ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ನೆಯ ಪ್ರಕರಣ ವಿಶ್ವದ ಉತ್ಪತ್ತಿ ನಾವು ಇಲ್ಲಿಯವರೆಗೆ ಜ್ಯೋತಿಶ್ಯಾಸ್ತ್ರದಲ್ಲಿ ವಾಡಿಕೆಯಾಗಿರುವ ಸೂರ್ಯ ಚಂದ್ರ ನಕ್ಷತ್ರಾದಿಗಳ ವಿಷಯವಾಗಿ ಹೇಳಿದೆವು. ಆದರೆ ಇವೆಲ್ಲ ಎಲ್ಲಿಂದ ಬಂದವು ? ವಿಶ್ವದಲ್ಲಿ ಮೊದಲು ನಕ್ಷತ್ರಗಳೆ ಇರಲಿಲ್ಲ. ಅಲ್ಲಲ್ಲಿ ಒಂದು ಪ್ರಕಾರದ ಅತಿವಿರಲವಾದ ಮಂಜಿನ ಗುಂಪುಗಳು ಅಧವಾ ಜ್ಯೋತಿರ್ಮೆಘ ಗಳು ಇದ್ದವು. ಇನ್ನೂ ಇಂಧವು ಎಷ್ಟೋ ಇರುವವು. ಈಗಿನ ದುರ್ಬಿನು ಗಳಲ್ಲಿಯೆ ಇಂಧ ೨ ಲಕ್ಷ ಜ್ಯೋತಿರ್ಮೆಘಗಳನ್ನು ಕಾಣಬಹುದು. ಈ ವೆ'ಘಗಳಲ್ಲಿ ಬರಬರುತ್ತ ಒಂದ ಪ್ರಕಾರದ ಜಾಗ್ರತಿಯು ಕಂಡುಬಂದಿತು. ಈ ಮೇಘಗಳ ಪರಮಾಣುಗಳು ಒಂದನ್ನೊಂದು ಜಗ್ಗ ಹತ್ತಲ ಒಂದು ಪ್ರಕಾರದ ಸುತ್ತುವಿಕೆಯು ಪ್ರಾರಂಭವಾಯಿತು. ಬಹಳ ದೂರದವರೆಗೆ ಹಬ್ಬಿದ ಇಂಧ ಮೇಘಗಳು ಸಂಕೋಚಹೊಂದಹತ್ತಿದವು. ಸಂಕೋಚ ಹೊಂದಿದಂತೆ, ಹೆಚ್ಚು ಹೆಚ್ಚು ಕಾಯಲಾರಂಭಿಸಿದವು ಮತ್ತು ಹೊಳೆಯ ಲಾರಂಭಿಸಿದವು. ಈ ತೇಜೋಮೇಘಗಳಿಂದಲೆ ನಕ್ಷತ್ರಗಳಾದವು. ಇನ್ನು ಈ ತೇಜೋಮೇಘಗಳು ಎಲ್ಲಿಂದ ಬಂದವೆಂಬುದನ್ನು ಯಾರೂ ಹೇಳ ಲಾರರು. ಹೀಗೆ ೧೯ನೆಯ ಶತಮಾನದ ಕೊನೆಯವರೆಗೆ ಪಾಶ್ಚಿಮಾತ್ಯರ ಮತವಿತ್ತು. ಆದರೆ ಇತ್ತೀಚೆಗೆ ಈ ವಿಷಯದಲ್ಲಿ ಅನೇಕರಿಗೆ ಸಂದೇಹ ವುಂಟಾಗಿದೆ. ಮತ್ತು ಈಗ ಅದಕ್ಕೆ ಬದಲು ಹೊಸದೊಂದು ಸಿದ್ಧಾಂತವು ಮುಂದೆ ಬಂದಿದೆ. ಆ ಸಿದ್ಧಾಂತದ ಮೇರೆಗೆ ಈ ತೇಜೋಮೇಘಗಳೆಂದರೆ ಉಲ್ಕೆಗಳ ರಾಶಿಗಳೆಂದೂ, ಅವು ಒಂದಕ್ಕೊಂದು ತಾಕಲಾಡುವುದರಿಂದ ಅವು ಕಾಯು ಹೊಳೆಯಲಾರಂಭಿಸ ತ್ಯವೆಂದೂ, ಅವೇ ತೇಜೋಮೇಘಗಳಾಗಿ ತೋರುತ್ತವೆಂದೂ ಹೇಳುತ್ತಾರೆ. ಎಂದರೆ ಉಿಗಳೇ ವಿಶ್ವದ ಉತ್ಪತ್ತಿಗೆ ಮೂಲಕಾರಣಗಳು. ಅದು ಹೇಗಿದ್ದರೂ ಮುಂದೆ ತೇಜೋವೆ'ಘಗಳಿಂದಲೆ ನಕ್ಷತ್ರಗಳಾದವೆಂದೂ ಆ ನಕ್ಷತ್ರಗಳಿಂದಲೆ ಗ್ರಹಗಳೂ ಉಪಗ್ರಹಗಳೂ ಉಂಟಾದವೆಂದೂ ನಿರ್ವಿವಾದವಾಗಿ ಹೇಳಬಹುದು.