4 ಚನ್ನಬಸವೇಳವಿಜಯಂ (ಕಾಂಶ ) [ಅಧ್ಯಾಯ ಮತ್ತೆ ಕೊಂಡಾಡಿದರು. ಆಗ ಶಿವನು ವಿಷ್ಣುವನ್ನು ಕರೆದು, ಬ್ರಹ್ಮನ ಆ ಸತ್ಯದಿಂದ ಕರಗಿ ಬಿದ್ದು ಹಾಳಾಗಿರುವ ಭೂಮಿಯನ್ನು ಮುನ್ನಿನಂತೆ ನಿ ರೈನಿ ರಕ್ಷಿಸಿಕೊಂಡಿರೆಂದುಹೇಳಿ ಅಪ್ಪಣೆ ಕೊಟ್ಟು ಕಳುಹಿ, ಬಳಿಕ ಬ್ರ ಹ್ಮನನ್ನು ಸವಿಾಪಕ್ಕೆ ಕರೆದು, ನೀನು ಇನ್ನು ಮುಂದೆ ಇಂತಹ ಅಹಂ ಕಾರವನ್ನು ಮಾಡಬೇಡ; ಅಸತ್ಯವನ್ನು ಬಿಡು; ಸ್ಥಿರಬುದ್ಧಿಯಿಂದ ಪೂ ರದಂತೆ ಜಗತ್ತೈಯನ್ನು ಮಾಡಿಕೊಂಡಿರು, ನಿಮ್ಮ ನಿಮ್ಮಲ್ಲಿ ಕಲ ಹವನ್ನು ಮಾಡಬೇಡಿರಿ, ಎಂದು ಆಜ್ಞಾಪಿಸಿ, ಅಂತರ್ಹಿತನಾದನು, ವಿ ಷ್ಣುವು ವರಾಹರೂವಿನಿಂದಲೇ ತನ್ನ ಮೂತಿಯಿಂದ ಭೂಮಿಯನ್ನೆತ್ತಿ ನಿಲ್ಲಿಸಿ, ಸೃಷ್ಟಿಯನ್ನು ಮಾಡೆಂದು ಬ್ರಹ್ಮನಿಗೆ ಹೇಳಿ, ತಾನು ಹೀರಸ ಮುದ್ರದ ಉತ್ತರ ಭಾಗದಲ್ಲಿ ಶೇಪನ ಮೇಲೆ ಮಲಗಿಕೊಂಡನು ಎಂದು ಚೆನ್ನ ಬಸವೇಶನು ನುಡಿದನೆಂಬಿಲ್ಲಿಗೆ ೪ನೆ ಅಧ್ಯಾಯವು - ಸಂಪೂರ್ಣವು. -+ ೬ ನೆ ಅಧ್ಯಾಯವು. ಆ ಧ ೯ ನಾರಿ ಶ ರ ಲಿ ಲೆ . –****- ಚತುರು ಖಬ್ರಹ್ಮನಿಗೆ ಜಗತೃಷ್ಟಿಯು ಅವನ ಅಸತ್ಯದಿಂದ ಅಸಾಧ್ಯವಾಗಿರಲು, ಬಹು ಕಾಲ ಈಶ್ವರನನ್ನು ಕುರಿತು ತಪಸ್ಸು ಮಾ ಡಿದನು. ಶಿವನು ಪ್ರತ್ಯಕ್ಷನಾಗಿ, ಇಷ್ಟಾರ್ಥವೇನು ? ಬೆಂಡೆನಲು, ಸಾ ಮೀಾ ! ತಮ್ಮ ಪ್ಪಣೆಯಂತೆ ನಾನು ಜಗತೃಪ್ತಿಯನ್ನು ಮಾಡಬೇಕೆಂದು ಯಾವ ಯಾವ ವಿಧದಲ್ಲಿ ಪ್ರಯತ್ನಿಸಿದರೂ ತಮ್ಮ ಅವಲಂಬನವಿಲ್ಲದಕಾ ರಣ ಸಾಧ್ಯವಾಗದೆ ಇರುವುದು, ಅದು ಕಾರಣ, ನೀವೇ ಮೊದಲು ನನ್ನ ದೇಹದಿಂದುದ್ಭವಿಸಿ ಸೃಷ್ಟಿಕಾರಕ್ಕೆ ಸಹಾಯಗೊಳಿಸಬೇಕೆಂದು ಪ್ರಾ ರ್ಥಿಸಿಕೊಂಡನು. ಆಗ ಶಿವನು ಅಯ್ಯಾ ನೀನೇನೋ ಈ ವರವನ್ನು ಕೇಳಿಕೊಂಡೆ. ನಿನ್ನದಂತೆ ನಾನು ನಿನ್ನ ಶರೀರದಿಂದ ಮೂಡಿದೆನಾದ
ಪುಟ:ಚೆನ್ನ ಬಸವೇಶವಿಜಯಂ.djvu/೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.