W ಉಮಾಮಹೇಶ್ವರಲೀಲೆ ಭಯಭಕ್ತಿಭರಿತನಾಗಿ ಕೊಂಡಾಡಿ, ತಾಯೆ ! ನೀನು ಪರಶಿವನೊಡನೆ ಬೆರೆದಿರುವವರೆಗೂ ನನಗೆ ಸೃಷ್ಟಿಕಾಗ್ಯವು ಅಘಟಿತವಾಗಿರುವುದು, ಅದು ಕಾರಣ, ನೀನು ನನ್ನ ಮಗನಾದ ದಕ್ಷಬ್ರಹ್ಮನ ಹೊಟ್ಟೆಯಲ್ಲಿ ಹುಟ್ಟಿ ಶಿವನಿಗೆ ಹೆಂಡತಿಯಾದರೆ ಆಗ ನನ್ನಲ್ಲಿರುವ ಶಕ್ತಿಯರು ಕೂಡ ಸ್ತ್ರೀ ಯರಾಗಿ ಜನಿಸುವರು. ಅವರ ದೆಸೆಯಿಂದ ನಾನೀಜಗಕಾರ ವನ್ನು ಸುಲಭವಾಗಿ ಮಾಡಿಕೊಳ್ಳುವೆನು, ಈ ವರವನ್ನು ತಾವು ದಯೆ ಪಾಲಿಸಬೇಕೆಂದು ಪ್ರಾರ್ಥಿಸಿದನು. ಹಾಗೇ ಆಗಲೆಂದು ಆ ಕ್ರಿಯಾಶ ಕ್ರಿಯಾ ವರವಿತ್ತುದಲ್ಲದೆ, ನಿನ್ನ ವಶಕ್ತಿಯನ್ನು ಹೊರಗೆಡಹಿದರೆ ಅವ ಳು ಸರಸತಿಯೆಂಬ ಹೆಸರಿನಿಂದವತರಿಸುವಳು, ಅವಳೊಡನೆ ಕೂಡಿ ನೀನು ಜಗತೃಷ್ಟಿಯನ್ನು ಮಾಡೆಂದು ಹೇಳಿ ಬಯಲಾದಳು, ಬ್ರಹ್ಮ ನು ತನ್ನ ಸತಿಯಾದ ಸರಸತಿಯೊಡನೆ ಕೂಡಿ ಸುಖದಿಂದಿರುತ್ತ ಶತರೂಪ ಸ್ವಾಯಂಭು ಎಂಬಿಬ್ಬರನ್ನು ಸೃಜಿಸಿ, ಅವರಿಬ್ಬರನ್ನೂ ದಂಪತಿಗಳನ್ನು ಮಾಡಿದನು. ಅವರ ಹೊಟ್ಟೆಯಲ್ಲಿ ಪ್ರಿಯವ್ರತ, ಉತ್ತಾನಪಾದ, (ಗಂಡು) ಆಕೂತಿ, ದೇವಹೂತಿ, ಪ್ರಸೂತಿ, (ಹೆಣ್ಣು) ಎಂಬೈದುಮಂದಿ ಮಕ್ಕಳು ದಿಸಿದರು. ಅವರಲ್ಲಿ ಆಕೂತಿ ಯೆಂಬುವಳನ್ನು ರುಚಿಯೆಂಬ ಬ್ರಹ್ಮನೂ, ಪ್ರಸೂತಿಯನ್ನು ದಕ್ಷಬ್ರಹ್ಮನೂ, ದೇವಹೂತಿಯನ್ನು ಕರ್ದಮನೂ, ಪತ್ನಿಯನ್ನಾಗಿ ಮಾಡಿಕೊಂಡರು. ದಕ್ಷಬ್ರಹ್ಮನಿಗೆ ಆ ಪ್ರಸೂತಿಯೆಂ ಬುವಳ ಹೊಟ್ಟೆಯಲ್ಲಿ ಶಿವನ ಕ್ರಿಯಾಶಕ್ತಿಯು ದಾಕ್ಷಾಯಣಿಯೆಂಬ ಹೆಸ ರಿನಿಂದ ಜನಿಸಿದಳು, ಈ ದಾಕ್ಷಾಯಣಿಯನ್ನು ಶಿವನಿಗೆ ಕೊಡಬೇಕೆಂಬ ಇಷ್ಟದಿಂದ ದಕ್ಷಬ್ರಹ್ಮನು ಶಿವನನ್ನು ಕುರಿತು ತಪಸ್ಸು ಮಾಡಿ ಮೆಚ್ಚಿಸಿ, ಮ ಹಾದೇವರೇ ! ನೀನು ನನ್ನ ಮಗಳನ್ನು ವರಿಸಬೇಕೆಂದು ಬೇಡಿಕೊಂ ಡನು. ಹಾಗೇ ಆಗಲೆಂದು ಒಪ್ಪಿ, ಶಿವನು ದಾಕ್ಷಾಯಣಿಯನ್ನು ಮದುವೆ ಮಾಡಿಕೊಂಡು, ಮಹಾ ವೈಭವದಿಂದ ಕೈಲಾಸಪುರದ ಮಹಾಮಂದಿರ ದಲ್ಲಿ ಉಮಾಮಹೇಶ್ವರನಾಗಿ ಒಪ್ಪುತ್ತಿದ್ದನು. ಇಂತು ಪರಮಾನಂದನಿಧಿ ಯಾದ ಮಹೇಶ್ವರನು ಇರುತ್ಯ, ಬ್ರಹ್ಮಾಂಡ ಭಾರವನ್ನೆಲ್ಲ ಕುಕ್ಷಿಯಲ್ಲಿ ಧರಿಸಿರುವ ನನ್ನನ್ನು ಹೊರುವವರು ಇನ್ನಾರೂ ಇಲ್ಲವಲ್ಲ! ಎಂದು ನೆನೆದು, ತನ್ನ ಹೃದಯದಲ್ಲಿದ್ದ ಸದ್ಧರ್ಮವನ್ನೇ ಸ್ಮರಿಸಲು, ಅದು ಪರಮತೇಜೋ
ಪುಟ:ಚೆನ್ನ ಬಸವೇಶವಿಜಯಂ.djvu/೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.