ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸಪೋಳವಿಜಯಂ (+ಂಡ ೨) [ಅಧ್ಯಾಯ ವಿನ ಆಕಾರದಂತೆ ತೋರುತ್ತಿರುವುದು, ಅದರ ಮೇಲಣ v ಕೊಣಗ ಇಲ್ಲೂ ಅಷ್ಮೆದಿಕಾಲಕರ v ಪಟ್ಟಣಗಳಿರುವುವು, ಅದರ ಮಧ್ಯದಲ್ಲಿ ರತ್ನಖಚಿತವಾದ ಈಶ್ವರನ ಅರಮನೆಯಿರುವುದು. ಇಂತಹ ಭೂಲೋಕದ ಮೇಲೆ ೧ ಲಕ್ಷಯೋಜನದಳತೆಯಲ್ಲಿ ಭು ವರ್ಲೋಕವಿರುವುದು, ಅದಕ್ಕೆ ಸೂರನು ಅಧಿಪತಿಯು, ಭೂಮಿಗೆ ೨ ಲಕ್ಷದೊಜನದಳತೆಯಲ್ಲಿ ಚಂದ್ರನೂ, ೯ ಲಕ್ಷ ಬೋಜನದಲ್ಲಿ ನ ಕ್ಷತ್ರಗಳೂ, ೫ ಲಕ್ಷ ಯೋ ಹನದಲ್ಲಿ ಬುಧನೂ, ೬ ಲಕ್ಷ ಯೋಜನ ದಲ್ಲಿ ಶುಕ್ರನೂ, ೯ ಲಕ್ಷ ಯೋಜನದಲ್ಲಿ ಅಂಗಾರಕನೂ, ೧೧ ಲಕ್ಷ ಯೋಜನದಲ್ಲಿ ಬೃಹಸ್ಪತಿಯ, ೧೪ ಲಕ್ಷ ಯೋಜನದಲ್ಲಿ ಶನಿಯ, ೧೪ ಲಕ್ಷ ಯೋಜನದಲ್ಲಿ ಸಪ್ತರ್ಷಿಗಳೂ, ೧೫! ಲಕ್ಷಯೋಜನದಲ್ಲಿ ಧ್ರುವನೂ ಇರುತ್ತಿರುವರು. ಸೂಗ್ಯನಿಂದ ಮೇಲೆ ೧೪ ಲಕ್ಷ ಯೋಜ ನದಲ್ಲಿ ಸ್ವರ್ಗಲೋಕವಿರುವುದು, ಅದಕ್ಕೆ ಇಂದ್ರನಧಿಪತಿಯು ದ್ರು ವಮಂಡಲದ ಮೇಲೆ ೧ ಕೊಟಿಯೋಜನದಲ್ಲಿ ಮಹರ್ಲೋಕವಿರುವು ದು, ಅದಕ್ಕೆ ಮಾರ್ಕಂಡೇಯನಧಿಪತಿಯು, ಅಲ್ಲಿಂದ ಮೇಲೆ ೨ ಕೋಟ ಯೋಜನದಲ್ಲಿ ಜನರ್ಲೋಕವಿರುವುದು, ಅದಕ್ಕೆ ಸನಕಸನಂದನಾದಿಗಳು ಆಧಿಪತಿಗಳು, ಅಲ್ಲಿಂದ ನಾಲ್ಕು ಕೋಟಿ ಯೋಜನದಲ್ಲಿ ತಿಲೋಕ ವಿರುವುದು, ಅದಕ್ಕೆ ವಿಷ್ಣುವು ಅಧಿಶ್ವರನು, ಅದರಿಂದಮೇಲೆ ೬ಕೋಟಿ ಯೋಜನದಲ್ಲಿ ಸತ್ಯಲೋಕವಿರುವುದು, ಅಲ್ಲಿಗೆ ಚತುರ್ಮುಖಬ್ರಹ್ಮನು ಅಧಿಪತಿಯು, ಅದರಮೇಲೆ ೧೦ ಕೋಟ v೫ ಲಕ್ಷ ಯೋಜನದಲ್ಲಿ ಆಕಾ ಶವಿರುವುದು, ಹೀಗೆ ಬ್ರಹ್ಮಾಂಡವು ೧೪ ಲೋಕಗಳಿಂದ ಸೇರಿ ೫೦ ಕೋ ಟಿ ಯೋಜನದಳತೆಯುಳ್ಳದಾಗಿರುವುದು, ಚತುರ್ಮುಖಬ್ರಹ್ಮನು ಹೀಗೆ ಬ್ರಹ್ಮಾಂಡವೆಂಬ ಮನೆಯಲ್ಲಿ ದೇವ ರಾಕ್ಷಸ ಮಾನವ ನಾಗ ಸಿದ್ದ ವಿದ್ಯಾ ಧರ ಮನು ಮನಿ ಕಿನ್ನರ ಕಿಂಪುರುಷಾದಿ ಸಚರಾಚರರನ್ನೆಲ್ಲ ಅಲ್ಲಲ್ಲಿರಿಸಿ ಅವರಿಂದೆಲ್ಲ ಸೇವೆಗೊಳ್ಳುತ್ತಿದ್ದನು. ಎಂಬಿಲ್ಲಿಗೆ ನಾಲ್ಕನೆ ಅಧ್ಯಾಯವು ಸಂಪೂರ್ಣವು. –####-