ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಎನ್ನ ನುಡಿ ಕೇಳು, ಚೆನ್ನಹುದು ಬಾಳು, ಮೋಡಿ ಬೇಡ ; ಏನೋ ಎನಬೇಡ, ಕಾಣುವುದು ನೋಡು ; ನೋಡು ; ಕಾಣು. ಯೋಧನು ಕಣ್ಣಿಂದ ನೀರನ್ನು ಕೊಡಹುವನು. ನೀರೆ ಕಣ್ಣಿನಲಿ? ಆರಿತೇ ಕೋಪ? ಛಲ ಹೋಯಿತೆ? ಕರಗಿತೇ ಕರುಳು ? ಮರೆಯಿತೇ ಮರುಳು? ತಳ ಅರಿಯಿತೆ ? ಯೋಧನು ಆಯುಧವನ್ನು ದೂರ ಎಸೆಯುವನು. ಬೇಡವೇ ಕ? ನೋಡು ಈ ಹೊತ್ತು ಮಲ್ಲ ನೀನು ; ಅರಿದಗಾತುಮವೇ ಸುರಗಿ ; ಅದರೆಣೆಗೆ ಇಲ್ಲ ಅಲಗು. ಕರುಣ ಬಂದಣ್ಣ, ಒರಸಿಕೊ ಕಣ್ಣ; ಅಪ್ಪ ನನ್ನ ; ಬಾರಣ್ಣ ಬಾರೋ ಕಾರುಣ್ಯ ಮೂರ್ತಿ ಬೊಪ್ಪ ಬಾರೊ ೨೫