ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧುನಿಕ ವೇಧಯಂತ್ರಗಳು - ೮೩ ಕುದುರೆಯ ಶರ್ಯತ್ತಿನಲ್ಲಾಗಲಿ ನಾಟಕಗೃಹಗಳಲ್ಲಾಗಲಿ ದೂರಿನ ಗುಡ್ಡ ಮುಂತಾದವುಗಳನ್ನು ನೋಡುವುದಕ್ಕಾಗಿ ಉಪಯೋಗಿಸಲ್ಪಡುವ ದುರ್ಬೀನುಗಳು ಇಂತಹ ಪ್ರಕಾರದ ಯಂತ್ರಗಳಾಗಿರುವವು. ನಿಜವಾಗಿ ಇವುಗಳಲ್ಲಿ ಕಣ್ಣಿಗೊಂದರಂತೆ ಎರಡು ಯಂತ್ರಗಳಿರುವವು. ಇವುಗಳಲ್ಲಿಯ ಸೂರ್ಯಕಾಂತಗಳಲ್ಲಿ ಪ್ರತಿಕೃತಿಯನ್ನು ಹುಟ್ಟಿಸುವ ಸೂರ್ಯಕಾಂತದ ವ್ಯಾಸವು ಸುಮಾರು ಒಂದು ಇಂಚು ಇರುವುದು, ಸೂಕ್ಷ್ಮದರ್ಶಕ ಸೂರ್ಯಕಾಂತವು ಇನ್ನೂ ಸಣ್ಣದಿರುವುದು, ಹೆಚ್ಚಾದರೆ ಒಂದೆರಡು ಮೈಲುಗಳ ಆಚೆಯಲ್ಲಿಯ ವಸ್ತುಗಳನ್ನೇ ನೋಡಬೇಕಾದುದರಿಂದ ಇಷ್ಟು ಆಕಾರದ ಸೂರ್ಯಕಾಂತಗಳು ಸಾಕಾಗುತ್ತವೆ. ಆಕಾಶದ ಕಡೆಗೆ ನೋಡುವಾಗ ಎಲ್ಲಕ್ಕೂ ಸವಿಾಪದ ವಸ್ತುವಾದ ಚಂದ್ರನು ನಮ್ಮಿಂದ ೨|| ಲಕ್ಷ ಮೈಲುಗಳ ಆಚೆಯಲ್ಲಿರುವನೆಂಬುದನ್ನು ನಾವು ನೆನಪಿನಲ್ಲಿಡಬೇಕಾಗಿದೆ. ಸೂರ್ಯನ ಅಂತರವು ೯ ಕೋಟಿ ಮೈಲುಗಳು, ನಕ್ಷತ್ರಗಳಂತೂ ಕಲ್ಪನಾತೀತವಾದ ಅಂತರದ ಆಚೆಯಲ್ಲಿರು ವವು. ಆದುದರಿಂದ ದೂರದರ್ಶಕಗಳು ದೊಡ್ಡವಿದ್ದಷ್ಟು ಒಳಿತೆಂಬುದು ಒಡೆದುಕಾಣುತ್ತದೆ. ಪ್ರತಿಕೃತಿಕಾರಕ ಸೂರ್ಯಕಾಂತವು ದೊಡ್ಡದಿದ್ದಂತೆ ಪ್ರತಿಕೃತಿಯು ದೊಡ್ಡದಾಗುತ್ತದೆ. ಹೆಚ್ಚು ತೇಜಸ್ವಿಯೂ ಆಗುತ್ತದೆ. ಮುಂದೆ ಹೆಚ್ಚು ಶಕ್ತಿಯುಳ್ಳ ಸೂಕ್ಷ್ಮದರ್ಶಕದಿಂದ ಇದನ್ನು ಬೇಕಾದಷ್ಟು ದೊಡ್ಡದಾಗಿ ಕಾಣುವಂತೆ ಮಾಡಬಹುದು. ಪ್ರತಿಕೃತಿಕಾರಕವನ್ನು ಸಣ್ಣದಾಗಿಟ್ಟು ಸೂಕ್ಷ್ಮದರ್ಶಕವನ್ನೆ ಬೆಳಿಸಿದರೆ ಸಾಕಷ್ಟು ಪ್ರಕಾಶವು ಬರದೆ ಗ್ರಹಾದಿಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಇಂತಹ ದೂರದರ್ಶಕಗಳನ್ನು ಮೊದಲು ಉಪಯೋಗಿಸಿದವನು ಗ್ಯಾಲಿಲಿಯೋನು. ಅವನ ಯಂತ್ರವು ತೀರ ಸಣ್ಣದು, ದುರ್ಬಿನುಗಳ ಕೊಳವಿಗಿಂತ ಸ್ವಲ್ಪ ದೊಡ್ಡದು ಆದರೂ ಅದರ ಸಹಾಯದಿಂದ ಅವನು ಚಂದ್ರನ ಮೇಲಿನ ಜ್ವಾಲಾಮುಖಿಗಳನ್ನೂ ಗುರುವಿನ ಉಪಗ್ರಹಗಳನ್ನೂ ಶುಕ್ರನ ಕಲೆಗಳನ್ನೂ ನೋಡಿದನು. ಅವನ ಕಾಲದಿಂದ ದೊಡ್ಡ ದೊಡ್ಡ ಯಂತ್ರಗಳನ್ನು ತಯಾರಿಸುವುದೊಂದು ಉದ್ಯೋಗವೆ ಆಗಿದೆ. ಇಂತಹ