ಚನ್ನಬಸವೇಶವಿಜಯಂ [ಅಧ್ಯಾಯ ಕೈಯ್ಯಲ್ಲಿ ಒರಗಿತು, ಆಕಳಿಕೆ ಅಂಕುರಿಸಿತು. ನಾಲಿಗೆಯು ಒಣಗಿತು, ಈ ಚಿಹ್ನಗಳಿಂದ ಅವನಲ್ಲಿ ಉಂಟಾದ ಚಿಂತಾತಿಶಯವು ಹೊರಪಟ್ಟಿತು. ಆಗ ದೊರೆಯು ಇನ್ನು ಸುಮ್ಮನಿರುವುದು ಸರಿಯಲ್ಲವೆಂದು ಯೋಚಿಸಿ, ಥಟ್ಟನೆ ಹೋಗಿ, ಬಸವಣ್ಣ ಚೆನ್ನಬಸವಣ್ಣರುಗಳನ್ನು ಕರೆತನ್ನಿರೆಂದು ಹೇಳಿ ಕ ಳುಹಿ, ಕರಸಿ, ದುಮ್ಮಾನದಿಂದ ಕುಳಿತುಕೊಳ್ಳಿರೆಂದು ನುಡಿದನು. ಇವನ ಮನೋಭಾವವನ್ನರಿತುಕೊಂಡ ಅವರುಗಳು ಉಚಿತಾಸನದಲ್ಲಿ ಕುಳಿತು ಕೊಂಡರು. ಬಳಿಕ ದೊರೆಯು ತನ್ನ ಮನಸ್ಸಿನೊಳಗಿದ್ದು ದನ್ನು ಥಟ್ಟನೆ ಹೊರಪಡಿಸಲಾರದೆಯ, ಬಳಗೇ ಸೈರಿಸಿಕೊಳ್ಳಲಾರದೆಯ ಪೇಚಾ ಡುತ್ತ, ಮಲ್ಲಮೆಲ್ಲನೆ ಒಂದೊಂದು ಮಾತನ್ನು ತೆಗೆಯುತ್ತಿದ್ದನು. ಅದನ್ನು ಕಂಡು ಪಢನಾದ ಚೆನ್ನಬಸವೇಶನು ವಿನಯ ಪ್ರೀತಿಗಳಿಂದ-ರಾಜನೇ! ಈ ದಿವಸ ನಿನ್ನ ಮನೋಭಾವವು ಎಂದಿನಂತೆ ಇಲ್ಲ; ಮನಸ್ಸಿನಲ್ಲಿರುವು ದನ್ನು ನನ್ನೊಡನೆ ವಂಚಿಸದೆ ಹೇಳು; ಇದಕ್ಕೆ ಅಂಡಿಸುವುದೇಕೆ ? ನಿನ್ನ ಮನಸ್ಸಿಗುಂಟಾಗಿರುವ ಕೊರತೆಯೇನು ? ಎಂದು ಕೇಳಿದನು. ಆಗ ದೊರೆಯು- ಎಲೈ ಚೆನ್ನಬಸವೇಶನೆ ! ನಿಮ್ಮ ಮಾವನಾಟವನ್ನು ನಾ ನೇನು ಹೇಳಲಿ ! ನಮ್ಮ ಪಟ್ಟಣದಲ್ಲಿ ಅತ್ಯಂತವಾಗಿ ಹಾವಳಿ ಮಾಡು ತಿರುವನು; ಯಾವ ಯಾವ ದೇಶದ ದುಪ್ಪರನ್ತೋ ಭಕ್ತರೆಂದು ಹೇಳಿ ಇಲ್ಲಿ ಕೂಡಿಹಾಕಿ, ನಾನು ಮುಂದಾಗುವುದನ್ನರಿಯದೆ ಅವನಧೀನಮಾಡಿದ್ದ ನನ್ನ ಬೊಕ್ಕಸಬಂಡಾರದ ಹಗಥಾದಿಸಂಪತ್ತನ್ನೆಲ್ಲ ಆ ಜಂಗಮ ರಿಗೆ ಕೊಟ್ಟು ಬಿಟ್ಟನು. ನಮ್ಮ ಪಟ್ಟಣದೊಳಗೆ ಎಲ್ಲಿ ನೋಡಿದರೂ ಜ. ಗಮರ ಮತಗಳು! ಎಲ್ಲಿ ನೋಡಿದರೂ ಜಂಗಮರ ಲೂಟಿ! ಎಲ್ಲಿ ನೋಡಿ ದರೂ ಜಂಗಮರ ಸೂಳೆಗೇರಿ! ಎಲ್ಲಿ ನೋಡಿದರೂ ಅವರ ಪಾದರ? ಎಲ್ಲಿ ನೋಡಿದರೂ ಅವರ ಕೋಲಾಹಲವೇ ಹೊರತು ಮತ್ತೊಂದಿಲ್ಲ; ಹೀಗಿರು ವಲ್ಲಿ ನಾನೇನನ್ನು ತಾನೇ ಮಾಡುವುದಕ್ಕಾದೀತು ? ಎನ್ನಲು, ಚೆನ್ನಬಸ ವೇಶನು • ರಾಜನೇ ! ಕಳ್ಳತನ ಹಾದರ ಎಂಬಿವುಗಳು ನಮ್ಮ ಶಿವಭ "ಸಮಾಜವನ್ನು ಸೇರಲಾರವು. ಈ ಭೂಮಿಯಲ್ಲಿ ಬಸವೇಶಸಿರುವನ ರೆಗೂ ನಿಮ್ಮ ದೇಶದಲ್ಲಿ ಕಲಿಯೋಪವು ಸಂಘಟಿಸಲಾರದು, ಹೆಚ್ಚು ಮಾ ತೆಕೆ ? ಚಾಡಿಕೋರರ ಮಾತನ್ನು ಕೇಳಿದುದಕ್ಕೆ ಹಿಂದೆಯೇ ನಿನಗೆ
ಪುಟ:ಚೆನ್ನ ಬಸವೇಶವಿಜಯಂ.djvu/೫೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.