ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಹತ್ತೊ ನೂರೋ ದಳಗಳ ನಡುವೆ ಮಿನು ಮಿನುಗುವ ಈ ಬಟ್ಟನೆ ಪೀಠ, ಅಲೆವೆಲರಿಗೆ ತಲೆಯೊಲೆಯದ ನಿಲುವು, ಚೆಂದ ಇದೆಸಗುವ ಸೂರನ ಬೂಟ. ಇಲ್ಲಿದೆ ಬೊಂತೆಯ ಕಳ್ಳಿ ಪಿಂಗಳ ವರ್ಣದ ಹೂವಲಿ ತೋರಿದೆ ನಯ್ಯ; ಎಲ್ಲರ ಜೊತೆಯಲಿ ರೋಜಿಯ ಹೂತು ಹರಡಿದೆ ತನ್ನ ಬಣ್ಣದ ಹುಚ್ಚ, ಏನಿದು ಚುಕ್ಕಿ ? ಅದೆ? ಕಣ್ಣಿಕ್ಕಿ ನೋಡು ; ಅದು ದಳ ನಾಲ್ಕರ ಮೋಸ; ಹೂಮನೆತನದಲಿ ಮರಿಮಗ; ಇದ್ದೂ ಕಾಣದ ತಾರೆಯ ಕೂಸಿನ ಕೂಸು. ಹೂದಳವಿಂತು ವಿಗಡಿಗೆ ನಿಂತು ಹಂಬಿನೇಣಿಯಲಿ ಮರವನು ಏರಿ, ಕಾಡಿನ ಹೂಗಳು ಜಗವನು ಗೆಲಿದೆವು, ಎಂದು ಕೂಗುತಿದೆ ಇಲ್ಲಿ ತುತೂರಿ,