ಮಹಾಲಿಂಗೋದ್ಭವಲೀಲೆ. ತಪ್ಪಿಸಿ ಗದೆಯನ್ನು ತಿರುಹಿ ಬರಸೆಳೆದು ಹೊಡೆವರು, ಆ ಪೆಟ್ಟಿಗೆ ನಿಕ್ಕದೆ ತಪ್ಪಿಸಿಕೊಂಡು ಆರ್ಭಟಿಸಿ ಮತ್ತೆ ಹೊಡೆವರು, ಹೀಗೆ ಇ ಬೃರೂ ನಿಂತಲ್ಲಿ ನಿಲ್ಲದೆ ಬುಗುರಿಗಳಂತೆ ಸುತ್ತುತ್ಯ ಭುಜಬಲದಿಂದ ಕಾ ದಾಡಿ ಸೋಲುಗೆಲವುಗಳನ್ನು ಕಾಣದೆ ಸಾಕಾಗಿ, ಆ ಗದೆಗಳನ್ನೂ ಬಿ ಸುಟು, ಮಲ್ಲಿಗಾಳಗಕ್ಕೆ ಅಣಿಯಾದರು. ಅವರ ವಾಹನಗಳೂ ಕೂಡ ಪರಸ್ಪರ ಕಾದಾಡಲುನಿಂತು, ಘೋರವಾಗಿ ಸೆಣಸಿ ಎರಡೂ ಸತ್ತುವು. ಬಳಿಕ ವೀರರೀರ್ವರೂ ನಿಂತು ತೋಳೋಡೆಗಳನ್ನು ತಟ್ಟಿ, ಸಹನಾ ದವನ್ನು ಮಾಡಿ, ದ೦ಡೆಗೊಟ್ಟು ಎರಡು ಬೆಟ್ಟಗಳು ಗಿರಗಿರನೆ ತಿರುಗಿ ದಂತೆ ಒಂದು ಜಾವದವರೆಗೆ ಸುತ್ತಿದರು. ಇವರ ಸುತ್ತಾಟಕ್ಕೆ ಭೂಮಿ ಯೆಲ್ಲ ನಡುಗಿತು, ಆಗ ಓರ್ವರನ್ನೊರ್ವರು ಹಿಡಿದು ಅಪ್ಪಳಿಸಿ, ಅ ಡ್ಡಗಾಲ್ಕೆಟ್ಟು ಕೆಡಹಿ, ಎದ್ದು, ಬೆನ್ನಿಗೆ ಬಂದು, ಸುತ್ತಿ ತಿರುಹಿ, ಸೆಳೆದು ಬಿಟ್ಟು, ಕೆಡಹಿ, ಮತ್ತೆ ಮೇಲೆದ್ದು , ನುಗ್ಗಿ, ಎತ್ತಿಹಾಕಿ, ಒಡ ನೆಯೇ ಹಾವುಗಳಂತೆ ಹೆಣೆದು, ಹೊರಳಾಡಿ, ಸಾಕಾದರು. ಆದರೂ ಒಬ್ಬ ರೂ ಸೋಲಲಿಲ್ಲ. ಆಗ ಹರಿಯು ಅತ್ಯಂತ ರೋಪವನ್ನು ತಾಳಿ ಈ ನೀಚ ಬ್ರಹ್ಮನು ನನ್ನೊಡನೆ ಸಮಾನವಾಗಿ ಹೋರಾಡುವುದಕ್ಕೆ ಎಷ್ಟರವನು? ಇವನಹಂಕಾರವನ್ನೆಲ್ಲ ನಿಲ್ಲಿಸುತ್ತೇನೆಂದು ನಿರ್ಧರಿಸಿ, ಬ್ರಹ್ಮನ ಮುದ್ದಿ ಘಾತಕ್ಕೆ ತನ್ನ ಮೆಯೊಡ್ಡಿ, ಬಳಿಕ ತೋಳನ್ನೆತ್ತಿ ಬ್ರಹ್ಮನ ತಲೆಯಮೇ ಲೆ ಬಲವಾಗಿ ಮುಪ್ಪಿಯ ಪೆಟ್ರೊಂದನ್ನು ಕೊಟ್ಟನು. ಅದರಿಂದ ಬ್ರ ಹೃನ ತಲೆಯು ಸಮನಾಗಿ ನಾಲ್ಕು ಹೋಳಾಯಿತು. ಆದರೇನು? ಲೋಕ ನನ್ನೆ ಹುಟ್ಟಿಸುವ ಬ್ರಹ್ಮನಿಗೆ ತನ್ನ ತಲೆಯನ್ನು ಹುಟ್ಟಿಸಿಕೊಳ್ಳುವುದು ದೊಡ್ಡದೆ ? ಬ್ರಹ್ಮನು ಆ ನಾಲ್ಕು ಹೋಳುಗಳನ್ನೇ ನಾಲ್ಕು ತಲೆಯನ್ನಾ ಗಿ ಮಾಡಿಕೊಂಡು ಅತಿಕೋಪದಿಂದ ಮತ್ತೆ ಯುದ್ಧಕ್ಕೆ ನಿಂತು ಇವನನ್ನು ಒಂದೇ ಏಟಿಗೆ ಮುರಿದಿಕ್ಕುವೆನೆಂದು ಅರ್ಭಟಿಸಿ, ಎರಡು ತೋಳುಗಳ ನ ತಟ್ಟಿ, ಮೊಲೆ ಬೀಳಲನುವಾದನು. ಅಸ್ಟ್ರಲ್ಲಿ ಆಕಾಶದಿಂದ ಒಂ ದು ಶಬ್ದವು ಕೆಳಬಂದಿತೆನೆಂದರೆ- 'ಎಲೆ ವಿದ್ಯುವೆ, ನೀನು ಅಜ್ಞನೆ ? ಬ್ರಹ್ಮನೆ, ನೀನು ಮೂರ್ಖನೆ ? ನಿಮ್ಮಿಬ್ಬರಿಗೂ ಹೆಚ್ಚಿನ ವಸ್ತುವು ಬೇ ರೊಂದುಂಟು. ಅದು ಈಗ ನಿಮ್ಮಿಬ್ಬರ ಮಧ್ಯದಲ್ಲಿ ಮೂಡುತ್ತದೆ, ಆದ 2)
ಪುಟ:ಚೆನ್ನ ಬಸವೇಶವಿಜಯಂ.djvu/೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.