ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ - ಈ ನಕ್ಷತ್ರಗಳು ಸೂರ್ಯನಂತೆ ಗರಗರನೆ ತಿರುಗುತ್ತವೆ. ಆಯಾ ನಕ್ಷತ್ರಗಳು ಆಯಾ ಸ್ಥಳದಲ್ಲಿ ಉಳಿಯುವುದಕ್ಕೆ ಆಕರ್ಷಣಶಕ್ತಿಯೆಂಬ ಅದೃಶ್ಯವಾದ ಶಕ್ತಿಯೇ ಕಾರಣವು. ತಂದೆ-ಮಕ್ಕಳು, ಗಂಡ-ಹೆಂಡಂದಿರು, ಬಂಧು-ಬಳಗದವರು ಇವರೆ ಮುಂತಾದವರು ಒಂದು ವಿಧವಾದ ಪ್ರೇಮ ಪಾಶದಿಂದ ಬದ್ಧರಾಗಿರುವುದಿಲ್ಲವೆ? ಈ ಪ್ರೇಮವೆಂಬ ಅದೃಶ್ಯವಾದ ಶಕ್ತಿಯ ಮೂಲಕವೇ ಅವರು ಒಬ್ಬರಿಂದೊಬ್ಬರು ಜಗ್ಗಲ್ಪಟ್ಟು ತಮ್ಮ ತಮ್ಮ ಸ್ಥಳದಲ್ಲಿ ಹೊಂದಿಕೊಂಡಿರುತ್ತಾರೆ. ಆಕಾಶದೊಳಗಿನ ಗ್ರಹ ನಕ್ಷತ್ರಾದಿ ಗಳೂ ತಮ್ಮ ತಮ್ಮ ಸ್ಥಳದಲ್ಲಿರುವುದಕ್ಕೆ ಕೂಡ ಇಂಥದೊಂದು ಅದೃಶ್ಯ ವಾದ ಆಕರ್ಷಕ ಶಕ್ತಿಯು ಕಾರಣವಾಗಿರುತ್ತದೆ. ಆ ಆಕರ್ಷಣಶಕ್ತಿಯ ಮೂಲಕವೆ ಸೂರ್ಯನ ಸುತ್ತಲ ಬುಧ, ಶುಕ್ರ, ಸೃದ್ಧಿ ಮುಂತಾದ ಗ್ರಹಗಳು ತಿರುಗುತ್ತಿರುತ್ತವೆ. ಸೂರ್ಯನು ಒಂದು ಜೇಡಹುಳವೆಂದು ತಿಳಿದರೆ ಅದರ ಸುತ್ತಲು ಹಬ್ಬಿರುವ ಜಾಳಿಗೆಯಲ್ಲಿ ಈ ಗ್ರಹಗಳು ಸಿಕ್ಕಿರುತ್ತ ವೆಂದೂ ಅವು ಆ ಜೇಡಹುಳದ ಸುತ್ತಲು ತಮ್ಮ ತಮ್ಮ ಎಳೆಗಳಲ್ಲಿ ತಿರುಗುತ್ತವೆಂದೂ ಹೇಳಬಹುದು. ಇಂಧ ವಿಶ್ವವು ಆಕಸ್ಮಿಕವಾಗಿ ಹುಟ್ಟಿರದೆ ಇದಕ್ಕೆ ಬೇರೊಬ್ಬ ಕರ್ತನಿರಬೇಕೆಂದು ತಿಳಿಯಬೇಕಾಗುವುದಲ್ಲವೆ?