ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಚೆನ್ನಬಸವೇಕನಿಜಯಂ | [ಅಧ್ಯಾಯ ನ್ನು ಹಾಳುಕೆಡಹಿ, ಸೂಳೆಯರೊಡನೆ ಉಪಭೋಗಿಸುತ್ತ ಇರುವ ರಾಜ ನನ್ನು ಜಯಲಕ್ಷ್ಮಿಯು ತೊಲಗಿಹೋಗದೆ ಇರುವಳೆ ? ಸಂಪದಾಸತ್ತು ಗಳಲ್ಲೂ ಒಳ್ಳೆಯ ನಡತೆ, ಆಡಿ ತಪ್ಪದ ಮಾತು, ಸಮಯಸಂಧಿಗಳನ್ನ ರಿತು ತೋರಿಸಬೇಕಾದ ಕೌರ, ಸೇವಕರ ಪರಿಪಾಲನ, ಕಾಲೋಚಿತ ವಾದ ಭೋಗ, ಅಪರಾಧಕ್ಕೆ ತಕ್ಕಷ್ಟು ಕೋಪ, ಪಿಸುಣರ ಮಾತನ್ನು ಕೇಳದಿರುವುದು, ಒಂದುವೇಳೆ ಕೇಳಿದರೂ ಬಲ್ಲವರ ಮುಖದಿಂದ ನಿಜ ಸ್ಥಿತಿಯನ್ನು ಕೇಳಿ ನಿರ್ಧರಿಸಿಕೊಳ್ಳುವುದು, ಇವಿಘ್ನನ್ನೂ ದೊರೆಯು ತಪ್ಪದೆ ಅನುಸರಿಸಬೇಕು, ಮಳೆಯಿಂದ ಪೈರುಗಳ, ಹೂವಿನ ಮಕರಂ ದದಿಂದ ತುಂಬಿಗಳೂ, ಜ್ಞಾನದಿಂದ ತಪಸ್ಕೂ, ಚಂದ್ರಕಿರಣದಿಂದ ಚ ಕೊರಪಕ್ಷಿಗಳೂ, ಸದ್ಧರ್ಮದಿಂದ ರಾಜ್ಯವೂ, ಸ್ನೇಹಿತರಿಂದ ಪ್ರೀತಿ ಯೂ, ಸತ್ಪುತ್ರರಿಂದ ಇಹರ್ಪಸ್ಖವೂ, ವೃದ್ಧಿಯಾಗುವಂತೆ ಮಂತ್ರಿ ಶ್ರೇಷ್ಠ ನಿಂದ ರಾಜನ ಐಶ್ವವು ತಕ್ಲಪಕ್ಷದ ಚಂದ್ರನಂತೆ ಹೆಚ್ಚುವುದು. ನಿನ್ನಲ್ಲಿರುವ ಬಸವಾಮಾತ್ಮನು ಸಾಮಾನ್ಯನಲ್ಲ, ನಿನ್ನ ಸಕಲ ಸಂಪತ್ತಿ ಗೂ ಅವನೆ ಕಾರಣನು. ಹೆರರ ಸಂಪತ್ತನ್ನು ನೋಡಿ ಸೈರಿಸಲಾರದ ವರು ಚಾಡಿಯನ್ನು ಹೇಳಿದರೆ ಅದನ್ನು ನಿಜವೆಂದು ನಂಬತಕ್ಕುದು ನಿನಗೆ ನೀತಿಯಲ್ಲ, ಎಂದು ಚೆನ್ನಬಸವೇಶನು ಬೋಧಿಸಲು, ದೊರೆಯಲ್ಲಿ ಸು ಜ್ಞಾನವೆಂಬ ಸೂರ್ನು ತಲೆದೋರಿದನು. ಕಡಲೆ: ಅವನ ಮನಸ್ಸಿನ ಲ್ಲಿದ್ದ ಸಂಶಯವೆಂಬ ಅಂಧಕಾರವು ತೊಲಗಿ, ವಿವೇಕವೆಂಬ ಬಿಸಿಲು ಹರ ಡಿಕೊಂಡಿತು, ಮುಖಕಮಲವು ವಿಕಸಿತವಾಯಿತು. ಬಸವರಾಜನ ಮ ನಸ್ಸು ದೊರೆಯ ಮನಸ್ಸು ಎಂಬ ಚಕ್ರವಾಕಂಗಳೆರಡೂ ಕೂಡಿದುವು. ಆಗ ದೊರೆಯು ಸಂತೋಷದಿಂದ_ಸ ಮಿಾ ! ನಿವಲ್ಲದೆ ನಮಗಿನ್ನಾರು ಹಿತ 1ು ? ನಾನಾಳ ವ ಭೂಮಿಯೆಲ್ಲವೂ ಒಸವೇಶಸಿಗೆ ಅಧೀನವಾದುದು; ನೀವುಗಳೆ: ಪವಿತ್ರ ಚರಿತ್ರಗು; ಎಂದು ಇಬ್ಬರನ್ನೂ ಕೊಂಡಾಡಿ, ಉಡು ಗೊರೆಗಳನ್ನು ತರಿಸಿಕೊಟ್ಟು, ಅವರ ಮನೆಗೆ ಮಾದೆಯಿಂದ ಕಳುಹಿಸಿ, ತನ್ನ ಅಂತಃಪುರಕ್ಕೆ ದೊರೆಯು ತೆರಳದನು ಎಂಬಿಲ್ಲಿಗೆ ೭ನೆ ಅಧ್ಯಾಯವು ಸಂಪೂರ್ಣವು. --**#*-