ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

 ಯೋಧನು ಬಂದು ಸಾತ್ವಿಕನ ಕಾಲನ್ನು ಹಿಡಿಯುವನು.
 ಸಾತ್ವಿಕನು ತಡೆದು ಅವನನ್ನು ಎದೆಗೆ ಅಪ್ಪಿಕೊಳ್ಳುವನು.

ಅಪ್ಪಿ ಇರು ಇಂತೆ; ತಪ್ಪ ಬೇಡಿನ್ನು ;
ಎಷ್ಟು ಜನ್ಮ
 ಸುತ್ತಾಡಿ ತಿರುಗಿ ಹತ್ತಿರಕೆ ಬಂದೆ,
ಇಷ್ಟ, ಮಿತ್ರ.


ಯೋಧನು ಮೆಲ್ಲನೆ ಏನೋ ಹೇಳುವನು.


 ಗುರುವೆ ನಾ ನಿನಗೆ ? ಗುರು ನನಗೆ ನೀನು ;
ಒಳಗೆ ನಾನು
 ಅರಿತಿರ್ದ ತತ್ತ್ವ ಸರಿಯೆಂದು ತೋರ್ದ
ಗೆಳೆಯ, ದೈವ.

೨೬