ರಾಜನೀತಿಬೋಧ ೪೧ ತಕ್ಕ ಫಲವಾಗಿರುವುದು, ಅದನ್ನು ಕಂಡಿದ್ದರೂ ನಿನಗೆ ಇನ್ನೂ ತಿಳವುಂ ಟಾಗಲಿಲ್ಲ. ಮಾಡುವುದೇನು ? ಈ ತಾಮಸ ಗುಣವು ಕ್ಷತ್ರಿಯರಿಗೆ ಸಹ ಹವಾದುದು. ರಾ ಜ ನೀತಿ ಬೋ ಧ. ಸೂಥೈಮಂಡಲವನ್ನು ಮೇಘವೂ, ಕನ್ನಡಿಯನ್ನು ಕೊಳೆಯ, ನಿರ್ಮಲಜಲವನ್ನು ಧೂಳಿಯೂ, ಪರಮಾತ್ಮನನ್ನು ಜೀವಭಾವವೂ ಆವರಿಸಿಕೊಂಡಿರುವಂತೆ ಅರಸುಗಳನ್ನು ಕ್ಷೇತ್ರತಾಮಸವು ಸದಾ ಆವರಿಸಿ ಕೊಂಡಿರುವುದು, ಅದನ್ನು ಪರಿಹರಿಸುವ ಸಾಮರ್ಥ್ಯವು ರಾಜನೀತಿಗಿ ರುವುದು, ಅದನ್ನು ನಿನಗೆ ಬೋಧಿಸುತ್ತೇನೆ, ಕೇಳು- ಅರಸುಗಳು ಹಾವಿಗೆ ಸರಿಹೋಲತೆಕ್ಕವರು, ಹೇಗೆಂದರೆ... ಇವರೀರ್ವರೂ ವಕ್ರ ಗಾಮಿಗಳು, ಎರಡು ನಾಲಿಗೆಯವರು; ಹಣವನ್ನೇ ಕಾದುಕೊಂಡಿರುವ ದುರಾಸೆಯವರು; ಪರರ ಪ್ರಾಣವನ್ನು ನೀಗಿಸುವ ಕೋಪವುಳ್ಳವರು. ಇಬ್ಬರಿಗೂ ಕಿವಿಯೆಲ್ಲ ಕಣ್ಣಾಗಿರುವುದು, ರಾಜನು ಲೋಕಮಾನ್ಯ ನಾಗಬೇಕಾದರೆ ಮೇಲೆ ಕಂಡ ಮರ್ಗುಣಗಳಿಗೆ ದೂರನಾಗಿರಬೇ ಕು, ಚಾಡಿಕೋರರ ಮಾರ್ಗವೆ ನಮಗೆ ಮನೋಹರ, ಅವರೇ ನನು ಗೆ ಪರಮಾಪ್ತರು, ಎಂಬುದಾಗಿ ಯಾವ ಅರಸುಗಳ, ನಂಬಿಕೊಂಡಿರು ವರೋ ಅವರ ರಾಜ್ಯಕ್ಕೆ ಕೇಡು ತಟ್ಟುವುದೆ ನಿಶ್ಚಯ, ಅವರ ಸಂಪ ತೆಲ್ಲ ಬಯಲಾಗುವುದೆ: ಸಿದ್ದ, ಅದಕಾರಣ, ರಾಜರು ಚಾಡಿಕೋರರ ಮಾತನ್ನು ಕೇಳಬಾರದು, ' ಹಿಮದಿಂದ ತಾವರೆಯ, ನೀರಿನಿಂದ ಜೇ. ನೂ, ದುರಾಸೆಯಿಂದ ಸದ್ಗುಣ ರೂ, ಹರಟೆಯಿಂದ ಗೌರವವೂ, ಅನಾಚಾ ರದಿಂದ ಕುಲದ ಪಾವಿತ್ರ್ಯವೂ, ಹುಳಿಯಿಂದ ಹಾಲೂ, ಕೋಪದಿಂದ ತಪಸ್ಸಿನ ಫಲವೂ, ಬಿರುಗಾಳಿಯಿಂದ ನೋಡದ ಒಡೂ ಕೆಟ್ಟುಹೋಗು ವಹಾಗೆ ರಾಜನ ರಾಜ್ಯವು ಚಾಡಿಕೋರರಿಂದ ಹಾಳಾಗುವುದು. ರಾಜರು ನೀಚರನ್ನೂ, ವಾಯಾವಿಗಳನ್ನೂ, ದುರ್ಸಿತರನ್ನೂ, ಚಪಲರನ್ನೂ, ದುರ್ಜನರನ್ನೂ, ಡಾಂಭಿಕರನ್ನೂ, ಸಿದ್ದು ರವಾಕ್ಯರನ್ನೂ, ದುರ್ಯೊಧಕ ರನ್ನೂ, ದುರಾಚಾರಿಗಳನ್ನೂ, ಕುಲಭಸ್ಮರನ್ನೂ, ದುರಾಲೋಚಕರ ನ್ಯೂ: ವೇದಮಾರ್ಗಪರಿಭಸ್ಮರನ್ನೂ ಕೂಡ ಹತ್ತಿರಕ್ಕೆ ಕರೆಯದೆ ೭ 6
ಪುಟ:ಚೆನ್ನ ಬಸವೇಶವಿಜಯಂ.djvu/೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.