ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಗಾಖಾ ಪ್ರೇಮ ಗೀತ ಎಳೆಯ ದಿನ ಕಳೆದರೂ ಕೆಳೆ ಎಂದಿನಂತಿರಲಿ; ನಿನಗಾಗಿ ದಾರಿಯಲಿ ಕಾಯ್ದೆ, ನಾನು ; ಚೆಲುವ ಹೆಣ್ಣಳೊಳೆಲ್ಲ ಗೆಳತಿ ನೀ ಚೆಲುವಾದೆ; - ಅನುಮಾನವಿಲ್ಲ ಇದಕಿಲ್ಲ ಇನಿಸೂ ಜಡೆ ನೀಳವಾಗಿ ಹಿಮ್ಮಡಿಯ ಮುಟ್ಟಿದ್ದರೂ, ಹೆರಳು ಹಿರಿದೆಂದೆ ಮುಡಿದಿದ್ದರೂ, ಬಿಡಬೇಡ ಎನ್ನ ನೀ ; ಒಡನೆ ತೋಟಕೆ ಬಾರ; ಮರೆಯದಿರು ಎಳೆತನದ ಒಲುಮೆಗಳನು. ಬೆಳಕು ಹರಿಯುತಲಿರಲು ಕಾಯುವೆನು ನಿನಗಾಗಿ; ಉಳಿದ ಜನ ಸುಳಿವ ಹೊಲಮಾಳಗಳನು ಕಳೆದು ನಿನ್ನನು ದೂರ ಒಯ್ಯುವೆನು ; ಬರುವಂದು ಅಳಲುತೊಬ್ಬನೆ ಸೊರೊಳ ದಾರಿ ಹಿಡಿವೆ. ಬೇಸರುತ ನಾ ಬರುವೆ ; ಏಕಾಕಿಯಾಗಿರುವೆ; ನನ್ನ ಮನಸಿನ ನೋವ ನಿನಗೆ ಒರೆವೆ; ನೇಸರಿಳಿದಿಹನಿತ್ಯ, ಇತ್ಯ ಏರಿದ ಚಂದ್ರ); ಜೊನ್ನ ಮಳೆ ಕರೆಯುತಿದೆ ನನ್ನ ಮೇಲೆ; ನೆಲದ ಮೇಲಿರುವಂದು ಜೊತೆಯಾಗಿ ನಡೆಯಬಹ ಸೊಗದ ಸಮರ ನಡುದಾರಿಮೇಲೆ ; ಅಳಿದ ಮೇಲೆ ನಾವು ನಡೆಯಲಾಗದ ನಮ್ಮ ಬಗೆಗೊಂಡ ಚೆಲುವಾದ ಬೀದಿಮೇಲೆ. ೨.