ಈ ಪುಟವನ್ನು ಪ್ರಕಟಿಸಲಾಗಿದೆ

ಕಾಡುಹೂಗಳು

ಕಲ್ಲು ಮಣ್ಣು ಹೆಂಟೆ ಮುಳ್ಳು-
ಅವುಗಳ ನಡುವೆ ಇದೆಕೊ ರತ್ನ ;
 ಮುಳ್ಳು ಮಣ್ಣು ನೊರಜಿನ ನಡುವೆ
ಇಕೊ ಹೊಚ್ಚ ಹೊಸ ಹೊನ್ನಕ್ಷತ್ರ.


ಇದೆಕೊ ದಾರಿಯ ಬದಿಯಲ್ಲಿ ಹುಲ್ಲಲಿ
ವಿಷ್ಟು ಕ್ರಾಂತಿಯ ಪರಿಮಿತ ನೀಲ;
 ಇಲ್ಲಿ ಬೇರೆ ಯಾವುದೊ ಬಹು ನೀಲದ
ಮಡಲಲಿ ಹಳದಿಯ ಕುಸುರಿಯ ಲೋಲ.

ರಾಗಿಯ ಪೈರಿನ ಮಧ್ಯದಿ ಮುಳ್ಳಲಿ
ಕೊಂಬಿನ ಸುಂದರ ಇಕೊ ಗುಬ್ಬಚ್ಚಿ ;
 ಬದುವಿನ ಗಿಡದಲಿ ಊದಾ ಬಣ್ಣದ
ಚಳತುಂಬಿನ ಚೆಲುಹೂವಿನ ಕುಚ್ಚು,

ಹೊಲದಲಿ ಹೊಂಬಣ್ಣದ ಹೊಳೆ ಹರಿಸಿ
ದತ್ತೂರಿ; ಆರಂಬದ ಕರೆ ಕರೆ;
 ನನ್ನ ವೊಲಲೆಯುವ ಸೋಂಬರ ಮೆಚ್ಚು;
ಇಲ್ಲೆ ಇದರ ಸೋದರ ನೇಸರಮರಿ;