್ನರಮನೆ ಹೊರ ತಾಗಿ ಉಳಿದ ಕಡೆಯಲ್ಲೆಲ್ಲ ಅವರ ಹಾವಳಿಯೇ, ಅವರ ಆನಂದ ! ಅವರ ಸೊಗಸು ! ಅವರ ವೈಭವ ! ಅವರ ಸೂಳೆಗಾರಿಕೆ ! ಅವರ ಪ್ರತಿಜ್ಞೆಗಳು ಅಪ್ರತಿಹತವಾಗಿರುವುವು. ಹೀಗೆ ಅವರು ಪ್ರಬಲಿಸಿಕೊಂಡಿರುವುದನ್ನು ನೋಡಿದರೆ ಕಾಲಕ್ರಮದಲ್ಲಿ ಚೆನ್ನಬಸವಣ್ಣನಿಗೇ ಪಟ್ಟವನ್ನು ಕಟ್ಟಿ; ಈ ದೇಶವನ್ನೆಲ್ಲಾ ಅವರಧೀನಮಾಡಿಕೊಂಡು ಕಡೆಗೆ ತಮ್ಮ ಪಾದ ಕೇನುಮಾತುವರೋ ಎಂಬ ಸಂಶಯವು ನನಗೆ ಬಲವಾಗಿದೆ. ಅವರ ಈ ಪಟಲಗಳನ್ನು ಹೋ?! ನಿಲ್ಲಿಸಿಲ್ಲ ಎಂದು ತಡೆಯುವರೊಬ್ಬರನ್ನೂ ನಾನು ಕಾಣೆ ! ನಿನ್ನ ಹಸ್ತಕ್ಷಗಳೆಲ್ಲ ಅವರಧೀನವೇ ಆಗಿವೆ. ಇನ್ನು ನೀವು ವೈಮರೆದಿರುವುದು ಸರಿಯಲ್ಲ: ನಾನು ಹೇಳುವ ಮಾತಿನಲ್ಲಿ ತಿಲಾಂಶವೂ ಸುಳ್ಳಲ್ಲ. ತಮ್ಮ ಸಾದದಾಣೆ ಇದು ನಿಜ, ಹಿಂದೆ ವೃತ್ರಾಸುರನೂ ಹೀಗೆ ಯೇ ಅತಿಪ್ರಬಲನಾಗಿ ಮೂರು ಲೋಕವನ್ನೂ ವ್ಯಾಪಿಸಿಕೊಳ್ಳುತ್ತಿದ್ದ ರೂ, ಇಂದ್ರನು ಅಹಂಕಾರದಿಂದ ಮೈಮರೆತು ಕುಳಿತುಕೊಂಡುದರಿಂದ, ಕತೆಗೆ ಯುದ್ಧದಲ್ಲಿ ಆ ರಾಕ್ಷಸನ ಇದಿರಿಗೆ ನಿಂತು ಕೊಳ್ಳಲಾರದೆ ಎಷ್ಟೋ ಪ್ರಯಾಸಪಟ್ಟು ಪಡಬಾರದ ಕಷ್ಟ್ರಗಳಿಗೆಲ್ಲ ಒಳಗಾದನು. ದೇವತೆಗಳ ಅವಸ್ಥೆ. ಹಾಗಾಗಿರುವಲ್ಲಿ ಮನುಷ್ಯರಾದವರು ಮೈಮರೆತರೆ ಹೇಳತ ಕುದೇನು ? ನಾನು ಹೇಳಿದುದೆಲ್ಲವೂ ನಿಜವೋ ಸುಳ್ಳೋ ಎಂಬುದ ನ್ನು ತಿ*ವುದಕ್ಕಾಗಿ ಅವರೆಲ್ಲರನ್ನೂ ಬರಮಾಡಿ ವಿಚಾರಿಸುವುದೇ ತಮಗೆ ನ್ಯಾಯ, ನಾವೆಲ್ಲರೂ ತಮ್ಮ ಪಾದಕ್ಕೆ ಸೇರಿದವರಾದುದರಿಂದ ತಮ್ಮ ಕ ಸ್ಮಸುಖಗಳೆ ನಮ್ಮದೆಂದು ತಿಳಿದು, ಇದ್ದ ಸಂಗತಿಯನ್ನು ತಮಗೆ ಬಿ ನೈಸಬೇಕಾಯಿತು. ಅಪ್ಪೆಹೊರತು ಚೆನ್ನಾಗಿ ಸಂಸತ್ತಿನಿಂದ ಬಾಳ ತಕ್ಕವರನ್ನು ನೋಡಿ ಸೈರಿಸಲಾರದೆ ಹೀಗೆಲ್ಲಾ ಆಡುತ್ತಾನೆಂದು ತಿಳಿಯ ಬೇಡಿರಿ, ಇದರಮೇಲೆ ತಮ್ಮ ಚಿತ್ತ ! ಎಂದು ಹೇಳಿ, ದೊರೆಯ ಮನಸ್ಸಿ ನಲ್ಲಿ ಬಲವಾಗಿ ಸಂಶಯವನ್ನುಂಟುಮಾಡಿದನು. ಈಮಾತನ್ನೆಲ್ಲ ಕೇಳಿಕೇಳ ದಂತೆ ದೊರೆಯ ಮುಖದಲ್ಲಿ ಬೆವರಿಕ್ಕಿತು, ಮಾಗಿನಲ್ಲಿ ಬಿಸುಸುಯ್ಯಾಡಿ ತು, ಹರ್ಷರಸವು ತಗ್ಗಿತು. ತಲೆ ತೂಗಿತು, ಕತ್ತು ಉರುಗಿತು, ಕೆನ್ನೆಯು
ಪುಟ:ಚೆನ್ನ ಬಸವೇಶವಿಜಯಂ.djvu/೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.