-ಹಾಗಿಂಗ್'ಗೃಗಲೀಲೆ, ೫ನೇ ಅಧ್ಯಾಯವು. ಮ ಹಾ ಲಿಂಗೊ ವ ಲಿ ಲೆ . - - ಬ್ರಹ್ಮನು ತನ್ನ ಸತ್ಯಲೋಕದಲ್ಲಿ ಎಂದಿನಂತೆ ಒಂದಾನೊಂದುದಿವ ಸ ರತ್ನ ಸಿಂಹಾಸನದಮೇಲೆ ಮೂರಿಗೊಂಡು ತನ್ನ ಪುತ್ರಪೌತ್ರಾದಿಗಳಾ ಗಿರುವ ಮನುಮುನಿದೇವದಾನವಾದಿಗಳಿಂದೆಲ್ಲ ಸೇವೆಗೊಳ್ಳುತ್ಯ ವೈಭವ ದಿಂದಿರಲು, ಸಭೆಯಲ್ಲಿದ್ದ ಜನಸ್ತೋಮುವೆಲ್ಲ ನೀನೇ ಜಗದುತ್ಪತ್ತಿ ಸ್ಥಿತಿಲಯಗಳಿಗೆ ಕರ, ನೀನೇ ದುಷ್ಟನಿಗ್ರಹಶಿಪ್ಪಪರಿಪಾಲನ ದಕ್ಷ; ಲೋಕಪಾಲಕರೆಲ್ಲರೂ ನಿನ್ನ ಧೀನರು, ಸಕಲ ವಿದ್ಯಾಧಿದೇವತೆಯಾದ ಸರ ಸ್ಪತಿಯೆ ನಿನ್ನ ಪತ್ನಿ; ಅದುಕಾರಣ ನೀನೇ ಜಗದೊಡೆಯ, ನಿನಗಿಂತ ಲೂ ಅಧಿಕವಾದ ಬೇರೊಬ್ಬ ದೇವನಿಲ್ಲವೆಂದು ಹೊಗಳುತ್ತಿದ್ದು ಸ್ತುತಿ ಪ್ರಿಯನಾದ ಬ್ರಹ್ಮನು ಕೇಳಿ ಹಿಗ್ಗಿ, ಅಹಂಕಾರದಿಂದ ಬುದ್ದಿಗೆಟ್ಟು, ತನ್ನ ಸಂಪತ್ತಿಗೆ ಸರಿಯಾವುದೆಂದು ತನ್ನನ್ನು ತಾನೇ ಹೊಗಳಿಕೊಂಡನು. ಈ ರೀತಿಯಾದ ಬ್ರಹ್ಮನ ದುರ್ಗುಣದಿಂದಲೂ ಅಸತ್ಯದಿಂದಲೂ ಜಗತ್ತು ಅ೪ ಯುವ ಗತಿಯುಂಟಾಗಲು, ಅದನ್ನು ವಿಷ್ಣುವು ತಿಳಿದು, ಬ್ರಹ್ಮನ ಸಭೆಗೆ ಬಂದನು, ಬ್ರಹ್ಮನು ನೀನಾರೆಂದು ಕೇಳಲು, ವಿಷ್ಣುವು-ಎಲೆ ಬ್ರಹ್ಮನೆ! ನೀನು ಕುರಿಯಸಮಾನ; ನಿನಗೂ ಈ ಜಗತ್ತಿಗೂ ನಾನು ಒಡೆಯ; ನಿನ್ನ ಸಭಾಸದರು ನಿನ್ನನ್ನೇ ಸರಕರನೆಂದು ಹೊಗಳಿದ ಮಾತ್ರಕ್ಕೇ ನೀನು ಬೆರೆತು ಮರೆತುಬಿಟ್ಟೆಯಾ? ಎಂದನು. ಬ್ರಹ್ಮನು ಕೋಪಗೊಂಡು ಎಲೋ ರತ್ನಖಚಿತ ನಿಷ್ಕಾಸನದಮೇಲೆ ಕುಳಿತು ಸುತ್ತಲೂ ದೇವತೆಗಳಿಂದ ಸೇವೆ ಗೊಳ್ಳುತ್ತಲಿರುವ ನಾನು ಕುಯೊ ಮಾರಿ ಮಿಕ್ಕಿರುವ ಕುರಿಯಂತೆ ಒಂ ಟಿಗನಾಗಿ ನಿಂತಿರುವ ನೀನು ಕುರಿಯೋ? ಹೇಳು, ಎಂದು ನುಡಿದು, ತನ್ನ ಸಭಿಕರ ಕಡೆಗೆ ತಿರುಗಿ, ಎಲೈ ಮನಮುಸಿಗಳಿರಾ! ಪರಿಹಾಸಾಸ್ಪದವಾದ ಇವನ ಮಾತನ್ನು ಕೇಳರಿ, ತಾನು ಜಗತ್ತನ್ನೆಲ್ಲಾ ಪಾಲಿಸತಕ್ಕವನಂತೆ ! ನನಗೂ ಇವನೇ ಒಡೆಯನಂತೆ ! ನನ್ನ ಸಭೆಯಲ್ಲಿ ಇವನೀಮಾತನ್ನು ಆಡಬಹುದೆ ? ಇವನ ನಾಲಿಗೆಯನ್ನು ಕತ್ತರಿಸಬೇಕಲ್ಲವೆ ? ಕೊಬ್ಬಿರುವ ಇವನನ್ನು ಈ ಹಣವೇ ಯಮನ ಮನೆಗೆ ಕಳುಹುತ್ತೇನೆ ಎಂದು ಗರ್ಜಿ 10
ಪುಟ:ಚೆನ್ನ ಬಸವೇಶವಿಜಯಂ.djvu/೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.